ಸರ್ಕಾರಿ ಕೆಲಸವನ್ನು ಬಿಟ್ಟು ಸಿನಿಮಾ ರಂಗಕ್ಕೆ ಬಂದ ನಾಗ ಭೂಷಣ್! ಆದ್ರೆ ಆಗಿದ್ದು ಏನು ಗೊತ್ತಾ?
ಇತ್ತೀಚಿನ ಸ್ಯಾಂಡಲ್ ವುಡ್ ಅಂಗಳದಲ್ಲಿ ಹೆಚ್ಚಿನ ಸುದ್ದಿ ಆಗುತ್ತಿರುವ ವಿಚಾರ ಎಂದರೆ ಅದು ಕಿರುತೆರೆಯ" ಬಿಗ್ ಬಾಸ್ ಸೀಸನ್ ಹತ್ತು" ಹಾಗೂ ಹಿರಿತೆರೆಯ ನಟ "ನಾಗ ಭೂಷಣ್" ಅವರ "ಹಿಟ್ ಅಂಡ್ ರನ್ ಕೇಸ್". ಇನ್ನೂ ನಾಗ ಭೂಷಣ್ ಅವರ ವಿಚಾರದ ಬಗ್ಗೆ ನಾವು ಹೊಸದಾಗಿ ಹೇಳಬೇಕಾಗಿಲ್ಲ. ಕಳೆದ ವಾರ ತಾವು ಚಲಾಯಿಸುತ್ತಿದ್ದ ಗಾಡಿ ಆಯಾಮ ತಪ್ಪಿ ಇಬ್ಬರು ವೃದ್ದ ದಂಪತಿಗೆ ಡಿಕ್ಕಿ ಹೊಡೆದಿರುವುದು ಸಾಕ್ಷಿ ಸಮೇತ ಎಲ್ಲರ ಮುಂದೆ ಅನಾವರಣ ಆಗಿದೆ. ಈಗ ಸತತ ಒಂದು ವಾರದ ಬಳಿಕ ಬೆಲ್ ಮೇಲೆ ಆಚೆ ಬಂದಿದ್ದ ನಾಗ ಭೂಷಣ್ ಅವರು ತಮ್ಮ ತಪ್ಪಿನ ಬಗ್ಗೆ ಸಂಚಿತ್ತವಾಗಿ ಮಾತನಾಡಿದ್ದಾರೆ. ಇನ್ನೂ ನಾಗ ಭೂಷಣ್ ಅವರು ರಾತ್ರಿ ತಾವೇ ಕಾರು ಚಾಲನೆ ಮಾಡಿಕೊಂಡು ಬರುವ ವೇಳೆಯಲ್ಲಿ ಆಯಾಮ ತಪ್ಪಿ ಅಲ್ಲಿ ಬದಿಯಲ್ಲಿ ನಿಂತಿದ್ದ ಇಬ್ಬರು ವೃದ್ಧರಿಗೆ ಹೊಡೆದಿದ್ದು. ಆ ಕ್ಷಣದಲ್ಲಿ ವೃದ್ದೆಯು ಬಾರಿ ಪೆಟ್ಟಿನಿಂದ ತನ್ನ ಉಸಿರು ಚೆಲ್ಲಿದ್ದರೆ ಇತ್ತಾ ವೃದ್ಧನ ಸ್ಥಿತಿ ಕೊಡ ಚಿಂತಾಜನಕವಾಗಿದೆ.
ಇನ್ನೂ ಈ ಪ್ರಕರಣದಿಂದ ನಾಗ ಭೂಷಣ್ ಅವರ ಕೆರಿಯರ್ ಗೆ ಕಪ್ಪು ಚುಕ್ಕೆ ಬಂದಿದ್ದು ತಮ್ಮ ತಪ್ಪನ್ನು ಎಲ್ಲರ ಮುಂದೆ ಒಪ್ಪಿಕೊಳ್ಳಲು ನಾಗ ಭೂಷಣ್ ಅವರು ನೆನ್ನೆ ಮಾದ್ಯಮಗಳ ಮುಂದೆ ಬಂದು ನಾನು ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ನನಗೆ ತಿಳಿದಿದೆ. ಇನ್ನೂ ಅಪಘಾತದಲ್ಲಿ ಕಳೆದುಕೊಂಡವರ ನೋವು ಏನೆಂದು ಕೂಡ ನನಗೆ ತಿಳಿದಿದೆ ಏಕೆಂದರೆ ನಾವು ಕೂಡ ಅಪಘಾತದಲ್ಲಿ ನನ್ನ ತಂದೆಯನ್ನು ಕಳೆದುಕೊಂಡಿದ್ದೇವೆ. ಹೀಗಿರುವಾಗ ನಾನು ಹೊಡೆದ ಬಳಿಕ ಅಲ್ಲಿಂದ ಹೊಡೀ ಹೋಗುವ ಪ್ರಯತ್ನ ಮಾಡಲಿಲ್ಲ ಅಲ್ಲಿಯೇ ಇದ್ದು ಮುಂದಿನ ಕ್ರಮದ ಬಗ್ಗೆ ನೋಡಿಕೊಂಡೆ ಆದರೆ ಒಂದು ಜೀವನ ನನ್ನ ಕೈಯಿಂದ ಹೋದ ನೋವನ್ನು ನಾನು ಭರಿಸಲು ಸಾಧ್ಯವಾಗಿಲ್ಲ ಹಾಗಾಗಿ ನಾನು ಮಾದ್ಯಮಗಳ ಮುಂದೆ ಬಂದು ನಿಲ್ಲಲು ಇಷ್ಟು ಸಮಯ ಬೇಕಾಯಿತು. ಆದರೆ ನಾನು ಇನ್ನೂ ಆ ಕುಟುಂಬವನ್ನು ಬೇಟಿ ಮಾಡುವ ಪ್ರಯತ್ನ ಮಾಡಿಲ್ಲ ಏಕೆಂದರೆ ಅವರ ಮುಂದೆ ನಿಲ್ಲುವ ದೈರ್ಯ ಕೂಡ ನನಗೆ ಇಲ್ಲ ಎಂದು ಬಹಿರಂಗವಾಗಿ ತಮ್ಮ ತಪ್ಪಿನ ಕ್ಷಮೆ ಯಾಚಿಸಿದ್ದಾರೆ.
ಇನ್ನೂ ಈಗ ನೋಡುತ್ತಿರುವ ನಾಗ ಭೂಷಣ್ ಅವರ ಹಿಂದೆ ಒಂದು ಮುಗ್ಧತೆ ಹಾಗೂ ಕಷ್ಟ ಜೀವಿ ಅಡಗಿದೆ ಎಂದ್ರೆ ತಪ್ಪಾಗಲಾರದು. ಇನ್ನೂ ನಾಗ ಭೂಷಣ್ "1992 ಆಗಸ್ಟ್ 12" ರಂದು "ಚಾಮರಾಜ" ಜಿಲ್ಲೆಯಲ್ಲಿ ಜನಿಸುತ್ತಾರೆ. ಈಗ ನಟ ಎಂದು ಗುರುತಿಸಿಕೊಂಡಿರುವ ನಾಗ ಭೂಷಣ್ ಅವರು ಹಿಂದೆ "POD" ಅಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದರು.ಚಿಕ್ಕ ವಯಸ್ಸಿನಿಂದಲೂ ಕೊಡ ನವೋದಯ ಶಾಲೆಯಲ್ಲಿ ನಡೆಯುವ ಎಲ್ಲಾ ನಾಟಕದಲ್ಲಿ ಕೊಡ ಭಾಗವಹಿಸುತ್ತಾ ಬಂದವರು. ಆ ನಂತರ ನಟನೆಯಲ್ಲಿ ಹೆಚ್ಚಿನ ಆಸಕ್ತಿ ಬಂದ ಕಾರಣದಿಂದ "ನಟ ಡಾಲಿ" ಮತ್ತು ನಾಗ ಭೂಷಣ್ ಎಂಜಿನಿಯರ್ ಸ್ನೇಹಿತರಾಗಿದ್ದರು ಕಾರಣ ಒಂದೇ ನಟನಾ ಶಾಲೆಗೆ ಸೇರಿದರು. ಹೀಗೆ ನಟನೆಯನ್ನು ದಿರ್ಘವಾಗಿ ಪರಿಗಣಿಸಿ ಎಂಟರ್ಟೈನ್ ಮೆಂಟ್ ಬ್ಯುರೋ ಎನ್ನುವ ಚಾನಲ್ ಕೂಡ ಆರಂಭ ಮಾಡುತ್ತಾರೆ. ಅಲ್ಲಿ ಸಾಕಷ್ಟು ಕಿರು ಚಿತ್ರವನ್ನು ಕೂಡ ಬಿಡುಗಡೆ ಮಾಡಿ ಸಾಕಷ್ಟು ಹಂತಗಳನ್ನು ದಾಟಿದ ಬಳಿಕ ಈ ಸ್ಥಾನದಲ್ಲಿ ಬಂದು ನಿಂತಿದ್ದಾರೆ.
( video credit : news first kannada )




