ವರದಕ್ಷಿಣೆ ಕಿರುಕುಳ.. ಬ್ಯಾಂಡ್, ವಾದ್ಯ ಮೆರವಣಿಗೆಯೊಂದಿಗೆ ಮಗಳನ್ನು ತವರಿಗೆ ಕರೆದುಕೊಂಡು ಬಂದ ತಂದೆ! ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ; ವಿಡಿಯೋ ವೈರಲ್
ಹೌದು ಗೆಳೆಯರೇ ಮದುವೆ ಎನ್ನುವುದು ಒಂದು ಸುಂದರವಾದ ಸಂಬಂಧ ಆದರೆ ಎಲ್ಲ ಮದುವೆಗಳು ಸುಕಾಂತದಲ್ಲಿ ಮುಗಿಯುವುದಿಲ್ಲ . ಗಂಡ ಹೆಂಡತಿಯಲ್ಲಿ ಬಿನ್ನಾಭಿಪ್ರಾಯ ಬಂದು ಎಷ್ಟೋ ಮದುವೆಗಳು ಮುರಿದು ಹೋಗಿವೆ ಮತ್ತು ಎಷ್ಟೋ ಕಡೆ ವರದಕ್ಷಿಣೆ ಕಿರುಕಳದಿಂದ ಎಷ್ಟೋ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಆದರೆ ಇಲ್ಲೊಂದು ಘಟನೆ ಏನಾಗಿದೆ ನೋಡಿ
ಹೆಣ್ಣುಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿದ ಘಟನೆಯೊಂದು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಬೆಳಕಿಗೆ ಬಂದಿದೆ. ಮದುವೆಯ ನಂತರವೂ ತನ್ನ ಮಗಳ ಜವಾಬ್ದಾರಿಯಿಂದ ಮುಕ್ತನಾಗದ ತಂದೆ, ಮಗಳು ಅತ್ತೆಯ ಕಿರುಕುಳಕ್ಕೊಳಗಾದಾಗ, ಅವಳನ್ನು ಅದ್ದೂರಿಯಾಗಿ ವಾಪಾಸ್ ಮನೆಗೆ ಕರೆದುಕೊಂಡು ಬಂದಿದ್ದಾನೆ.ರಾಂಚಿಯ ಪ್ರೇಮ್ ಗುಪ್ತಾ ತಮ್ಮ ಮಗಳು ಸಾಕ್ಷಿ ಮದುವೆ ಅದ್ದೂರಿಯಿಂದ ಮಾಡಿದ್ದರು. ಆದರೆ ಮದುವೆ ನಂತರ ಅತ್ತೆ ವರದಕ್ಷಿಣೆಗಾಗಿ ಕಿರುಕುಳ ಕೊಟ್ಟಿದ್ದಾರೆ. ಈ ಬಗ್ಗೆ ಮಗಳು ತಂದೆ ಬಳಿ ಅವಲತ್ತುಕೊಂಡಿದ್ದಾಳೆ. ಕೂಡಲೇ ಮಗಳ ಪತಿಯ ಮನೆಗೆ ಹೋದ ಅಪ್ಪ, ಅಲ್ಲಿಂದ ಮಗಳನ್ನು ಮಗಳನ್ನು ಬ್ಯಾಂಡ್ ವಾದ್ಯ ಮೆರವಣಿಗೆಯಲ್ಲಿ ತವರಿಗೆ ಕರೆತಂದಿದ್ದಾರೆ.
ಇನ್ನು ಈ ಬಗ್ಗೆ ಪ್ರೇಮ್ ಗುಪ್ತಾ ತಮ್ಮ ಫೆಸ್ಬುಕ್ ಖಾತೆಯಲ್ಲಿ ವಿಡಿಯೋ ಜೊತೆಗೆ ಬರೆದುಕೊಂಡಿದ್ದಾರೆ, ‘ನಿಮ್ಮ ಮುದ್ದಾದ ಮಗಳು ಮದುವೆ ಮಾಡಿಕೊಟ್ಟಾಗ ಆಕೆಯ ಪತಿ ಮತ್ತು ಕುಟುಂಬವು ತಪ್ಪು ಮಾಡಿದರೆ ಅಥವಾ ತೊಂದರೆ ಕೊಟ್ಟಾಗ, ನೀವು ನಿಮ್ಮ ಮಗಳನ್ನು ಗೌರವದಿಂದ ಮನೆಗೆ ಹಿಂತಿರುಗಿಸಬೇಕು. ಏಕೆಂದರೆ ಹೆಣ್ಣುಮಕ್ಕಳು ತುಂಬಾ ಅಮೂಲ್ಯರು ಎಂದು ಬರೆದುಕೊಂಡಿದ್ದಾರೆ.




