ಬಿಗ್ ಬಾಸ್ ಸ್ಪರ್ಧಿಯ ಬಾಳಲ್ಲಿ‌ ಬಿರುಗಾಳಿ; ಡಿ ವೋರ್ಸ್ ಬಗ್ಗೆ ಚಿಂತನೆ! ಈ ಸ್ಪರ್ಧಿ ಯಾರು ಗೊತ್ತಾ?

ಬಿಗ್ ಬಾಸ್ ಸ್ಪರ್ಧಿಯ ಬಾಳಲ್ಲಿ‌ ಬಿರುಗಾಳಿ; ಡಿ ವೋರ್ಸ್ ಬಗ್ಗೆ ಚಿಂತನೆ! ಈ ಸ್ಪರ್ಧಿ ಯಾರು ಗೊತ್ತಾ?

ಸೆಲೆಬ್ರಿಟಿಗಳ ವಿಚ್ಛೇದನವು ಸಾಮಾನ್ಯ ವಿಷಯವಾಗಿದೆ. ಅದ್ರಲ್ಲೂ 2024 ಮದುವೆಯ ಆಮಂತ್ರಣಕ್ಕಿಂತ ಹೆಚ್ಚು ವಿಚ್ಛೇದನದ ಸುದ್ದೆಯೇ ಹೆಚ್ಚು ಎಂದು ಹೇಳಬಹುದು. ಇನ್ನು ಸೆಲೆಬ್ರಿಟಿಗಳ ವೈಯಕ್ತಿಕ ಜೀವನವು ಆಗಾಗ್ಗೆ ಸುದ್ದಿ ಮತ್ತು ಪಾಪರಾಜ್ಜಿಗಳಿಂದ ಬಹಳಷ್ಟು ಗಮನ ಸೆಳೆಯುತ್ತದೆ. ಸೆಲೆಬ್ರಿಟಿಗಳ ವಿಚ್ಛೇದನವು ದೊಡ್ಡ ಪ್ರಮಾಣದ ಆರ್ಥಿಕ ವ್ಯವಹಾರಗಳನ್ನು ಒಳಗೊಂಡಿರಬಹುದು, ಅದು ಸಾರ್ವಜನಿಕರ ಆಸಕ್ತಿಯನ್ನು ಹುಟ್ಟುಹಾಕುತ್ತದೆ. ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಕುರಿತಾಗಿ ಚರ್ಚೆಗಳು ಹೆಚ್ಚುತ್ತಿವೆ. ಸೆಲೆಬ್ರಿಟಿಗಳ ಜೀವನ ಶೈಲಿ ಮತ್ತು ವೃತ್ತಿ ಜೀವನವು ವಿಚ್ಛೇದನಕ್ಕೆ ದಾರಿ ಮಾಡಬಹುದು, ಏಕೆಂದರೆ ಅವುಗಳು ಒತ್ತಡವನ್ನು ಹೆಚ್ಚಿಸುತ್ತವೆ ಮತ್ತು ವೈಯಕ್ತಿಕ ಸಂಬಂಧಗಳನ್ನು ಕಗ್ಗತ್ತಲು ಮಾಡಬಹುದು.ಇವುಗಳಿಂದ ಸೆಲೆಬ್ರಿಟಿಗಳ ವಿಚ್ಛೇದನವು ನಿರಂತರವಾಗಿ ಗಮನ ಸೆಳೆಯುತ್ತದೆ ಮತ್ತು ಸುದ್ದಿಯಾಗುತ್ತದೆ.

ಇದೀಗ ಈ ಸಾಲಿಗೆ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ಕೊಡ ಸೇರ್ಪಡೆ ಆಗಿದ್ದಾರೆ. ರೇನೆ ಧ್ಯಾನಿ ಇತ್ತೀಚೆಗಷ್ಟೇ ತಮ್ಮ ಮದುವೆಯನ್ನು ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗವಾಗಿ ತಿಳಿಸಿದ್ದರು. ತಮ್ಮ ಮದುವೆ ಸಂಭ್ರಮದ ವಿಡಿಯೋ ಹಂಚಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ಫೋಟೋ ಜೊತೆಗೆ ತಿಳಿಸಿದ್ದರು. ಆದರೆ ಇದೀಗ ಮದುವೆಯಾದ  ಮರು ದಿನವೇ  ಈ ವಿಡಿಯೋ ಡಿಲೀಟ್ ಮಾಡುವ ಮೂಲಕ  ಇದೀಗ ಎಲ್ಲರಿಗೂ ಅನುಮಾನ ಹೆಚ್ಚಿಸಿದ್ದಾರೆ. ಆದರೆ ಡಿಲಿಟ್ ಮಾಡುವ ಹಿಂದಿನ ಕಾರಣ ಈ ವರೆಗೂ ಎಲ್ಲಿಯೋ ಬಹಿರಂಗವಾಗಿ ತಿಳಿಸಿಲ್ಲ.

ಇನ್ನೂ ಸಲ್ಮಾನ್ ಖಾನ್ ಸಾರಥ್ಯದಲ್ಲಿ ಹಿಂದಿ ಬಿಗ್‌ಬಾಸ್ 8ರಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ರೆನೆ ಧ್ಯಾನಿ ಜುಲೈ 5ರ ರಾತ್ರಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅವರ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದರು. ಇನ್‌ಸ್ಟಾಗ್ರಾಂ ಮೂಲಕ ಮದುವೆಯ ಸಂಭ್ರಮ ಹಂಚಿಕೊಂಡ ನಂತರ ಸಾಕಷ್ಟು ಶುಭಕೋರಿಕೆ ಕೊಡ ಹರಿದು ಬಂದಿತ್ತು. ಇದೀಗ  ಈ ವಿಡಿಯೋ ಡಿಲಿಟ್ ಮಾಡಿ ಸಂದೇಹ ಹರಡಿದ ಬಳಿಕ ಈಗ ಈಕೆ ಒಂದು ಸಂದೇಶವನ್ನು ನೀಡಿದ್ದಾರೆ. ಅದೇನೆಂದರೆ ಅನಾನುಕೂಲಕ್ಕಾಗಿ ಕ್ಷಮಿಸಿ, ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ. ಆದರೆ ಸರಿಯಾದ ಸಮಯದಲ್ಲಿ ಸರಿಯಾಗಿ ಮಾಹಿತಿ ನೀಡುತ್ತೇನೆ  ಎಂದು ತಿಳಿಸಿ ಇನ್ನಷ್ಟು ಗೊಂದಲ ಸೃಷ್ಟಿ ಮಾಡಿದ್ದಾರೆ.