ನಾಳೆಯ ಕಿಚ್ಚನ ಪಂಚಾಯ್ತಿಯಲ್ಲಿ ಇಬ್ಬರಿಗೆ ಬಿಗ್ ಮನೆಯಿಂದ ಗೇಟ್ ಪಾಸ್..! ಇವರೇ ಆ ಇಬ್ಬರು ಸ್ಪರ್ಧಿಗಳು

ನಾಳೆಯ ಕಿಚ್ಚನ ಪಂಚಾಯ್ತಿಯಲ್ಲಿ ಇಬ್ಬರಿಗೆ ಬಿಗ್ ಮನೆಯಿಂದ ಗೇಟ್ ಪಾಸ್..! ಇವರೇ ಆ ಇಬ್ಬರು ಸ್ಪರ್ಧಿಗಳು

ದೊಡ್ಮನೆಯ ಆಟ ಇದೀಗ ಮತ್ತೆ ರಂಗೇರಿದೆ. ಹೌದು ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಬಿಗ್ ಬಾಸ್ ಆರಂಭದಲ್ಲಿ ಗೆದ್ದು ಬೀಗಿದೆ ಎಂದು ಹೇಳಬಹುದು.. ಹೆಚ್ಚು ವೀಕ್ಷಕರು ಈ ಬಿಗ್ ಬಾಸ್ ನ ಪ್ರತಿ ಎಪಿಸೋಡ್ ನೋಡುತ್ತಾರೋ ಇಲ್ವೋ ಗೊತ್ತಿಲ್ಲ, ಆದರೆ ವಾರಾಂತ್ಯ ಕಿಚ್ಚನ ಮಾತುಗಳನ್ನು ಕೇಳಲು ಬಂದೆ ಬರುತ್ತಾರೆ..ಟಿ ಆರ್ ಪಿ ವಿಚಾರದಲ್ಲೂ ಕೂಡ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಹತ್ತನೇ ಸೀಸನ್ ಬಿಗ್ ಬಾಸ್ ಈ ಬಾರಿಯೂ ಕೂಡ ಗೆದ್ದಿದೆ.. ಪ್ರತಿ ಬಾರಿಯಂತೆ ಕೆಲವು ಭಿನ್ನ ವಿಭಿನ್ನ ಕ್ಯಾರೆಕ್ಟರ್ ಗಳ ಸ್ಪರ್ಧಿಗಳು ಈ ಬಾರಿಯೂ ಕೂಡ ಬಿಗ್ ಮನೆಯೊಳಗೆ ಸೇರಿದ್ದಾರೆ.  

ಇದೀಗ ಐದನೇ ವಾರಕ್ಕೆ ಬಿಗ್ ಬಾಸ್ ಬಂದು ನಿಂತಿದೆ. ಮನೆಯಿಂದ ಹೊರ ಹೋಗಲು ವಿನಯ್, ನಮೃತ, ನೀತು, ತುಕಾಲಿ ಸಂತು, ಕಾರ್ತಿಕ್, ತನಿಷಾ ಹಾಗೂ ಬಾಗ್ಯಶ್ರಿ ಅವರು ನಾಮಿನೇಟ್ ಆಗಿದ್ದಾರೆ.. ಈ ವಾರ ಯಾರು ಮನೆಯಿಂದ ಹೊರ ಹೋಗುತ್ತಾರೆಂದು ಬಿಗ್ ಬಾಸ್ ವೀಕ್ಷಕರಲ್ಲಿ ಹೆಚ್ಚು ಕಾತುರ ಸ್ಟಾರ್ಟ್ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ಮೂರನೇ ವಾರ ದಸರಾ ಪ್ರಯುಕ್ತ ಸೇವ್ ಆಗಿದ್ದ ಭಾಗ್ಯಶ್ರೀ ಅವರು ನಾಲ್ಕನೇ ವಾರ ಪ್ರತಾಪ್ ನೀಡಿದ ಸೇವ್ ಭಾಗ್ಯದಿಂದ ಭಾಗ್ಯಶ್ರೀ ಅವರು ಮತ್ತೊಮ್ಮೆ ಸೇವಾದರು. ಕಳೆದ ವಾರ ವರ್ತೂರು ಸೇಫ್ ಆದರೂ ಕೂಡ ಮನೆಯಿಂದ ಹೊರ ಹೋಗುತ್ತೇನೆ ಎನ್ನುವ ಅವರ ನಿರ್ಧಾರದ ಕುರಿತಾಗಿ ಕಿಚ್ಚ ಬೇಸರಗೊಂಡು,, ಯಾವ ಎಲಿಮಿನೇಷನ್ ಮಾಡದೆ ಹೊರ ನಡೆದದ್ದ ನೀವು ಕೂಡ ಅವತ್ತು ನೋಡಿದ್ದೀರಿ..

ಇದೆಲ್ಲದರ ಕುರಿತು ಈ ವಾರ ಡಬಲ್ ಎಲಿಮಿನೇಷನ್ ಇದೆ ಎಂದು ವರದಿಗಳ ಮೂಲಕ ತಿಳಿದು ಬಂದಿದೆ ಗೆಳೆಯರೇ..ಟಾಸ್ಕ್ ಗಳಲ್ಲಿ ಹಾಗೂ ಮನೆಯೊಳಗಿನ ಉಳಿವಿಕೆಗಾಗಿ ಎಲ್ಲರೂ ಕೂಡ ತುಂಬಾನೇ ಚೆನ್ನಾಗಿ ಆಟ ಆಡುತ್ತಿದ್ದಾರೆ. ಆದರೆ ಭಾಗ್ಯಶ್ರೀ ಅವರೇ ಈ ವಾರ ಬಿಗ್ ಮನೆಯಿಂದ ಹೊರ ಹೋಗುವ ಸಾಧ್ಯತೆಯೇ ಹೆಚ್ಚಿದೆಯಂತೆ..ಜೊತೆಗೆ ನೀತುಗೆ ಕಂಪೇರ್ ಮಾಡಿದರೆ ಇಶಾನಿ ಕೂಡ ತುಂಬಾನೇ ವೀಕ್ ಆಗಿದ್ದಾಳೆ. ಹಾಗಾಗಿ ಇಶಾನಿ ಮತ್ತು ಭಾಗ್ಯಶ್ರೀ ಅವರು ಈ ವಾರ ಬಿಗ್ ಬಾಸ್ ಮನೆಯಿಂದ ಗೇಟ್ ಪಾಸ್ ಆಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ..ಈ ಮಾಹಿತಿ ಬಗ್ಗೆನೇ ಅಭಿಪ್ರಾಯ ತಿಳಿಸಿ,, ಹಾಗೇನೇ ಈ ವಾರ ಬಿಗ್ ಬಾಸ್ ಮನೆಯಿಂದ ಯಾವ ಸ್ಪರ್ಧಿಗಳು ನಿಮಗೆ ಹೊರ ಹೋಗಬೇಕು ಎಂಬುದಾಗಿ ಕಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು....