ಚಿಕಿತ್ಸೆ ಫಲಕಾರಿ ಆಗದೆ ಇಹ ಲೋಕ ತ್ಯಜಿಸಿದ ಕೆ ಶಿವರಾಂ! ಇವರಿಗೆ ಏನಾಗಿತ್ತು ಗೊತ್ತಾ?

ಚಿಕಿತ್ಸೆ ಫಲಕಾರಿ ಆಗದೆ ಇಹ ಲೋಕ ತ್ಯಜಿಸಿದ ಕೆ ಶಿವರಾಂ! ಇವರಿಗೆ ಏನಾಗಿತ್ತು ಗೊತ್ತಾ?

ಒಂದು ಇಂಜೆಕ್ಷನ್ ಗೆ 15ಲಕ್ಷ ಖರ್ಚು ಮಾಡಿದ್ದರು ಕೊಡ ಉಳಿಸಲು ಆಗಲಿಲ್ಲ! ಶಿವರಾಂ ಅವರಿಗೆ ಇದ್ದ ಕಾಯಿಲೆ ಯಾವುದು ಗೊತ್ತಾ?

ಇನ್ನೂ ಕೆ ಶಿವರಾಂ ಎಂದ ಕೂಡಲೇ ನಾನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ ಹಾಗೂ ಕನ್ನಡದಲ್ಲಿ ಮೊದಲ ಬಾರಿಗೆ IAS ಪರಿಕ್ಷೆ ಬರೆದು 
ಉತ್ತಿರಣ ಪಡೆದ ವ್ಯಕ್ತಿ ಎಂದು ನೆನಪಿಗೆ ಬರುತ್ತದೆ ಎಂದು ಹೇಳಬಹುದು. ಇನ್ನೂ ಇವರು ಹುಟ್ಟಿದ್ದು 1953 ಏಪ್ರಿಲ್ 6 ರಾಮನಗರದಲ್ಲಿ. ಇವರ ತಂದೆ ಎಸ್ ಕೆಂಪಯ್ಯ ಇವರು ಕೊಡ ರಾಮನಗರದಲ್ಲಿ ಪ್ರತಿಭಾವಂತ ಡ್ರಾಮಾ ಮಾಸ್ಟರ್ ಆಗಿ ಕೆಲ್ಸ ನಿರ್ವಹಣೆ ಮಾಡುತ್ತಾ ಇದ್ದವರು ಇವರ ತಾಯಿ ಚಿಕ್ಕ ಬೋರಮ್ಮ. ಇವರ ಎಲ್ಲಾ ಶಿಕ್ಷಣವನ್ನು ರಾಮನಗರದ ಜಿಲ್ಲೆಯಲ್ಲಿ ಇರುವ ಊರಗನ ಹಳ್ಳಿಯಲ್ಲಿ ಪಡೆಯುತ್ತಾರೆ. ಚಿಕ್ಕ ವಯಸ್ಸಿನಿಂದಲೂ ಸರ್ಕಾರಿ ನೌಕರ ಆಗಬೇಕು ಎಂದು ಆಸೆ ಪಟ್ಟ ಇವರು ಆ ಕಾಲದಲ್ಲಿ ಟೈಪಿಂಗ್ ಹಾಗೂ ಶಾರ್ಟ್ ಹ್ಯಾಂಡ್ ಕಲಿಯುತ್ತಾರೆ.

ಸತತವಾಗಿ ಸರ್ಕಾರಿ ನೌಕರಿಗೆ ಪ್ರಯತ್ನ ಪಡೆಯುತ್ತಿದ್ದ ಇವರಿಗೆ 1973ರಲ್ಲಿ ಗುಪ್ತ ಚರ ಇಲಾಖೆಯಲ್ಲಿ ಪೊಲೀಸ್ ಆಗಿ ಆಯ್ಕೆ ಆಗುತ್ತಾರೆ. ನಂತರ 1985 ನಲ್ಲಿ ಕನ್ನಡದಲ್ಲಿ KAS ಪರಿಕ್ಷೆ ಬರೆದು ಉತ್ತೀರ್ಣ ಆಗಿ  ಬಲಿಷ್ಠ  ಅಧಿಕಾರಿ ಆಗುತ್ತಾರೆ. 1996 ರಲ್ಲೇ ಪರಿಶಿಷ್ಟ ಜಾತಿ ಸೇವಾ ಸಮುದಾಯದಲ್ಲಿ ಮೊದಲ ರಾಂಕ್ ಪಡೆದು ಕಮಿಷನರ್ ಆಗುತ್ತಾರೆ. ಇನ್ನೂ ಭಾರತದ ಮೊದಲ ವ್ಯಕ್ತಿ IAS ಪರೀಕ್ಷೆಯನ್ನು ಬರೆದು ಉತ್ತೀರ್ಣ ಆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಇವರದ್ದು. ಇನ್ನೂ ನಿವೃತ್ತಿಯ ನಂತರ ಅಂದ್ರೆ 2013 ರಿಂದ 2019ರ ವರೆಗೂ ರಾಜಕೀಯದಲ್ಲಿ ಕೊಡ ಸೇವೆ ಸಲ್ಲಿಸಿದ್ದಾರೆ.   

ಇದೆಲ್ಲದರ ಜೊತೆಗೆ ಸಿನಿಮಾ ರಂಗದಲ್ಲಿ ಕೊಡ ನಟನಾಗಿ ನಿರ್ಮಾಪಕನಾಗಿ ಸೇವೆ ಸಲ್ಲಿಸಿ ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಡ ನೀಡಿದ್ದಾರೆ ಎಂದು ಹೇಳಬಹುದು ಅವರು 'ವಸಂತ ಕಾವ್ಯ', 'ಸಾಂಗ್ಲಿಯಾನ ಭಾಗ 3,' 'ಪ್ರತಿಭಟನೆ,' 'ಯಾರಿಗೆ ಬೇಡ ದುಡ್ಡು,' 'ಪ್ರೀತಿಗಾಗಿ ಆಟ,' ಸೇರಿದಂತೆ ಇತರ ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಅವರ ಇತ್ತೀಚಿನ ಚಿತ್ರ 2017 ರಲ್ಲಿ 'ಟೈಗರ್.' ಮತ್ತು ಬಾ ನಲ್ಲೆ ಮಧುಚಂದ್ರಕೆ . ಆದ್ರೆ ಆರೋಗ್ಯ ಸಮಸ್ಯೆಯಿಂದ ರಾಜಕೀಯ ಹಾಗೂ ಸಿನಿಮಾ ರಂಗದಿಂದ ದೂರ ಉಳಿಯುತ್ತಾರೆ. ಇನ್ನೂ 20ದಿನಗಳ ಹಿಂದೆ ರಕ್ತದ ಒತ್ತಡದಿಂದ ಆಸ್ಪತ್ರೆಗೆ ಸೇರ್ಪಡೆ  ಆದ ಶಿವರಾಂ ಸತತ 20ದಿನಗಳ ಕಾಲ ಚಿಕಿತ್ಸೆಯನ್ನು ಪಡೆಯುತ್ತಾ ಬರುತ್ತಿದ್ದರು. ಇನ್ನೂ ಇವ್ರ ಕಾರ್ಡಿಯಾಕ್ ಹಾಗೂ ಮಲ್ಟಿಪಲ್ ಅರ್ಗನ್ ಫೇಲ್ಯೂರ್ ತಡೆಗಟ್ಟಲು ಒಂದು ಇಂಜೆಕ್ಸ್ಯನ್ ಗೆ 15ಲಕ್ಷ ಕೊಡ ಕರ್ಚು ಮಾಡಲಾಗಿತ್ತು. ಆದ್ರೆ ಇಂದು ಈ ಯಾವ ಚಿಕಿತ್ಸೆಯೂ ಫಲಕಾರಿ ಆಗದೆ ಕೆ ಶಿವರಾಂ ಅವರು ಕೊನೆ ಉಸಿರು ಎಳೆದಿದ್ದಾರೆ. ಇನ್ನೂ ನಮ್ಮ ಕರ್ನಾಟಕಕ್ಕೆ ಅಪಾರ ಸೇವೆ ಸಲ್ಲಿಸಿರುವ ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ಆಶಿಸೋಣ.