ಬಿಗ್ ಬಾಸ್ ಶೋ ಗಾಗಿ ಅಂತ್ಯ ಆಗಲಿರುವ ಮೂರು ಧಾರಾವಾಹಿಗಳು! ಅವು ಯಾವುವು ಗೊತ್ತಾ?
ನಮ್ಮ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ದೊಡ್ಡ ರಿಯಾಲಿಟಿ ಶೋಗಳು ಪೈಕಿ ಆಗಿನಿಂದಲೂ ಇಂದಿನ ವರೆಗೂ ಕೂಡ ಮುಂಚೂಣಿಯಲ್ಲಿ ಇರುವ ಹೆಸರು ಎಂದ್ರೆ ಅದು ಬಿಗ್ ಬಾಸ್. ಇನ್ನೂ ಈ ಬಿಗ್ ಬಾಸ್ ಹಿಂದಿಯ ಅವತರಣಿಕೆಯಾದರೂ ಕೂಡ ಇದೀಗ ಈ ಶೋ ಎಲ್ಲಾ ಭಾಷೆಗಳಲ್ಲಿ ಕೂಡ ಪ್ರಸಾರವಾಗುತ್ತಿದೆ. ಇನ್ನೂ ಎಲ್ಲಾ ಭಾಷೆಯಲ್ಲಿ ಕೂಡ ಅದೆಷ್ಟೋ ಸೀಸನ್ ಗಳು ಕಳೆದಿದ್ದರೂ ಕೂಡ ಇಂದಿಗೂ ಅದರ ಹೊಸತನವನ್ನು ಕಳೆದುಕೊಂಡಿಲ್ಲ ಎಂದರೆ ತಪ್ಪಾಗಲಾರದು. ಇದೀಗ ನಮ್ಮ ಕನ್ನಡ ಬಿಗ್ ಬಾಸ್ ಶೋ ನಲ್ಲಿ ಕೂಡ ಹತ್ತನೇ ಸೀಸನ್ ಗೆ ಕಾಲಿಟ್ಟಿದೆ. ಇನ್ನೂ ಕಳೆದ ಬಾರಿ ನಮ್ಮ ಕನ್ನಡ ಮೊದಲ ಓಟಿಟಿ ಸೀಸನ್ ಕೂಡ ಶುರುವಾಗಿತ್ತು. ಈ ಬಾರಿಯೂ ಕೂಡ ಮೊದಲ ಓಟಿಟಿ ಮಾಡಿ ಆ ನಂತರ ಟಿವಿ ಸೀಸನ್ ಶುರು ಮಾಡಬಹುದು ಎಂದು ಕೊಂಡಿದ್ದವರಿಗೆ ಇದೀಗ "ಹತ್ತನೇ ಸೀಸನ್" ಆದ ಕಾರಣದಿಂದ ನೇರವಾಗಿ ಟಿವಿ ಸೀಸನ್ ಶುರು ಮಾಡಲಿದ್ದೇವೆ ಎಂದು ಮೊದಲ ಪ್ರೋಮೋ ಕೂಡ ಬಿಡುಗಡೆ ಮಾಡಿದ್ದಾರೆ.
ಇನ್ನೂ ಕಳೆದ ವಾರದಲ್ಲಿ ಬಿಡುಗಡೆ ಪಡೆದ ಮೊದಲ ಬಿಗ್ ಬಾಸ್ ನ ಪ್ರೋಮೋ ಈ ಸೀಸನ್ ನಲ್ಲಿ ಒಂದು ವಿಶೇಷತೆ ಅಡಗಿದೆ ಎನ್ನುವ ಸಂದೇಶ ಸಾರುತ್ತಾ ಬರುತ್ತಿದೆ. ಓಟಿಟಿ ಯಲ್ಲಿ ದೊಡ್ಡ ಮನೆಯಲ್ಲಿ ನಡೆಯುವ 24 ಘಂಟೆಯ ಲೈವ್ ಪ್ರಸಾರ ಮಾಡಲಾಗುತ್ತಿತ್ತು. ಆದರೆ ಟಿವಿ ಸೀಸನ್ ನಲ್ಲಿ 24 ಗಂಟೆಯಲ್ಲಿ ನಡೆಯುವ ಸನ್ನಿವೇಶವನ್ನು ಆಯ್ಕೆ ಮಾಡಿ ಕೇವಲ ಒಂದು ವರೆ ಗಂಟೆಯಲ್ಲಿ ಮಾತ್ರ ಪ್ರಸಾರ ಮಾಡಲಾಗುತ್ತದೆ. ಇನ್ನೂ ಈ ಬಾರಿಯೂ ಕೊಡ ಆ ರೀತಿ ಮಾಡುವುದರಿಂದ ನಮ್ಮ ಕಲರ್ಸ್ ಕನ್ನಡಲ್ಲಿ ಬರುವ ಧಾರಾವಾಹಿಗಳ ಅಂತ್ಯ ಮಾಡಿ ಕೊಂಚ ಸಮಯ ಬದಲಾವಣೆಗಳನ್ನು ಮಾಡಿ ಬಿಗ್ ಬಾಸ್ ಶೋ ಗೆ ಅನುವು ಮಾಡಿಕೊಡಲಾಗುವುದು.
ಇದೀಗ ಬಿಗ್ ಬಾಸ್ ಸೀಸನ್ 10 ಶುರುವಾಗಲು ದಿನಗಣನೆ ಶುರುವಾಗಿದೆ. ಹೌದು ಸೆಪ್ಟೆಂಬರ್ ಅಂತ್ಯದಲ್ಲಿ ಶುರುವಾಗುವ ಈ ಶೋ ಪ್ರಸಾರ ಮಾಡಲಿಕ್ಕೆ ಕೆಲ ಧಾರಾವಾಹಿಗಳನ್ನು ಅಂತ್ಯ ಮಾಡಲೇ ಬೇಕು. ಹಾಗಾಗಿ ಈ ತಿಂಗಳಲ್ಲಿ ಯಾವ ಧಾರಾವಾಹಿಯನ್ನು ಅಂತ್ಯ ಮಾಡಲಿದ್ದಾರೆ ಎಂದು ಎಲ್ರಿಗೂ ದೊಡ್ಡ ಪ್ರಶ್ನೆ ಕಾಡುತ್ತಲೇ ಇದೆ. ಇದೀಗ "ಕಲರ್ಸ್ ಕನ್ನಡ"ದಲ್ಲಿ ಇತ್ತೀಚೆಗೆ ಶುರುವಾಗಿರುವ "ಒಲವಿನ ನಿಲ್ದಾಣ, ಪುಣ್ಯವತಿ , ಗೀತಾ, ತ್ರಿಪುರ ಸುಂದರಿ,ಗೃಹ ಪ್ರವೇಶ ಹಾಗೂ ಗಂಡ ಹೆಂಡತಿ" ಇತ್ತೀಚೆಗೆ ಶುರುವಾದ ಧಾರಾವಾಹಿಗಳು ಆದರೂ ಟಿ ಆರ್ ಪೀ ಅಷ್ಟಾಗಿ ಚೆನ್ನಾಗಿಲ್ಲ. ಇನ್ನೂ "ಲಕ್ಷ್ಮಿ ಬಾರಮ್ಮ, ಭಾಗ್ಯ ಲಕ್ಷ್ಮಿ, ರಾಮಾಚಾರಿ," ಈ ಸೀರಿಯಲ್ ಟಿ ಆರ್ ಪೀ ತುಂಬಾ ಚೆನ್ನಾಗಿ ಬಂದಿದೆ. ಹಾಗಾಗಿ ಟಿ ಆರ್ ಪೀ ಕಡಿಮೆ ಇರುವ ಧಾರಾವಾಹಿಯನ್ನು ಅಂತ್ಯ ಮಾಡಿ ಬಿಗ್ ಬಾಸ್ ಶೋ ಪ್ರಸಾರ ಆಗಲು ಅನುವು ಮಾಡಿಕೊಡುವ ಸಾದ್ಯತೆ ಹೆಚ್ಚಾಗಿದೆ.




