ಸ್ಯಾಂಡಲ್‌ವುಡ್‌ ನಟಿ ಪ್ರೇಮಾ ಪತಿ ಯಾರು ಗೊತ್ತಾ? ಡಿವೋರ್ಸ್‌ ಮಾಡಿಕೊಂಡಿದ್ದು ಇದೇ ಕಾರಣಕ್ಕೆ!!

ಸ್ಯಾಂಡಲ್‌ವುಡ್‌ ನಟಿ ಪ್ರೇಮಾ ಪತಿ ಯಾರು ಗೊತ್ತಾ? ಡಿವೋರ್ಸ್‌ ಮಾಡಿಕೊಂಡಿದ್ದು ಇದೇ ಕಾರಣಕ್ಕೆ!!

ನಟಿ ಪ್ರೇಮಾ ಅವರ ಪತಿ ಜೀವನ್ ಅಪ್ಪಚ್ಚು  . ಅವರು ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದರು. ಅವರು ಅನೇಕ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದರು. ಆದರೆ ಈಗ ಅವರು ಸಿನಿರಂಗದಿಂದ ದೂರ ಉಳಿದಿದ್ದಾರೆ. ನಟಿಯ ಪತಿ ಮತ್ತು ಡಿವೋರ್ಸ್‌ ಮಾಡಿಕೊಂಡಿದ್ದಕ್ಕೆ ಕಾರಣ ಏನು ಎಂದು ಇಂಟ್ರೆಸ್ಟಿಂಗ್‌ ಮಾಹಿತಿ ಹೊರಬಿದ್ದಿದೆ

ಸಾಫ್ಟ್ವೇರ್ ಇಂಜಿನಿಯರ್ ಆದಂತಹ ಜೀವನ್ ಅಪ್ಪಚ್ಚು ಎಂಬುವರೊಂದಿಗೆ ಜುಲೈ 6 196ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಆದರೆ ವಿವಾಹವಾದ ಕೆಲವೇ ಕೆಲವು ವರ್ಷಗಳಲ್ಲಿ ಕೆಲ ವೈಮನಸ್ಸಿನಿಂದಾಗಿ ವಿಚ್ಛೇದನ ಪಡೆದುಕೊಳ್ಳುವ ಮೂಲಕ ದೂರಾದರು. ಇದೆಲ್ಲದರ ನಡುವೆ ಮದುವೆಯಾಗಿ ಸ್ವಲ್ಪ ದಿನದಲ್ಲಿ ಪ್ರೇಮಾ ಅವರಿಗೆ ತನ್ನ ಪತಿ ಜೀವನ್ ಅಪ್ಪಚ್ಚು ಸಾಫ್ಟ್ ವೇರ್ ಇಂಜಿನಿಯರ್ ಅಲ್ಲ, ಆತ ಸುಳ್ಳು ಹೇಳಿ ಮದುವೆಯಾಗಿದ್ದಾನೆ ಎಂಬ ವಿಚಾರ ಗೊತ್ತಾಗುತ್ತದೆ.

ಆರಂಭದಲ್ಲಿ ಇವರಿಬ್ಬರ ದಾಂಪತ್ಯ ಜೀವನ ಯಾವುದೇ ಸಮಸ್ಯೆಗಳಿಲ್ಲದೆ ಸುಗಮವಾಗಿರುತ್ತದೆ. ಅಲ್ಲದೆ ಮದುವೆಯಾದ ನಂತರ ಸಿನಿಮಾ ಮಾಡುವುದರಲ್ಲಿ ನನಗೆ ಯಾವುದೇ ಅಭ್ಯಂತರವಿಲ್ಲ ಎಂಬುದನ್ನು ಕೂಡ ಜೀವನ್ ಹೇಳಿರುತ್ತಾರೆ. ಹೀಗಾಗಿ ಮದುವೆಯಾದ ಮೇಲೆಯೂ 2009ರಲ್ಲಿ ಶಿಶಿರ ಎಂಬ ಸಿನಿಮಾದಲ್ಲಿ  ಪ್ರೇಮ ಕೊನೆಯದಾಗಿ ಬಣ್ಣ ಹಚ್ಚುತ್ತಾರೆ. ಈ ಸಿನಿಮಾದ ಶೂಟಿಂಗ್ ಸಮಯದಲ್ಲೇ ಪ್ರೇಮ ಹಾಗೂ ಜೀವನ್ ನಡುವೆ ವೈಮನಸ್ಸು ಉಂಟಾಗಿ ಅವರಿಬ್ಬರು ದೂರ ಆಗಿದ್ದಾರೆ ಎನ್ನುವ ಮಾತುಗಳು ದೊಡ್ಡಮಟ್ಟದಲ್ಲಿ ಹರಿದಾಡುತ್ತಿರುತ್ತದೆ.   

ಹೀಗೆ ನಾನು ನನ್ನ ಜೀವನದಲ್ಲಿ ತೆಗೆದುಕೊಳ್ಳಬೇಕಾದಂತಹ ಮುಖ್ಯ ಆಯ್ಕೆಯಲ್ಲಿಯೇ ಯಮಾರಿಬಿಟ್ಟೆ ಎಂದು ಪ್ರೇಮಾ ಡಿಪ್ರೆಶನ್ಗೂ ಕೂಡ ಹೋಗಿಬಿಡುತ್ತಾರೆ. 2009ರ ನಂತರ ಕಂಪ್ಲೀಟ್ ಆಗಿ ಪ್ರೇಮಾ ಚಿತ್ರರಂಗದಿಂದ ದೂರ ಉಳಿಯುವ ನಿರ್ಧಾರ ಮಾಡಿ ಬಿಡುತ್ತಾರೆ.

ಹೀಗೆ ಜೀವನ್ ಅಪ್ಪಚ್ಚು ಅವರನ್ನು ಬಿಟ್ಟು ಆಸ್ಟ್ರೇಲಿಯ ಮುಂತಾದ ದೇಶಗಳಿಗೆ ಪ್ರಯಾಣ ಬೆಳೆಸಿದ ಪ್ರೇಮಾ 2016ರಲ್ಲಿ ಜೀವನ್ ಅಪ್ಪಚ್ಚು ಅವರಿಂದ ಡಿವೋರ್ಸ್ ಪಡೆದು ದೂರವಾಗಿ ಬಿಡುತ್ತಾರೆ.

( video credit :MediaMasthi Kannada )