ಕೆಟ್ಟ ಕಾಮೆಂಟ್ಸ್ ಹಾಕುವವರಿಗೆ ಬಿಗ್ ಶಾಕ್ ಕೊಟ್ಟ ಜ್ಯೋತಿ ರೈ!! ನೋಡಿದರೆ ನೀವು ಶಾಕ್ ಆಗುತ್ತೀರಾ ?

ಜ್ಯೋತಿ ರೈ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ . ಸದಾ ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಆಗಿ ಫೋಟೋ ಅಪ್ಲೋಡ್ ಮಾಡುವ ಈ ನಾಟಿಗೆ ಅನೇಕ ಫ್ಯಾನ್ಸ್ ಇದ್ದಾರೆ . ಆದರೆ ಇವರು ಈ ರೀತಿ ಶಾರ್ಟ್ ಆಗಿ ಬಟ್ಟೆ ಹಾಕುವದಕ್ಕೆ ಅನೇಕ ಜನರು ಈಕೆಗೆ ಕೆಟ್ಟದಾಗಿ ಕಾಮೆಂಟ್ಸ್ ಹಾಕುತ್ತಿದ್ದರು
ಹೌದು, 'ಅನುರಾಗ ಸಂಗಮ', 'ಜೋಗುಳ', 'ಗೆಜ್ಜೆಪೂಜೆ', 'ಲವಲವಿಕೆ', 'ಕನ್ಯಾದಾನ', 'ಗೆಜ್ಜೆಪೂಜೆ', 'ಪ್ರೇರಣಾ', 'ಕಿನ್ನರಿ', 'ಮೂರು ಗಂಟು', 'ಕಸ್ತೂರಿ ನಿವಾಸ' ಸೇರಿ 18ಕ್ಕೂ ಹೆಚ್ಚು ಕನ್ನಡದ ಧಾರಾವಾಹಿಯ ಮೂಲಕ ಕನ್ನಡಿಗರ ಹೃದಯವನ್ನೂ ಗೆದ್ದು, ಸದ್ಯ ಆಂಧ್ರದಲ್ಲಿ ಪುರಸೊತ್ತಿಲ್ಲದ ಬದುಕಿನಲ್ಲಿ ಕಳೆದು ಹೋಗಿರುವ ಜ್ಯೋತಿ ರೈ ಸದ್ಯಕ್ಕೆ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ತೀರಾ ಅಶ್ಲೀಲವಾಗಿ ಸಂದೇಶ ಕಳಿಸುತ್ತಿದ್ದ 1000ಕ್ಕೂ ಹೆಚ್ಚಿನ ಅಕೌಂಟ್‌ಗಳನ್ನು ಬ್ಲಾಕ್ ಮಾಡಿರುವುದಾಗಿ ಹೇಳಿದ್ದಾರೆ.
ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ದಿನಕ್ಕೊಂದರಂತೆ ಹೊಸ ಹೊಸ ಪೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇವುಗಳಿಗೆ ಭಿನ್ನ ಭಿನ್ನ ಕಾಮೆಂಟ್‌ಗಳು ಕೂಡ ಬರುತ್ತಿವೆ. ಅದರಲ್ಲಿ ಹೆಚ್ಚಿನವು ಜ್ಯೋತಿ ರೈ ಬ್ಯೂಟಿ ಬಗ್ಗೆ ಕಾಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಅಶ್ಲೀಲ ಕಾಮೆಂಟ್ ಮಾಡಿದ್ದರು.
ಲ ತಿಂಗಳ ಹಿಂದೆ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದರಿಂದ ಕೊಂಚ ಇರಿಸುಮುರಿಸುಗೆ ಒಳಗಾಗಿದ್ದ ಕನ್ನಡದ ಪ್ರಖ್ಯಾತ ಕಿರುತೆರೆ ನಟಿ, ಬಳಿಕ ಈ ವಿಚಾರವಾಗಿ ಸೈಬರ್ ಕ್ರೈಮ್‌ಗೆ ದೂರು ಕೂಡ ನೀಡಿದ್ದರು.
ತಮ್ಮ ಪ್ರೊಫೈಲ್‌ಗೆ ಬರುತ್ತಿದ್ದ ಅಶ್ಲೀಲ ಹಾಗೂ ಕೆಟ್ಟ ಮೆಸೇಜ್‌ಗಳಿಂದ ಹೈರಾಣಾಗಿದ್ದ ಜ್ಯೋತಿ ರೈ ದೊಡ್ಡ ನಿರ್ಧಾರ ಮಾಡಿದ್ದಾರೆ. ಹಾಗಂತ ಅವರು ಯಾವುದೇ ಸೈಬರ್ ಕ್ರೈಮ್‌ಗೆ ದೂರು ಕೊಟ್ಟಿಲ್ಲ. ಹಾಗಂತ ತಮ್ಮ ಪತಿಗೆ ಹೇಳಿ ಕೆಟ್ಟ ಮೆಸೇಜ್ ಮಾಡೋ ವ್ಯಕ್ತಿಯನ್ನ ಶೆಡ್‌ಗೆ ಕೂಡ ಕರೆಸಿಲ್ಲ. ಇನ್ಸ್‌ಟಾಗ್ರಾಮ್‌ನ ಬ್ಲಾಕ್ ಫೀಚರ್‌ಅನ್ನು ಅವರು ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತಾಗಿ ಅವರು ಇನ್ಸ್‌ಟಾಗ್ರಾಮ್ ಸ್ಟೋರಿಯಲ್ಲೇ ಮಾಹಿತಿ ನೀಡಿದ್ದಾರೆ. 'ಇನ್ಸ್‌ಟಾಗ್ರಾಮ್‌ನ ಬ್ಲಾಕ್ ಫೀಚರ್‌ಅನ್ನು ನಾನು ಉತ್ತಮವಾಗಿ ಬಳಸಿಕೊಂಡಿದ್ದೇನೆ. ಕಾಮೆಂಟ್ ಸೆಕ್ಷನ್‌ನಲ್ಲಿ ಕೆಟ್ಟ ಹಾಗೂ ಅಗೌರವದಿಂದ ಮೆಸೇಜ್ ಮಾಡುವ ಮೂಲಕ ಕೆಟ್ಟ ವರ್ತನೆ ತೋರಿದ್ದ 1 ಸಾವಿರಕ್ಕೂ ಅಧಿಕ ವೈಯಕ್ತಿಕ ಖಾತೆಗಳನ್ನು ನಾನು ತೆಗೆದುಹಾಕಿದ್ದೇನೆ. ಅವರೊಂದಿಗೆ ಮಾತುಕತೆ ಮಾಡುವ ಮೂಲಕ ಚರ್ಚೆ ಮಾಡೋದು ನನಗೆ ಇಷ್ಟವಿಲ್ಲ. ಧನಾತ್ಮಕ ಪರಿಸರವನ್ನು ರಚನೆ ಮಾಡಲು ನೀವೂ ಕೂಡ ಇಂಥ ಟೂಲ್‌ಗಳನ್ನು ಬಳಕೆ ಮಾಡಿ. ಈ ವಿಚಾರದಲ್ಲಿ ಯಾರಾದರೂ ಕಲಿಯಬೇಕು ಎಂದಿದ್ದರೆ, ಅದಕ್ಕೆ ನಾನು ಸ್ವಾಗತ ನೀಡುತ್ತಿದ್ದೇನೆ..' ಎಂದು ಅವರು ಬರೆದುಕೊಂಡಿದ್ದಾರೆ.
ಅಂದು ದರ್ಶನ್ ಅವರ ಗೆಳತಿ ಪವಿತ್ರಾ ಗೌಡ, ತನ್ನ ಪೋಸ್ಟ್‌ಗಳಿಗೆ ನಿರಂತರವಾಗಿ ಕೆಟ್ಟ ಕಾಮೆಂಟ್ ಮಾಡ್ತಿದ್ದ ರೇಣುಕಾಸ್ವಾಮಿಯ ಅಕೌಂಟ್‌ಅನ್ನು ಈ ಬ್ಲಾಕ್ ಫೀಚರ್ ಬಳಸಿಕೊಂಡು ಬ್ಲಾಕ್ ಮಾಡಿದ್ದರೆ ಅಥವಾ ಪೊಲೀಸರಿಗೆ ಸೂಕ್ತವಾಗಿ ಮಾಹಿತಿ ತಿಳಿಸಿದ್ದರೆ, ಇಂದು ಇಂತ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ.
