ಲೀಲಾವತಿ ಚಿಕ್ಕ ಮಗುವಿದ್ದಾಗ್ಲೆ ಅನಾಥೆಯಾಗಿದ್ದರು..! ಕ್ರಿಶ್ಚಿಯನ್ ಮಡಿಲಲ್ಲಿ ಬೆಳೆದ ಪರಿ ಹೀಗಿತ್ತು

ಲೀಲಾವತಿ  ಚಿಕ್ಕ  ಮಗುವಿದ್ದಾಗ್ಲೆ ಅನಾಥೆಯಾಗಿದ್ದರು..!  ಕ್ರಿಶ್ಚಿಯನ್ ಮಡಿಲಲ್ಲಿ ಬೆಳೆದ ಪರಿ ಹೀಗಿತ್ತು

ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಗಮನ ಸೆಳೆದಂತಹ ನಟಿಯಲ್ಲಿ ಲೀಲಾವತಿ ಅವರು ಒಬ್ಬರು. ಹೌದು ಇತ್ತೀಚಿಗಷ್ಟೇ ಇವರು ಸಾವಲಪ್ಪಿದ್ದಾರೆ. ನಟಿ ಲೀಲಾವತಿ ಅವರು ನಡೆದು ಬಂದ ಸಿನಿಮಾ ದಾರಿ ಮತ್ತು ಅವರ ವೈಯಕ್ತಿಕ ಜೀವನದ ದಾರಿ ಅಷ್ಟು ಸುಲಭವಾಗಿ ಇರಲೆ ಇಲ್ಲ. ಹುಟ್ಟಿದ್ದು 1937 ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಊರಿನ ಕಡು ಬಡತನದ ಒಂದು ಕುಟುಂಬದಲ್ಲಿ. ಹೌದು ಇವರು ಹೆಣ್ಣು ಮಗುವಾಗಿ ಹುಟ್ಟಿದ ತಕ್ಷಣವೇ ಮನೆಯವರೆಲ್ಲ ಲೀಲಾವತಿ ಅವರ ಮೇಲೆ ಬೇಸರ ವ್ಯಕ್ತಪಡಿಸಿದ್ದರಂತೆ.

ಮನೆಯಿಂದ ಆಚೆ ಕೂಡ ಹಾಕಿದರಂತೆ. ಅದಾದ ಬಳಿಕ ಸ್ವಲ್ಪ ದಿವಸದಲ್ಲಿ ಲೀಲಾವತಿ ತಂದೆ ತಾಯಿ ತೀರಿ ಹೋಗುತ್ತಾರೆ..ನಂತರ ಲೀಲಾವತಿ ಅವರು ಬೆಳೆದಿದ್ದು ಕ್ರಿಶ್ಚಿಯನ್ ದಂಪತಿಯ ಮಡಿಲಲ್ಲಿ. ಆರಂಭದಲ್ಲಿಯೇ ಬೇರೆ ಬೇರೆ ಮನೆಯಲ್ಲಿ ಮನೆಗೆಲಸ ಮಾಡಿ ಜೀವನ ಸಾಗಿಸಿದ್ದಾರೆ..ಲೀಲಾವತಿಯವರು ನೋಡಲು ತುಂಬಾ ಸ್ಪುರುದ್ರಪೀ ನಟಿ. ಹಾಗಾಗಿ ಯಾರೋ ಇವರಿಗೆ ನಟನೆ ಮಾಡಲು ಉತ್ಸಾಹ ನೀಡಿ ಹುರುದುಂಬಿಸಿದ್ದು ಇದೆ. ಇವರನ್ನು ಕರೆದುಕೊಂಡು ಇನ್ನೊಬ್ಬರ ಬಳಿ ನಟನೆಗೆ ಕರೆತಂದು ಅವಕಾಶ ಕಲ್ಪಿಸಿದಾಗ ಮೊದಲು ನಾಟಕ ಕಲಿತುಕೊಂಡು ಬನ್ನಿ ಎಂದರಂತೆ. ಲೀಲಾವತಿ ಅವರು ಮೊದಲು ಸುಬ್ಬಯ್ನಾಡು ನಾಟಕ ಸಂಸ್ಥೆಯಲ್ಲಿ ನಟನೆ ಆರಂಭಿಸುತ್ತಾರೆ.

ಅದಾದ ಬಳಿಕ ಸಿನಿಮಾದಲ್ಲಿ ಹೆಚ್ಚು ಹೆಚ್ಚು ಅವಕಾಶ ಕಲ್ಪಿಸಿಕೊಳ್ಳುತ್ತಾರೆ..ರಾಜ್ ಕುಮಾರ್ ಅವರ ಜೊತೆ ಮಾಡಿದ ಸಿನಿಮಾಗಳೆಲ್ಲವು ತುಂಬಾನೇ ಹಿಟ್ ಆಗಿವೆ. ಸಿನಿಮಾದ ಯಶಸ್ಸಿನ ಉತ್ತುಂಗದಲ್ಲಿರುವಾಗಲೆ ಅದೇ ಸಂದರ್ಭದಲ್ಲಿ ಲೀಲಾವತಿ ಅವರು ಗರ್ಭಿಣಿಯಾಗಿ ನಟ ವಿನೋದ್ ರಾಜ್ ಅವರಿಗೆ ಜನನ ನೀಡುತ್ತಾರೆ. ಅದಾದ ಬಳಿಕ ಸಿನಿಮಾದಲ್ಲಿ ಅವಕಾಶ ಕಡಿಮೆ ಆಗುತ್ತದೆ. ಮತ್ತೆ ಲೀಲಾವತಿಯವರು ನಾಟಕ ಮಂಡಳಿಗೆ ಹೋಗಿ ಅಭಿನಯ ಮಾಡಿ ಒಂದೊಂದು ರೂಪಾಯಿ ಕೂಡಿಟ್ಟು ಜೀವನ ಮಾಡಿದ್ದಾರೆ ಎನ್ನಲಾಗಿದೆ. ಆಗ ಒಂದು ಸಮಸ್ಯೆ ಇವರಿಗೆ ಎದುರಾಗಿತ್ತು. ಲೀಲಾವತಿಯವರ ಗಂಡ ಯಾರು..? ವಿನೋದ್ ರಾಜ್ ತಂದೆ ಯಾರು ಎಂಬುದಾಗಿ ಪ್ರತಿಬಾರಿಯೂ ಕೇಳಿ ಬಂದಿತ್ತು.

ಈಗಲೂ ಕೂಡ ಅದು ಗುಟ್ಟು ಗುಟ್ಟಾಗಿ ಉಳಿಯಿತು ಎಂದು ಕೆಲವರು ಹೇಳುತ್ತಿದ್ದಾರೆ. ಮಹಾಲಿಂಗ ಭಗವತ್ ಎನ್ನುವವರು ಲೀಲಾವತಿ ಅವರ ಮದುವೆಯಾಗಿದ್ದರು ಎಂದು ಕೆಲವರ ಬಾಯಲ್ಲಿ ಕೇಳಿ ಬಂದಿತ್ತು.ಇದರಲ್ಲಿ ಎಷ್ಟು ಸತ್ಯ ಎಷ್ಟು ಸುಳ್ಳು ಇದೆ ಗೊತ್ತಿಲ್ಲ.. ನಟಿ ಲೀಲಾವತಿಯವರು ಸಿನಿಮಾ ರಂಗಕ್ಕೆ ಬಂದ ಮೇಲೆ ಅನುಭವಿಸಿದ ಆ ನೋವುಗಳು, ಹಾಗೆ ಕೊನೆ ದಿನದಲ್ಲಿ ಅವರಿಗೆ ಸಿನಿಮಾ ಅವಕಾಶ ವಂಚಿತರಾಗಿ ತಮ್ಮ ಮಗನ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಕೈಗೊಂಡ ಆ ಕೆಲಸಗಳು, ಜೊತೆಗೆ ಸೋಲದೇವನಹಳ್ಳಿಯಲ್ಲಿ ತಮ್ಮದೇ ಆದ ಜೀವನ ಆರಂಭಿಸಿ ಲೀಲಾವತಿಯವರು ಹೇಗೆ ಬೆಳೆದುಕೊಂಡು ಬಂದಿದ್ದರು ಗೊತ್ತಾ..? ಈ ವಿಡಿಯೋವನ್ನು ಕೊನೆಯವರೆಗೂ ನೋಡಿ. ಹಾಗೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕಾಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು.. ( Vismaya - Kannada )