ಲೂಸ್ ಮಾದ ಯೋಗೇಶ್ ಅವರ ಚಿತ್ರಕ್ಕೆ ಆಯ್ಕೆ ಆದ ಸೋನು ಗೌಡ! ಯಾವ ಸಿನಿಮಾ ಗೊತ್ತಾ?

ಲೂಸ್ ಮಾದ ಯೋಗೇಶ್ ಅವರ ಚಿತ್ರಕ್ಕೆ ಆಯ್ಕೆ ಆದ ಸೋನು ಗೌಡ! ಯಾವ ಸಿನಿಮಾ ಗೊತ್ತಾ?

ಇನ್ನೂ ಇತ್ತೀಚೆಗೆ ಸಾಕಷ್ಟು ಸಿನಿಮಾಗಳು ನಮ್ಮ ಗಾಂಧಿ ನಗರಕ್ಕೆ ಪರಿಚಯ ಮಾಡಿಕೊಳ್ಳುತ್ತಾ ಬಂದಿದೆ. ಹಾಗೆಯೇ ಹೊಸ ಹೊಸ ಪ್ರತಿಭೆಗಳು ಕೊಡ ನಮ್ಮ ಚಂದನ ವನಕ್ಕೆ ಕಾಲಿಡುತ್ತಾ ಬಂದಿದೆ ಎಂದು ಹೇಳಬಹುದು. ಹಾಗೆಯೇ ಇತ್ತೀಚೆಗೆ ಕಳೆದ ಬಾರಿ ಹಿಟ್ ಪಡೆದ ಸಿನಿಮಾಗಳನ್ನು ಅದರ ಮುಂದು ವರೆದ ಭಾಗವಾಗಿ ಕೊಡ ರಿಲೀಸ್ ಮಾಡಲಾಗುತ್ತಿದೆ. ಆ ರೀತಿಯ ಸಿನಿಮಾ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಬಿಡುಗಡೆ ಆಗಿದೆ ಎಂದು ಹೇಳಬಹುದು. ಇನ್ನೂ ಇದೆ ರೀತಿಯ ಮತ್ತೊಂದು ಸಿನಿಮಾ ನಮ್ಮ ಬೆಳ್ಳಿ ಪರದೆಗೆ ಅಪ್ಪಳಿಸಲು ಎಲ್ಲಾ ತಯಾರಿ ನಡೆದಿದೆ ಎಂದರೆ ತಪ್ಪಾಗಲಾರದು . ಆ ಸಿನಿಮಾ ಬೇರಾವುದೂ ಅಲ್ಲಾ ಲೂಸ್ ಮಾದ ಯೋಗಿ ಹಾಗೂ ರಮ್ಯಾ ಅವರ ನಟನೆಯ ಸಿದ್ಲಿಂಗು.   

ಇನ್ನೂ ಈ ಸಿದ್ಲಿಂಗು ಸಿನಿಮಾ 2015ರಲ್ಲಿ ತೆರೆಕಂಡಿದ್ದ ಸಿನಿಮಾ ಆಗಿದೆ. ಇನ್ನೂ ಈ ಸಿನಿಮಾದಲ್ಲಿ ಸಾಕಷ್ಟು ಕಲಾವಿದರ ದಂಡೇ ಇದೆ ಎಂದು ಹೇಳಬಹುದು. ಆ ಕಾಲದಲ್ಲಿ ಶತಕವನ್ನು ಭಾರಿಸಿ ಸಾಕಷ್ಟು ಹೆಸರು ಹಾಗೂ ಪ್ರೀತಿಯನ್ನು ಪಡೆದುಕೊಂಡ ಸಿನಿಮಾ ಇದಾಗಿದೆ. ಆದರೆ ಈ ಸಿನಿಮಾದ ಅಂತ್ಯ ಕೆಲವರಿಗೆ ತೃಪ್ತಿ ಕಾಣಲಿಲ್ಲ ಎಂಬುದು ಅಕ್ಷರ ಸಹ ಸತ್ಯ ಆದರೆ ಮನೋರಂಜನೆಯ ವಿಷಯದಲ್ಲಿ ಪೈಸಾ ವಸೂಲಿ ಮಾಡುವಂತೆ ಇದೆ ಎಂದು ಹೇಳಬಹುದು. ಇನ್ನೂ ಪ್ರೇಕ್ಷಕರಲ್ಲಿ ಬೇಸರ ಮೂಡಿಸಿದ್ದ ವಿಷಯ ಎಂದ್ರೆ ಕೊನೆಯಲ್ಲಿ ನಾಯಕ ನಟಿ ಸತ್ತು ಹೋದ ನಂತರ ನಾಯಕ ನಟನ ಜೀವನದ ಬಗ್ಗೆ ಕೊಂಚ ಪರಿಚಯ ಮಾಡಿ ಸಿನಿಮಾ ಅಂತ್ಯ ಮಾಡಬೇಕಿತ್ತು ಎಂದು ಕೆಲವರು ಅಭಿಪ್ರಾಯ ಹೊರಹಾಕಿದರೆ ಇನ್ನೂ ಕೆಲವರು ಇದರ ಮುಂದುವರೆದ ಭಾಗ ಬರಬಹುದು ಎಂದು ಆಗಲೇ ಊಹಿಸಿದ್ದರು.

ಇನ್ನೂ ಆ ರೀತಿಯ ನಿರೀಕ್ಷೆ ಇಟ್ಟು ಕೊಂಡಿದ್ದ ಪ್ರೇಕ್ಷಕರಿಗೆ ಹಾಗೂ ಲೋಸ್ ಮಾದ ಯೋಗೇಶ್ ಅವರ ಲಭಿಮಾನಿಗಳಿಗೆ ಈಗ ಸಿಹಿ ಸುದ್ದಿಯನ್ನು ಗಾಂಧಿ ನಗರದಲ್ಲಿ ಒಡಾಡುತ್ತಿದ್ದ ಅದೇನೆಂದರೆ ಸಿದ್ಲಿಂಗು ಚಿತ್ರದ ಶೂಟಿಂಗ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭ ಆಗಲಿದ್ದು ಈ ಚಿತ್ರಕ್ಕೆ ರಮ್ಯಾ ಬದಲು ಸೋನು ಗೌಡ ಅವರು ಆಯ್ಕೆ ಆಗಿದ್ದಾರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇನ್ನೂ ಯೋಗೇಶ್ ಅವರ ಅಭಿಮಾನಿಗಳಿಗೆ ಮಾದ ಅವರ ದೊಡ್ಡ ಬ್ರೇಕ್ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಾ ಬರುತ್ತಿರುವುದು ಹೆಚ್ಚಿನ ಖುಷಿ ಕೊಟ್ಟಿದೆ. ಹಾಗೆಯೇ ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ಇವರ ಕೈ ಸೇರಲಿ ಎಂದು ನಾವೆಲ್ಲರೂ ಕೊಡ ಆಶಿಸೋಣ.