ಮೊಬೈಲ್ ಲೋಕದಲ್ಲೇ ಮುಳುಗಿದ ತಾಯಿ ತರಕಾರಿ ಬದಲು ಮಗುವನ್ನೇ ರೆಫ್ರಿಜರೇಟರ್ ಒಳಗಿಟ್ಟಲು ; ಭೇಷ್ ಎಂದ ಜನರು

ಮೊಬೈಲ್ ಲೋಕದಲ್ಲೇ ಮುಳುಗಿದ ತಾಯಿ ತರಕಾರಿ ಬದಲು ಮಗುವನ್ನೇ ರೆಫ್ರಿಜರೇಟರ್ ಒಳಗಿಟ್ಟಲು ; ಭೇಷ್ ಎಂದ ಜನರು

ಸದ್ಯದ ಯುಗ ಇಂಟರ್ನೆಟ್ ಯುಗವಾಗಿದೆ. ಇಂದಿನ ಪ್ರತಿಯೊಬ್ಬರೂ ಇಂಟರ್ನೆಟ್ ನಲ್ಲಿ ಸತತವಾಗಿ ನಿರತರಾಗಿರುತ್ತಾರೆ. ಅಲ್ಲದೆ ಇಂದಿನ ಪ್ರತಿಯೊಬ್ಬರು ಇಂಟರ್ನೆಟ್ ಗೆ ತುಂಬಾ ಅಡಿಕ್ಟ್ ಆಗಿಬಿಟ್ಟಿದ್ದಾರೆ ಅವರಿಗೆ ಇಂಟರ್ನೆಟ್ ಉಪಯೋಗ ಮಾಡದೆ ನಿದ್ದೆಯೇ ಬರುವದಿಲ್ಲ. ಪ್ರತಿಯೊಬ್ಬರೂ ಇಂಟರ್ನೆಟ್ ಮತ್ತು ಮೊಬೈಲ್ ಇವರೆಡರ್ ಗುಲಾಮನಾಗಿದ್ದಾರೆ. ಒಂದು ವೇಳೆ ಒಂದು ಹೊತ್ತಿನ ಊಟ ದೊರೆಯದಿದ್ದರು ನಡೆಯುತ್ತೆ ಆದರೆ ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದೆ ಮನುಷ್ಯ ಬದಕಲು ಸಾಧ್ಯವಿಲ್ಲ ಅಷ್ಟೊಂದು ಅಡಿಕ್ಟ್ ಆಗಿದ್ದಾರೆ
ಮೊಬೈಲ್‌ ಫೋನ್‌, ಮಾತಿಗಿಳಿದರೆ ಹೊರ ಜಗತ್ತಿನ ಪರಿವೆಯೇ ಇಲ್ಲ ಎಂಬ ಟೀಕೆಗೆ ಪೂರಕವಾಗಿದೆ ಆ ತಾಯಿಯ ವರ್ತನೆ. ವೈರಲ್ ವಿಡಿಯೋವನ್ನು ಎಕ್ಸ್‌ನಲ್ಲಿ ಶೇರ್ ಮಾಡಲಾಗಿದ್ದು, ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಈ ದೃಶ್ಯ ನಿಜವಾದುದಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.  

ವೈರಲ್ ಆಗಿರುವ ವಿಡಿಯೋ ಒಂದು ನಿಮಿಷ 7 ಸೆಕೆಂಡ್‌ ಅವಧಿಯದ್ದು. ಅದೊಂದು ರೀತಿ ಜಾಗೃತಿ ಮೂಡಿಸುವ ವಿಡಿಯೋದಂತೆಯೇ ಕಾಣುತ್ತಿದೆ  ತರಕಾರಿ ಟ್ರೇ ನೆಲದ ಮೇಲೆಯೇ ಇದೆ. ತಾಯಿ ಬಂದು ಮಗುವನ್ನು ಎತ್ತಿಕೊಳ್ಳುತ್ತಾರೆ. ರೆಫ್ರಿಜರೇಟರ್ ಬಳಿ ಹೋಗ್ತಾರೆ. ಅದರ ಬಾಗಿಲು ತೆರೆಯುತ್ತಾರೆ.
ರೆಫ್ರಿಜರೇಟರ್ ಒಳಗೆ ಮಗುವನ್ನು ಕೂರಿಸುವಷ್ಟು ಜಾಗ ಖಾಲಿ ಇರುವುದು ಗಮನಸೆಳೆಯುತ್ತದೆ. ಅದೇ ಜಾಗದಲ್ಲಿ ಮಗುವನ್ನು ಕೂರಿಸಿ ಬಾಗಿಲು ಮುಚ್ಚುತ್ತಾರೆ. ಕೆಲವು ಸೆಕೆಂಡ್‌ಗಳ ಬಳಿಕ ಪತಿ ಬಂದು ರಿಲ್ಯಾಕ್ಸ್ ಆಗ್ತಾ ಮಗು ಎಲ್ಲಿ ಎಂದು ಕೇಳಿದಾಗ, ಫೋನ್‌ ಸಂಭಾಷಣೆಯಲ್ಲಿ ತೊಡಗಿದ್ದ ತಾಯಿ ಮಗುವಿಗಾಗಿ ಹುಡುಕಾಟ ಶುರುಮಾಡ್ತಾರೆ.
ನಂತರ ಫ್ರಿಜ್ ಹತ್ತಿರ ಹೋದಾಗ ಮಗುವಿನ ಅಳು  ಕೇಳಿಸುತ್ತದೆ . ನಂತರ ಫ್ರಿಜ್ ಬಾಗಿಲು ತೆಗೆದಾಗ ಅಲ್ಲಿ ಮಗು ಇರುವುದು ಕಾಣಿಸುತ್ತದೆ