ವರ್ತೂರು ತನೀಷ ಬೆನ್ನಲ್ಲೇ ಪ್ರತಾಪ್ ಗೂ ಎದುರಾದ ಪೊಲೀಸ್ ಸಂಕಷ್ಟ..! ಅಸಲಿಗೆ ಪ್ರತಾಪ್ ಮಾಡಿದ ತಪ್ಪಾದರೂ ಏನು..?

ವರ್ತೂರು ತನೀಷ ಬೆನ್ನಲ್ಲೇ ಪ್ರತಾಪ್ ಗೂ ಎದುರಾದ ಪೊಲೀಸ್ ಸಂಕಷ್ಟ..! ಅಸಲಿಗೆ ಪ್ರತಾಪ್ ಮಾಡಿದ ತಪ್ಪಾದರೂ  ಏನು..?

ಖಾಸಗಿ ವಾಹಿನಿ ಆಗಿರುವ ಕಲರ್ಸ್ ಕನ್ನಡದಲ್ಲಿ ಇದೀಗ ಬಿಗ್ ಬಾಸ್ ಸೀಸನ್ 10 ಆರಂಭ ಆಗಿದೆ. ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಈ ಬಾರಿಯೂ ಕೂಡ ಸಕತ್ತಾಗಿ ಸದ್ದು ಮಾಡುತ್ತಿದೆ.. ಹೌದು ಹೊಸ ಹೊಸ ಟಾಸ್ಕ್ಗಳ ಮೂಲಕವೇ, ಹೊಸ ಹೊಸ ಸ್ಪರ್ಧಿಗಳ ಆಯ್ಕೆ ಆಗಿದ್ದು ಆಟದ ವಿಧಾನ ಮತ್ತು ಆಟದ ವೈಖರಿ ತುಂಬಾನೇ ಮಜಭೂತಾಗಿದೆ ಎನ್ನಬಹುದು. ವರ್ಷದಿಂದ ವರ್ಷಕ್ಕೆ ನಮ್ಮ ಕನ್ನಡದ ಬಿಗ್ ಬಾಸ್ ಇಡೀ ಭಾರತದಲ್ಲಿ ತುಂಬಾನೇ ಪ್ರಸಿದ್ಧಿ ಪಡೆಯುತ್ತಿರುವ ಕಾರ್ಯಕ್ರಮ. ಅದರಲ್ಲಿ ನಮ್ಮ ಕಿಚ್ಚ ಸುದೀಪ್ ಅವರು ಹೋಸ್ಟ್ ಮಾಡುವ ರೀತಿ, ಅವರು ನಡೆಸಿಕೊಡುವ ನಿರೂಪಣೆಯನ್ನ ಯಾರು ಮಾಡಲು ಆಗುವುದಿಲ್ಲ. ಅಷ್ಟರಮಟ್ಟಿಗೆ ಫೇಮಸ್ ಕಿಚ್ಚ ಸುದೀಪ್ ಅವರ ನೇತೃತ್ವದ ಈ ಬಿಗ್ ಬಾಸ್ ಶೋ.

ಈ ಬಾರಿಯ ಬಿಗ್ ಬಾಸ್ ಈಗಾಗಲೇ ಹೊಸ ಹೊಸ ತಿರುವುಗಳ ಪಡೆದುಕೊಂಡಿದ್ದು ಆರಂಭದಲ್ಲಿ ತುಂಬಾ ಸಂಕಷ್ಟ ಎದುರಿಸುವಂತಾಯಿತು. ಆರಂಭದಲ್ಲಿಯೇ ಇನ್ನಿಬ್ಬರು ಸ್ಪರ್ದಿಗಳ ವೇದಿಕೆ ಮೇಲೆ ಕರೆಸಿ, ನಮ್ಮನ್ನು ಸೆಲೆಕ್ಟ್ ಮಾಡಲಿಲ್ಲ ಎಂಬ ಆರೋಪದ ಮಾತನ್ನು ಕೂಡ ಎದುರಿಸುವಂತೆ ಆಯ್ತು. ನಂತರದಲ್ಲಿ ವರ್ತೂರು ಸಂತೋಷ ಅವರು ಎರಡೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಸೀದಾ ಅರೆಸ್ಟ್ ಆಗಿ ಪೊಲೀಸ್ ಠಾಣೆ ಮೆಟ್ಟಿಲು ಏರಿದರು. ನಂತರ ಬಳೆ ವಿಚಾರವಾಗಿ ಕೂಡ ತುಂಬಾನೇ ಚರ್ಚೆ ಆಗಿದ್ದನ್ನು ನೀವು ನೋಡಿದ್ದೀರಿ. ಇದಾದ ಬಳಿಕ ತನಿಷ ಕುಪ್ಪಂಡ ಅವರ ಮೇಲೆ ಇದೀಗ ಕೇಸ್ ದಾಖಲಾಗಿದೆ ಎಂದು ತಿಳಿದು ಬಂದಿದೆ.   

ಹೌದು ಬೋವಿ ಜನಾಂಗದ ಮೇಲೆ ಮಾಡಿರುವ ಪದ ಬಳಕೆಯಿಂದಾಗಿ ಈ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ವರ್ತೂರು ಸಂತೋಷ್ ಅವರು ಹುಲಿ ಉಗರಿನ ಪೆಂಡೆಂಟ್ ಧರಿಸಿದ್ದ ಕಾರಣಕ್ಕಾಗಿ ಅರೆಸ್ಟ್ ಆಗಿದ್ದರು.. ಈಗ ತನೀಶಾ ಜಾತಿ ನಿಂದನೆ ಮಾಡಿದ್ದಾರೆ, ಅವರಿಗೆ ಪದಬಳಕೆ ಮೇಲೆ ಹಿಡಿತ ಇಲ್ಲ ಎಂದು ಪದ್ಮ ಎನ್ನುವವರು ದೂರು ದಾಖಲಿಸಿದ್ದಾರಂತೆ.. ಜೊತೆಗೆ ಪ್ರತಾಪ್ ಅವರ ಮೇಲೆಯೂ ಕೂಡ ಪೊಲೀಸ್ ದೃಷ್ಟಿ ಬಿದ್ದಿದ್ದು, ಅಷ್ಟು ನೀಟಾಗಿ ಆಡುತ್ತಿರುವ ಪ್ರತಾಪ್ ಅಸಲಿಗೆ ಮಾಡಿದ ತಪ್ಪಾದರು ಏನು ಎಂದು ಬಿಗ್ ಬಾಸ್ ವೀಕ್ಷಕರು ಕೇಳುತ್ತಿದ್ದಾರೆ.. ಪ್ರತಾಪ್ ಏನು ತಪ್ಪು ಮಾಡಿದ್ದಾರೆ ಗೊತ್ತಾ ಈ ವಿಡಿಯೋ ನೋಡಿ, ಮತ್ತು ಈ ವಿಡಿಯೋ ಕುರಿತು ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದ. ( VIDEO CREDIT : DEEP FOCUS KANNADA )