ಗುರುವಾರದ ವೋಟಿಂಗ್ ರಿಸಲ್ಟ್ ಲೀಕ್..! ಎಲ್ಲರನ್ನ ಹಿಂದಿಕ್ಕಿ ಮೊದಲನೇ ಸ್ಥಾನದಲ್ಲಿರುವ ಸ್ಪರ್ಧಿ ಇವರೇ ನೋಡಿ..!

ಗುರುವಾರದ ವೋಟಿಂಗ್ ರಿಸಲ್ಟ್ ಲೀಕ್..! ಎಲ್ಲರನ್ನ ಹಿಂದಿಕ್ಕಿ ಮೊದಲನೇ ಸ್ಥಾನದಲ್ಲಿರುವ ಸ್ಪರ್ಧಿ ಇವರೇ ನೋಡಿ..!

ಕನ್ನಡ ಬಿಗ್ ಬಾಸ್ ಸೀಸನ್ 10 ಇನ್ನೇನು ಕೊನೆಯ ಕ್ಷಣಕ್ಕೆ ಬಂದು ನಿಂತಿದೆ. ಕೆಲವೆ ದಿನಗಳಲ್ಲಿ ಬಿಗ್ ಬಾಸ್ ಫಿನಾಲೆ ಕೂಡ ನಡೆಯಲಿದೆ ಗೆಳೆಯರೇ. ಹೌದು ಇದೇ ವಾರಂತ್ಯಕ್ಕೆ ಕಿಚ್ಚ ಸುದೀಪ್ ಫಿನಾಲೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈಗ ಒಟ್ಟು ಆರು ಜನರು ಮಾತ್ರ  ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದು ಟಫ್ ಕಾಂಪಿಟೇಶನ್ ಪ್ರತಿಯೊಬ್ಬರು ನೀಡುತ್ತಿದ್ದಾರೆ ಎಂದು ಹೇಳಬಹುದು. ಹೌದು ಹಲವರ ಅಭಿಪ್ರಾಯದ ಪ್ರಕಾರ ಬಿಗ್ಬಾಸ್ ಮನೆಯಲ್ಲಿ ಈ ಬಾರಿ ಈತನೇ ವಿನ್ ಎಂದು ಎಲ್ಲಾ ಕಡೆಯೂ ಕೇಳಿ ಬರುತ್ತಿಲ್ಲ.. ಬದಲಿಗೆ ಉಳಿದ ಆರು ಸ್ಪರ್ಧಿಗಳನ್ನ ಇಷ್ಟಪಡುವವರ ಲಿಸ್ಟ್ ಇದೆ. 

ಒಂದು ಕಡೆ ಕೆಲವೊಂದಿಷ್ಟು ಕೆಲವು ಪ್ರೇಕ್ಷಕರು ಕಾರ್ತಿಕ್ ಎಂದರೆ ಇಷ್ಟ ಅನ್ನುತ್ತಾರೆ. ಇನ್ನೊಂದಿಷ್ಟು ಜನರು ವಿನಯ್ ಎನ್ನುತ್ತಾರೆ. ಇನ್ನೊಂದಿಷ್ಟು ಜನರು ವರ್ತೂರು ಸಂತೋಷ್ ಎಂದು ಹೇಳುತ್ತಾರೆ. ಕೆಲವರು ಪ್ರತಾಪ್ ಮಾಡಿದ್ದು ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ತಪ್ಪು, ಆದ್ರೆ ಈಗ ಎಲ್ಲರ ಎದುರು ಕ್ಷಮೆ ಕೇಳಿದ್ದು ಸತ್ಯ ಹಾಗಾಗಿ ಅವರಿಗೆ ತಿದ್ದಿಕೊಳ್ಳಲು ಒಂದು ಅವಕಾಶವ ನೀಡಬೇಕು ಎಂದು ಅವರಿಗೂ ಕೂಡ ಅಪಾರವಾದ ಅಭಿಮಾನಿಗಳ ದಂಡೆ ಇದ್ದು ಹೆಚ್ಚು ಸಾಥ್ ನೀಡುತ್ತಿದೆ. 

ಸಂಗೀತ ಗೆದ್ದರೂ ಗೆಲ್ಲಬಹುದು ಎಂದು ಅವರನ್ನ ಸಹ ಇಷ್ಟ ಪಡುವ ಜನರಿದ್ದಾರೆ. ಹೀಗಿರುವಾಗ ಗುರುವಾರದ ಅಂತ್ಯಕ್ಕೆ ಈಗ ಬಿಗ್ಬಾಸ್ ವೋಟಿಂಗ್ ರಿಸಲ್ಟ್ ಬಂದಿದ್ದು ಇದು ಎಲ್ಲರಿಗೂ ಅಚ್ಚರಿ ಮೂಡಿಸುತ್ತದೆ ಎನ್ನಬಹುದು. ಅಸಲಿಗೆ ಯಾವ ಯಾವ ಸ್ಪರ್ದಿಗಳು ಎಷ್ಟು ಪರ್ಸೆಂಟ್ ವೋಟ್ ಅನ್ನು ಪಡೆದಿದ್ದಾರೆ ಗುರುವಾರದ ಹೊತ್ತಿಗೆ ಎನ್ನುವ ಮಾಹಿತಿಯನ್ನ ಈ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿದ್ದೇವೆ. ಹೌದು ಮೊದಲಿಗೆ ಆರನೇ ಸ್ಥಾನದಲ್ಲಿ ತುಕಾಲಿ ಸಂತೋಷ ಅವರು ಇದ್ದಾರೆ, ಸುಮಾರು 9.7% ನಷ್ಟು ಅಷ್ಟೇ ವೋಟುಗಳು ಇವರಿಗೆ ಬಂದಿವೆ. ಐದನೇ ಸ್ಥಾನದಲ್ಲಿ ವರ್ತೂರು ಅವರು ಇದ್ದು 16.1%  ವೋಟ್ಸ್ ಬಂದಿದ್ದು ಮೊದಲ ಸ್ಥಾನಕ್ಕೆ ಫೈಟ್ ಕೊಡುತ್ತಿದ್ದಾರೆ.  

ಹಾಗೆ ನಾಲ್ಕನೇ ಸ್ಥಾನದಲ್ಲಿ ವಿನಯ್ ಇದ್ದು, ಕೇವಲ 16.3% ವೋಟ್ ಗಳನ್ನು ಮಾತ್ರ ಪಡೆದುಕೊಂಡಿದ್ದಾರೆ ಎಂದು ಕೇಳಿ ಬಂದಿದೆ. ಹಾಗೆ ಮೂರನೇ ಸ್ಥಾನದಲ್ಲಿ 18.3% ವೋಟ್ಗಳನ್ನು ಪಡೆದಿದ್ದು ಸಂಗೀತ ಅವರು  ಮುಂಚೂಣಿಯಲ್ಲಿದ್ದಾರೆ..ಹಾಗೆ 19.4% ವೋಟ್ಗಳನ್ನು ಪಡೆದು ಕಾರ್ತಿಕ್ ಎರಡನೆ ಸ್ಥಾನದಲ್ಲಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ನಂಬರ್ ಒನ್ ಸ್ಥಾನದಲ್ಲಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಪ್ರತಾಪ್ ಬರೋಬ್ಬರಿ 20.4% ವೋಟ್ಗಳನ್ನು ಪಡೆದುಕೊಂಡು ಮೊದಲನೆಯ ಸ್ಥಾನದಲ್ಲಿ ಫೈಟ್ ಕೊಡುತ್ತಿದ್ದಾರೆ ಎಂದು ಕೇಳಿ ಬಂದಿದೆ. ಹೌದು ಓಟಿಂಗ್ ಪೋಲ್ ಇನ್ನೂ ಕೂಡ ಹಾಗೆಯೇ ಇದ್ದು, ಯಾವ ಸ್ಪರ್ಧಿ ಮೊದಲ ಸ್ಥಾನಕ್ಕೆ ಬಂದು ಯಾರು ವಿಜೇತ ಆಗುತ್ತಾರೆಂದು ಕಾದು ನೋಡಬೇಕು..

ನಿಮ್ಮ ಪ್ರಕಾರ ಯಾರು ಈ ಬಾರಿಯ ಬಿಗ್ ಬಾಸ್ ಸೀಸನ್ 10 ಕಿರೀಟವನ್ನು ಮುಡುಗೇರಿಸಿಕೊಳ್ಳಬೇಕು ಎಂದು ಕಾಮೆಂಟ್ ಮಾಡಿ, ಮಾಹಿತಿಯನ್ನು ಶೇರ್ ಮಾಡಿ, ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಸಹ ನೋಡಿ, ಧನ್ಯವಾದಗಳು...

( video credit : trending now )