ಚಲಿಸುವ ಬೈಕ್‌ನಲ್ಲಿ ರೋಮ್ಯಾನ್ಸ್ ಮಾಡಿದ ಜೋಡಿಗೆ ಬಿತ್ತು ಬಾರಿ ದಂಡ ಎಷ್ಟು ನೋಡಿ ; ವಿಡಿಯೋ ವೈರಲ್
ಈಗಿನ ಕಾಲದ ಹುಡುಗ ಮತ್ತು ಹುಡುಗಿಯರಿಗೆ ಸ್ವಲ್ಪವಾದರೂ ನಾಚಿಕೆ ಎನ್ನುವುದು ಇಲ್ಲ ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಯುವ ಪೀಳಿಗೆ ಸಂಪೂರ್ಣವಾಗಿ ಮುಳುಗಿ ಹೋಗಿದೆ ಎಂದರೆ ತಪ್ಪಾಗುವುದಿಲ್ಲ. ಊಟ ನಿದ್ದೆ ಎಲ್ಲವನ್ನೂ ಬಿಟ್ಟು ಬೇಕಾದರೆ ಇರುತ್ತಾರೆ, ಆದರೆ ಒಂದು ನಿಮಿಷ ಸಹ ತಮ್ಮ ಮೊಬೈಲ್ ಅನ್ನು ಬಿಟ್ಟು ಇರಲು ಸಾಧ್ಯವಾಗುವುದಿಲ್ಲ. ಇನ್ನು ನಮ್ಮ ಯುವ ಪ್ರೀಮಿಗಳಿಗೆ ಸಾಮಾಜಿಕ ಜಾಲತಾಣಗಳು ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದೆ ಎಂದರೆ ತಪ್ಪಾಗುವುದಿಲ್ಲ.
ಉತ್ತರ ಪ್ರದೇಶದ ಹಾಪುರ್‌ನಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಸುರಕ್ಷತೆ ಮತ್ತು ನಿಯಮಗಳನ್ನು ಗಾಳಿಗೆ ತೂರಿ ಜೋಡಿ ಪ್ರಣಯದಲ್ಲಿ ಮುಳುಗಿದ್ದು, ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಬೈಕ್ ಸವಾರಿ ಮಾಡುವಾಗ ದಂಪತಿಗಳು ಪರಸ್ಪರ ಆಲಿಂಗನದಲ್ಲಿ ತೊಡಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೆ ಅಜಾಗರೂಕ ಬೈಕ್ ರೈಡ್, ಹೆಲ್ಮೆಟ್ ಧರಿಸದೆ ರಸ್ತೆ ಸುರಕ್ಷತೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
ಸಧ್ಯ ಯುವ ಜೋಡಿಯೊಂದು ಬೈಕ್‌ನ್ನು ವೇಗವಾಗಿ ಚಲಿಸುತ್ತ, ಪ್ರಣಯದಲ್ಲಿ ಮುಳುಗಿದ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ.ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಜೋಡಿಯ ವಿರುದ್ಧ ಶೀಘ್ರ ಮತ್ತು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಸಿಂಬೋಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವೈರಲ್ ವೀಡಿಯೊಗೆ ಪ್ರತಿಕ್ರಿಯೆಯಾಗಿ, ಹಾಪುರ್ ಪೊಲೀಸರು ಜೋಡಿಗೆ ಭಾರಿ ದಂಡವನ್ನು ವಿಧಿಸುವ ಮೂಲಕ ತಕ್ಷಣ ಕ್ರಮ ಕೈಗೊಂಡಿದ್ದಾರೆ. ವರದಿಗಳ ಪ್ರಕಾರ, ಮೋಟಾರು ವಾಹನ ಕಾಯ್ದೆಯಡಿ ಬೈಕ್ ಸವಾರನಿಗೆ ರೂ 8,000 ದಂಡ ವಿಧಿಸಲಾಗಿದೆ
#Hapur वाह क्या सीन है, वीडियो NH 9 की थाना सिंभावली की है। बाइक पर आगे बैठा स्पाइडर वीमेन लग रही है, बाकी ट्रैफिक नियमो का क्या? वो तो चलते रहेंगे। @hapurpolice @uptrafficpolice pic.twitter.com/0JE5uqF7W1
— ram ji (@Ramji11122) October 10, 2023




