'ಒಳ್ಳೆ ಸೊಸೆ' ಅಂದ್ರೆ ಹೇಗಿರಬೇಕು ಗೊತ್ತಾ?ಎಂದು ಪಾಠ ಹೇಳಿದ ನಿವೇದಿತಾ ಗೌಡ :ನೆಟ್ಟಿಗರು ಗರಂ

ಸಾಮಾಜಿಕ ಮಾಧ್ಯಮದ ಯುಗದಲ್ಲಿ, ಚಂದನ್ ಮತ್ತು ನಿವೇದಿತಾ ಅವರ ಪ್ರತಿಯೊಂದು ನಡೆಯನ್ನೂ ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ ಮತ್ತು ಆಗಾಗ್ಗೆ ಟ್ರೋಲ್ ಮಾಡಲಾಗುತ್ತದೆ. ಇತ್ತೀಚೆಗೆ, ನಿವೇದಿತಾ ಬೆರಗುಗೊಳಿಸುವ ನೀಲಿ ಸೀರೆಯಲ್ಲಿ ಕಾಣಿಸಿಕೊಂಡರು, ಇದು ನೆಟಿಜನ್‌ಗಳು ಮತ್ತೊಂದು ಮದುವೆಯ ಬಗ್ಗೆ ಊಹಾಪೋಹಕ್ಕೆ ಕಾರಣವಾಯಿತು. ಆದರೆ, ಖಾಸಗಿ ಜಾಹೀರಾತಿಗಾಗಿ ನಿವೇದಿತಾ ಸೀರೆ ಉಟ್ಟಿದ್ದು ನಿಜ. ಅವಳು ಆಭರಣ ಅಂಗಡಿಯನ್ನು ಪ್ರಚಾರ ಮಾಡುತ್ತಿದ್ದಳು, ಆದರೆ ತಪ್ಪು ಮಾಹಿತಿಯು ತ್ವರಿತವಾಗಿ ಹರಡಿತು. ನಿವೇದಿತಾ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಆಕೆಯನ್ನು ಸಮರ್ಥಿಸಿಕೊಳ್ಳಲು ಮತ್ತು ದಾಖಲೆಯನ್ನು ನೇರಗೊಳಿಸಿದ್ದಾರೆ.
ಭಾಗ್ಯಲಕ್ಷ್ಮಿ ಸೀರಿಯಲ್ ತಂಡವನ್ನು ಭೇಟಿ ಮಾಡಿದ ನಿವೇದಿತಾ ಗೌಡ ಸೊಸೆಯೆಂದರೆ ಹೇಗಿರಬೇಕು ಎಂದು ವೀಕ್ಷಕರಿಗೆ ಪಾಠ ಮಾಡಿದ್ದಾರೆ, ಈಗ ಆ ಮಾತಿಗೆ ತುಂಬಾನೇ ಟ್ರೋಲ್ ಆಗುತ್ತಿದೆ. ನಿವೇದಿತಾ ಗೌಡರ ವೈಯಕ್ತಿಕ ಬದುಕಿಗೆ ಹೋಲಿಸಿ ಟ್ರೋಲ್ ಮಾಡುತ್ತಿದ್ದಾರೆ. ಆ ವೀಡಿಯೋ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವುದರಿಂದ ಈ ಆ ಚಾನಲ್‌ನ ಇನ್‌ಸ್ಟಾದಲ್ಲಿ ಮತ್ತೊಂದು ತಂಡದ ಜೊತೆ ನಿವೇದಿತಾ ಗೌಡ ಮಾತನಾಡಿರುವ ಪ್ರೋಮೋ ಮಾತ್ರ ಕಾಣಬಹುದು
ಕಲರ್ಸ್ ಕನ್ನಡ ಪ್ರತಿವರ್ಷ ಅನುಬಂಧ ಅವಾರ್ಡ್ ಕಾರ್ಯಕ್ರಮ ನಡೆಸುತ್ತದೆ, ಅದರಲ್ಲಿ ಜನ ಮೆಚ್ಚಿದ ಕಿರುತೆರೆ ನಟ, ನಟ, ಸೀರಿಯಲ್ ಹೀಗೆ ಹಲವು ಅವಾರ್ಡ್‌ಗಳನ್ನು ನೀಡಲಾಗುವುದು, ಈಗಾಗಲೇ ಅದರ ಸಿದ್ಧತೆ ನಡೆಯುತ್ತಿದ್ದು, ಪ್ರೊಮೋ ಬಿಡುತ್ತಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ ನಿವೇದಿತಾ ಗೌಡ ಸೀರಿಯಲ್ ಕುಟುಂಬಗಳನ್ನು ಭೇಟಿ ಮಾಡಿ ಆ ಕುಟುಂಬವನ್ನು ಮಾತನಾಡಿಸಿ, ಆ ಸೀರಿಯಲ್ ಪಾತ್ರಗಳ ಬಗ್ಗೆ ಪರಿಚಯ ಕೇಳಿ ಬರುವಂಥ ಪ್ರೋಮೋ ಅದು.
ಒಳ್ಳೆ ಸೊಸೆ ಹೇಗಿರಬೇಕು ಎಂದು ವೀಕ್ಷಕರಿಗೆ ಹೇಳಿದ ನಿವೇದಿತಾ ಗೌಡ ವೀಡಿಯೋ ತುಂಬಾನೇ ಟ್ರೋಲ್ ಆಗುತ್ತಿದೆ.ಇದಕ್ಕೆ ನೆಟ್ಟಿಗರು ತುಂಬಾ ಖಾರವಾಗಿ ಕಾಮೆಂಟ್ ಮಾಡುತ್ತಿದ್ದಾರೆ . ಅಮ್ಮ ತಾಯಿ ನೀನು ಸೊಸೆಯಾಗಿ ಸರಿಯಾಗಿ ಬಾಳಲಿಲ್ಲ . ಈಗ ಇನ್ನೊಬ್ಬರಿಗೆ ಪಾಠ ಹೇಳಲು ಬರ ಬೇಡ . ಮೊದಲು ನೀನು ಸರಿಯಾಗಿ ಬಾಳುವುದು ಕಲಿ ಎಂದು ನಿವೇದಿತಾ ಗೌಡ ರಿಗೆ ಪಾಠ ಹೇಳಿದ್ದಾರೆ ನೀವು ಏನಂತೀರಾ ?
( video credit; colours Kannada)