ಇದು ವ್ಯಾಲೆಂಟೈನ್ ಡೇ ಸ್ಪೆಷಲ್ ;ಯಾವ ಮರವನ್ನೂ ಖಾಲಿ ಬಿಡದ ಜೋಡಿಗಳು ಮಾಡುತ್ತಿರುವುದೇನು..? ವಿಡಿಯೋ ವೈರಲ್

ಈಗಂತೂ ಸೋಶಿಯಲ್ ಮೀಡಿಯ ತುಂಬಾ ಫಾಸ್ಟ್ ಆಗಿದೆ. ಈ ಸೋಶಿಯಲ್ ಮೀಡಿಯಾ ಬಂದಾಗಿನಿಂದ ಎಲ್ಲೇ ಏನೇ ನಡೆದರೂ ಆ ಸುದ್ದಿ ಎಲ್ಲರಿಗೂ ತಲುಪುತ್ತದೆ. ಇನ್ ಸ್ಟಾಗ್ರಾಂ, ಫೇಸ್ ಬುಕ್ ಗಳಲ್ಲಂತೂ ಎಲ್ಲರ ಬಂಡವಾಳ ಬಯಲಾಗಿ ಬಿಡುತ್ತದೆ. ಮರದ ಮರೆಯಲ್ಲಿ, ಪೊದೆಗಳಲ್ಲಿ ಎಲ್ಲಿ ನೋಡಿದರೂ ಜೋಡಿಗಳು ಪ್ರೀತಿ-ಪ್ರೇಮ ಎಂದು ಒಬ್ಬರಿಗೊಬ್ಬರು ಅಂಟಿಕೊಂಡಿರುವುದೇ ಕಾಣಿಸುತ್ತದೆ. ಅದರಲ್ಲೂ ನಗರಗಳಲ್ಲಿರುವ ಪಾರ್ಕ್ ಗಳಲ್ಲಿ ಹದಿಹರೆಯದ ಹುಡುಗ ಹುಡುಗಿಯರೇ ತುಂಬಿ ಹೋಗಿರುತ್ತಾರೆ. ಈ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಹಲವು ಬಾರಿ ಸುದ್ದಿಯಾಗಿದ್ದರೂ ಯಾರೂ ಕೇರ್ ಮಾಡುವುದಿಲ್ಲ. 

ಪ್ರೀತಿ ಪ್ರೇಮ ಎಂದು ಹೇಳಿ ಮರದ ಮರೆಯಲ್ಲಿ ನಿಂತು ಬಿಡುತ್ತಾರೆ. ಇವರ ಲವ್ವಿ-ಡವ್ವಿಯನ್ನು ಸಾಕಷ್ಟು ಕ್ಯಾಮರಾಗಳು ಸೆರೆ ಹಿಡಿಯುತ್ತಿರುತ್ತವೆ. ಈ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಹೆಚ್ಚು ಸಮಯವೂ ಬೇಕಾಗುವುದಿಲ್ಲ. ಈ ವೀಡಿಯೋಗಳಲ್ಲಿ ಕೆಲವೊಂದನ್ನು ನೋಡುವುದಕ್ಕೂ ಸಾಧ್ಯವಾಗದಷ್ಟೂ ಕೆಟ್ಟದಾಗಿರುತ್ತದೆ. ಅಂತಹದ್ದೇ ವೀಡಿಯೋವೊಂದನ್ನು ಮೀಮ್ಸ್.ಬಿಕೆಎಸ್ ಅಪ್ ಲೋಡ್ ಮಾಡಿದೆ. ಈ ವೀಡಿಯೋದಲ್ಲಿ ಎಲ್ಲಾ ಮರಗಳ ಮರೆಯಲ್ಲೂ ಜೋಡಿಗಳು ಕದ್ದು ಮುಚ್ಚಿಕೊಂಡಿರುವುದೇ ಇದೆ.    

ಈ ವೀಡಿಯೋದಲ್ಲಿರುವ ಸ್ಥಳಕ್ಕೆ ಕೆಲವರು ಭೇಟಿ ಕೊಟ್ಟಾಗ ಶಾಕ್ ಕಾದಿತ್ತು. ಯಾಕೆಂದರೆ ಪ್ರತೀ ಮರದ ಹಿಂದೆಯೂ ಜೋಡಿಗಳು ಅಂಟಿಕೊಂಡಿದ್ದರು. ಇದನ್ನು ಮೀಮ್ಸ್.ಬಿಕೆಎಸ್ ಅಪ್ ಲೋಡ್ ಮಾಡಿದ್ದು, ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ. ಕೆಲವರು ಚಿಪ್ಕೋ ಚಳುವಳಿ ಎಂದು ಹೇಳಿದ್ದರೆ, ಮತ್ತೆ ಕೆಲವರು ರಾಸಲೀಲೆ ಎಂಬ ಪದವನ್ನು ಬಳಸಬೇಡಿ. ಅದಕ್ಕೆ ಇವರು ಅರ್ಹರಲ್ಲ. ರಾಸಲೀಲೆ ಪದದ ಅರ್ಥ ತಿಳಿಯಿರಿ ಎಂದೆಲ್ಲಾ ಗರಂ ಆಗಿ ನೆಟ್ಟಿಗರು ಕಾಮೆಂಟ್  ಮಾಡಿದ್ದಾರೆ. ಒಟ್ನಲ್ಲಿ ಪ್ರೀತಿ ಹೆಸರಲ್ಲಿ ಜೋಡಿಗಳು ಮರ ಹಾಗೂ ಪೊದೆಗಳ ಹಿಂದೆ ಲವ್ವಿ-ಡವ್ವಿ ಮಾಡುವುದು ಹೊಸದೇನೂ ಅಲ್ಲ. ಆದರೆ, ಸೋಶಿಯಲ್ ಮೀಡಿಯಾ ಬಂದಾಗಿನಿಂದ ಈ ರೀತಿಯ ವೀಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿವೆ.

 
 
 
 
 
 
 
 
 
 
 
 
 
 
 

A post shared by Memes Bks (@memes.bks)