ನೀರಿನ ಮೇಲೆ ತೇಲುವ ವಿಶ್ವದ ಏಕೈಕ ವಿಗ್ರಹ! ಈ ವಿಗ್ರಹದ ರೋಚಕ ಕಥೆ ಕೇಳಿದರೆ ಶಾಕ್ ಆಗುತ್ತಿರಾ?… ವಿಡಿಯೋ ನೋಡಿ

ನೀರಿನ ಮೇಲೆ ತೇಲುವ ವಿಶ್ವದ ಏಕೈಕ ವಿಗ್ರಹ! ಈ ವಿಗ್ರಹದ ರೋಚಕ ಕಥೆ ಕೇಳಿದರೆ ಶಾಕ್ ಆಗುತ್ತಿರಾ?…   ವಿಡಿಯೋ ನೋಡಿ

ನಮ್ಮ ದೇಶದಲ್ಲಿ ಸಾಕಷ್ಟು ವಿಸ್ಮಯ ಹಾಗೂ ಅದ್ಭುತ ಪವಾಡಗಳನ್ನು ಮಾಡುವ ದೇವಸ್ಥಾನಗಳಿವೆ, ಇನ್ನು ಇಂತಹ ದೇವಸ್ಥಾನಗಳ ರಹಸ್ಯ ತಿಳಿಯಲು ಅದೆಷ್ಟೋ ವಿಜ್ಞಾನಿಗಳು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೆ ಇಂದಿನ ವರೆಗೂ ಯಾರ ಕೈಯಲ್ಲೂ ಸಾಧ್ಯವಾಗಿಲ್ಲ. ಇನ್ನು ಇಂದು ನಾವು ನಿಮಗೆ ಇಂತಹ ಒಂದು ವಿಸ್ಮಯಕಾರಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡುತ್ತವೆ. ಭಗವಾನ್ ವಿಷ್ಣು ಹಾಗೂ ಶಿವ ಇಬ್ಬರೂ ಸಹ ಈ ಸೃಷ್ಟಿಯನ್ನು ಸಂರಕ್ಷಿಸುವ ಕೆಲಸವನ್ನು ವಹಿಸಿಕೊಂಡಿದ್ದಾರೆ ಎನ್ನುವುದು ಎಲ್ಲರಿಗೂ ಸಹ ಗೊತ್ತಿರುವ ವಿಚಾರ. ಮಹಾವಿಷ್ಣುವನ್ನು ನಾವು ಮೂರ್ತಿಯ ಆಕಾರದಲ್ಲಿ ಪೂಜಿಸಿದರೆ, ಇನ್ನು ಮಹಾಶಿವನನ್ನು ಲಿಂಗಾಕಾರದಲ್ಲಿ ಪೂಜಿಸುತ್ತೇವೆ.

ಆದರೆ ಇಲ್ಲೊಂದು ವಿಗ್ರಹದಲ್ಲಿ ನಾವು ಶಂಕರ ಹಾಗೂ ವಿಷ್ಣು ಇಬ್ಬರನ್ನು ಒಂದೇ ರೂಪದಲ್ಲಿ ಕಾಣಬಹುದು. ಈ ಮೂರ್ತಿ ನೋಡಲು ವಿಷ್ಣುವಿನಂತೆ ಕಂಡರೂ ಸಹ ಇದರ ನೆರಳಿನಲ್ಲಿ ನಾವು ಪರಶಿವನನ್ನು ಕಾಣಬಹುದು. ಹಾಗಾದರೆ ಈ ಮೂರ್ತಿ ಎಲ್ಲಿದೆ ಎನ್ನುವ ನಿಮ್ಮ ಈ ಪ್ರಶ್ನೆಗೆ ಉತ್ತರ ನೀಡುತ್ತೇವೆ ಈ ಪುಟವನ್ನು ಪೂರ್ತಿಯಾಗಿ ಓದಿ..  

ಹಿಂದುಗಳು ಕೇವಲ ನಮ್ಮ ದೇಶದಲ್ಲಿ ಮಾತ್ರವಿಲ್ಲ ಹೊರದೇಶಗಳಲ್ಲೂ ಸಹ ಹಿಂದುಗಳು ಇದ್ದಾರೆ. ಇದೀಗ ವಿಸ್ಮಯಕಾರಿ ಹಾಗೂ ಚಮತ್ಕಾರದಿಂದ ಕೂಡಿರುವ ಭಗವಾನ್ ಬುದ್ಧ ನೀಲಕಂಠ ದೇವಸ್ಥಾನದ ಬಗ್ಗೆ ಮಾಹಿತಿ ನೀಡುತ್ತೇವೆ ಬನ್ನಿ. ಈ ದೇವಸ್ಥಾನ ಇರುವುದು ನೇಪಾಳದ ಕಾಟ್ಮಂಡುವಿನಲ್ಲಿ. ಈ ವಿಗ್ರಹ ಮತ್ತೊಂದು ವಿಶೇಷತೆ ಏನೆಂದರೆ, ಶ್ರೀ ಮಹಾನ್ ವಿಷ್ಣು ಶಿರಸಾಗರದಲ್ಲಿ ಶೇಷನಾಗನ ಮೇಲೆ ಮಲಗಿಕೊಂಡಿರುವ ರೀತಿ ವಿಗ್ರಹ ಕಾಣುತ್ತದೆ.  ( video credit : focus )

ಇನ್ನು ಈ ಪ್ರದೇಶದ ಕಥೆ ಏನು ಎಂದು ಕೇಳಿದರೆ, ಒಬ್ಬ ರೈತ ಒಮ್ಮೆ ಉಳುಮೆ ಮಾಡುವಾಗ ಆತನ ನೇಗಿಲು ಒಂದು ಕಲ್ಲಿಗೆ ತಾಗಿ ಅದರಿಂದ ರಕ್ತಸ್ರಾವವಾಗಲು ಶುರುವಾಗಿದೆ. ಅದನ್ನು ನೋಡಿ ಅಚ್ಚರಿಗೊಂಡ ಅಲ್ಲಿನ ಜನರು ಏನೆಂದು ನೋಡಿದರೆ ಅಲ್ಲಿ ಈ ವಿಗ್ರಹ ದೊರಕಿದೆ. ಇನ್ನು ಆ ವಿಗ್ರಹದಿಂದ ನೀರು ಹುಕ್ಕಿ ಬರುತ್ತಿರುವುದನ್ನು ನೋಡಿ ಅಲ್ಲಿನ ಜನರು ಆಶ್ಚರ್ಯಗೊಂಡಿದ್ದಾರೆ.

ಹೌದು ಈ ಬುದ್ಧ ನೀಲಕಂಠ ವಿಗ್ರಹ ನೀರಿನ ಮಧ್ಯೆ ತೇಲುತ್ತಿದ್ದು, ಇದರ ಕೆಳ ಭಾಗದಲ್ಲಿ ಪರಶಿವನ ವಿಗ್ರಹವಿದೆ ಎಂದು ಇಲ್ಲಿನ ಜನರು ನಂಬುತ್ತಾರೆ. ಆದರೆ ಇದನ್ನು ನಿರೂಪಿಸಲು ಅದೆಷ್ಟೇ ಪ್ರಯತ್ನ ಮಾಡಿದರು ಸಹ ಇದರ ಬಗ್ಗೆ ಒಂದು ಸಣ್ಣ ಸೂಳಿವು ಸಹ ಸಿಗಲಿಲ್ಲ. ಇನ್ನು ಈ ವಿಗ್ರಹ ಸರೋವರದ ಮಧ್ಯದಲ್ಲಿ ತೇಲುತ್ತಿದ್ದು, ಈ ವಿಗ್ರಹ ನೋಡಲು ವಿಷ್ಣುವಿನಂತೆ ಕಂಡರು, ಈ ವಿಗ್ರಹವನ್ನು ಜನರು ಬುದ್ಧ ನೀಲಕಂಠ ಎಂದು ಕರೆಯುತ್ತಾರೆ.

ಏಕೆಂದರೆ ಮಹಾಶಿವರಾತ್ರಿಯ ದಿನ ಈ ದೇವರಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಲಾಗುತ್ತದೆ ಈ ಸಮಯದಲ್ಲಿ ಸರೋವರದಲ್ಲಿ ಈ ವಿಗ್ರಹದಿಂದ ಬರುವ ನೆರಳು ಪರಶಿವನ ರೀತಿ ಕಾಣುತ್ತದೆ. ನೆರಳು ಈ ರೀತಿ ಕಾಣಲು ಕಾರಣ ಏನು ಎನ್ನುವುದರ ಬಗ್ಗೆ ಇನ್ನು ಯಾವುದೇ ಖಚಿತವಾದ ಕಾರಣ ದೊರಕಿಲ್ಲ.