ಲಿಪ್ ಕಿಸ್ ಮಾಡುವುದರಿಂದ ಎಂತಹ ರೋಗಗಳು ಬರುತ್ತವೆ ಗೊತ್ತಾ? ಹುಷಾರಾಗಿರಿ

ನಿಮ್ಮ ತುಟಿಗಳಿಂದ ಯಾರನ್ನಾದರೂ ಚುಂಬಿಸುವುದು ಕೇವಲ ಪ್ರೀತಿಯನ್ನು ತೋರಿಸುವ ಮೋಜಿನ ಮಾರ್ಗವಾಗಿದೆ. ಚುಂಬನವು ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ, ಭಾವನಾತ್ಮಕ ಬಂಧವನ್ನು ಉತ್ತೇಜಿಸುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ಪ್ರೇಮಿಗಳು ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸುವುದಕ್ಕೆ ಒಂದು ವಿಧಾನ ಎಂದರೆ ಕಿಸ್ ಮಾಡುವುದು . ಅದು ಅವರ ಸಂಬಂಧಗಳನ್ನು ಬಲ ಗೊಳಿಸಲು ಸಹಾಯ ಮಾಡುತ್ತದೆ . ಆದರೆ ಲಿಪ್ ಕಿಸ್ ಮಾಡುವುದರಿಂದ ಕೆಲವು ರೋಗಗಳು ಬರುತ್ತವೆ ಎಂದರೆ ನೀವು ನಂಬುತ್ತೀರಾ . ಆದರೆ ಇದು ಸತ್ಯ ಅನೇಕ ಸಂಶೋಧನೆಗಳನ್ನು ಮಾಡಿದ ನಂತರ ಇದನ್ನು ದೃಢ ಪಡಿಸಿದ್ದಾರೆ .
ನಿಮಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ, ಸಂಗಾತಿಯ ತುಟಿಗೆ ಕೊಡುವ ಕಿಸ್ ಅಥವಾ ಮುತ್ತಿನಿಂದಾಗಿ, ಕೆಲವೊಂದು ವೈರಸ್ ಅಥವಾ ಬ್ಯಾಕ್ಟೀರಿಯಾಗಳು, ನಿಮ್ಮ ದೇಹದೊಳಗೆ ಪ್ರವೇಶಿಸಿ, ಸೋಂಕು ಉಂಟು ಮಾಡುವ ಅಪಾಯ ಹೆಚ್ಚಿರುತ್ತದೆ! ಲಿಪ್ ಕಿಸ್ ಮಾಡುವುದರಿಂದ ಯಾವೆಲ್ಲ ರೋಗಗಳು ಬರುತ್ತವೆ ಎಂದು ಇಲ್ಲಿದೆ ನೋಡಿ
ಹರ್ಪಿಸ್ ಎನ್ನುವ ಖತರ್ನಾಕ್ ವೈರಸ್!
ಒಬ್ಬರಿಂದ ಬಬ್ಬರಿಗೆ ವೇಗವಾಗಿ ಹರಡುವ ಈ ಕಾಯಿಲೆ, ತುಂಬಾನೇ ಡೇಂಜರ್! ಅದರಲ್ಲೂ ಸಂಗಾತಿ ಗಳು ಒಬ್ಬರಿಗೊಬ್ಬರು, ಮುತ್ತು ಕೊಡುವಾಗ ಬಾಯಿಯ ಎಂಜಲಿನ ಮೂಲಕ, ಸುಲಭವಾಗಿ ಹರಡು ತ್ತದೆಯಂತೆ! Herpes simplex virus 1 ಎಂಬ ವೈರಸ್ ಈ ಕಾಯಿಲೆಯ ಮಾಸ್ಟರ್ ಮೈಂಡ್ ಎಂದು ಕರೆಯಲಾಗುತ್ತದೆ. ಇನ್ನೂ ಆತಂಕಕಾರಿ ಸಂಗತಿ ಏನಂದರೆ, ಲೈಂಗಿಕ ತಜ್ಞರು ಹೇಳುವ ಪ್ರಕಾರ, ಎಷ್ಟೋ ಜನರಲ್ಲಿ ಈ ಕಾಯಿಲೆಯ ಯಾವುದೇ ರೋಗಲಕ್ಷಣಗಳು ಕಂಡು ಬರುವುದೇ ಇಲ್ಲವಂತೆ!
ಸೈಟೊಮೆಗಾಲೊವೈರಸ್ (Cytomegalovirus)
ಈ ವೈರಸ್ ಸೋಂಕು ಕೂಡ ಅಷ್ಟೇ, ಸಂಗಾತಿಗೆ ಲಿಪ್ ಕಿಸ್ ಮಾಡುವುದರಿಂದ, ಎಂಜಲಿನ ಮುಖಾಂ ತರ ಬಹಳ ವೇಗವಾಗಿ, ಒಬ್ಬರಿಂದ ಒಬ್ಬರಿಗೆ ಬಹಳ ವೇಗವಾಗಿ ಹರಡುತ್ತದೆಯಂತೆ!
ಸಿಫಿಲಿಸ್ ಅಥವಾ Syphilis
ಬಾಯಿಯ ಮೂಲಕ ಲೈಂಗಿಕ ಸಂಪರ್ಕದ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವ ಖತರ್ನಾಕ್ ವೈರಸ್ ಸೊಂಕು! ಇದರ ರೋಗಲಕ್ಷಣಗಳನ್ನು ನೋಡುವುದಾದರೆ, ಸಣ್ಣಗೆ ಜ್ವರ ಕಾಣಿಸಿಕೊಳ್ಳು ವುದು, ಆಗಾಗಾ ತಲೆ ನೋವು, ಗಂಟಲು ನೋವು, ಮೈಕೈ ನೋವು, ಕೂದಲು ಉದುರುವ ಸಮಸ್ಯೆ ಎದುರಾಗುವುದು, ( video credit :Health Tips in Kannada )