ಮಳೆಗಾಗಿ ಕಾಯುತ್ತಿದ್ದ ಬೆಂಗಳೂರು ಜನರಿಗೆ ಬಾರಿ ನಿರಾಸೆ ;ಭಾರತೀಯ ಹವಾಮಾನ ಇಲಾಖೆ ಪ್ರಕಾರ ಯಾವಾಗ ಮಳೆ ನೋಡಿ

ಮಳೆಗಾಗಿ ಕಾಯುತ್ತಿದ್ದ ಬೆಂಗಳೂರು ಜನರಿಗೆ ಬಾರಿ ನಿರಾಸೆ ;ಭಾರತೀಯ ಹವಾಮಾನ ಇಲಾಖೆ ಪ್ರಕಾರ ಯಾವಾಗ ಮಳೆ ನೋಡಿ

ಮಳೆಗಾಗಿ ಕಾಯುತ್ತಿದ್ದ ಬೆಂಗಳೂರು ಜನರಿಗೆ ಬಾರಿ ನಿರಾಸೆ ಕಾದಿದೆ . ಬಿಸಿಲಿನ ಬೇಗೆಯಿಂದ ತತ್ತರಿಸಿತ್ತುರುವ ಜನರಿಗೆ ಮತ್ತೆ ಇನ್ನು ಒಂದು ವಾರ ಮಳೆ ತಡವಾಗಲಿದೆ . ಅಲ್ಲಿ ತನಕ ಬೆಂಗಳೂರು ಜನರಿಗೆ ಬಿಸಿಲಿನ ಬೇಗೆಯಿಂದ ತಪ್ಪಿಸಿ ಕೊಳ್ಳಲು ಬೇರೆ ದಾರಿಯಿಲ್ಲ 

ಬೆಂಗಳೂರಿನ ಮಳೆಯ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ. ಯುಗಾದಿ ನಂತರದ ಮಳೆಯ ಮುನ್ಸೂಚನೆಯಿಂದ ಉತ್ಸಾಹದಲ್ಲಿರುವ ನಗರದ ನಿವಾಸಿಗಳು ಈಗ ಸ್ವಲ್ಪ ಪರಿಹಾರಕ್ಕಾಗಿ ಇನ್ನೊಂದು ವಾರ ಕಾಯಬೇಕಾಗಿದೆ, ಭಾರತೀಯ ಹವಾಮಾನ ಇಲಾಖೆ (IMD) ಸುಮಾರು ಒಂದು ವಾರದವರೆಗೆ ಮಳೆಯ ಸಾಧ್ಯತೆಯನ್ನು ಮುಂದೂಡಿದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ತುಂತುರು ಮಳೆಯಾಗಿದೆ.

ಬೆಂಗಳೂರಿನ IMD ಯ ಹಿರಿಯ ವಿಜ್ಞಾನಿ ಎ ಪ್ರಸಾದ್ ಅವರು ವಿವರಿಸಿದರು, “ಮಳೆ ಬೆಂಗಳೂರನ್ನು ತೊಟ್ಟಿ ಮತ್ತು ಗಾಳಿಯ ಒಮ್ಮುಖದ ಸ್ಥಾನದಿಂದ ನಿರ್ಧರಿಸಲಾಗುತ್ತದೆ. ಪ್ರಸ್ತುತ, ಯಾವುದೇ ಗಾಳಿಯ ಒಮ್ಮುಖವಿಲ್ಲ, ಮತ್ತು ತೊಟ್ಟಿಯ ಸ್ಥಾನವು ಪ್ರತಿಕೂಲವಾಗಿದೆ, ಇದರಿಂದಾಗಿ ಮಳೆಯ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಟ್ರಫ್ ಪೂರ್ವಕ್ಕೆ ಚಲಿಸಿದರೆ ಬೆಂಗಳೂರು ಮಳೆಯನ್ನು ನಿರೀಕ್ಷಿಸಬಹುದು.  

ಇನ್ನೂ ಬೇಸಿಗೆಯಲ್ಲಿ ಇಷ್ಟು ಬಿಸಿಲನ್ನು ನಾವು ನಿರೀಕ್ಷಿಸಬಹುದು ಆದರೆ ಬೇಸಿಗೆಯಲ್ಲದ ತಿಂಗಳಲ್ಲಿ ಅಂದರೆ ಡಿಸೆಂಬರ್ ಹಾಗೂ ಜನವರಿಯಲ್ಲಿ ಕೊಡ ಬಿಸಿಲಿನ ತಾಪವನ್ನು ನಾವು ಹೆಚ್ಚಾಗಿಯೇ ಅನುಭವಿಸಿದ್ದೇವೆ. ಇನ್ನೂ ಹಲವಾರು ಕಾಲಜ್ಞಾನಿಗಳು ಹೇಳಿರುವ ಪ್ರಕಾರ ಯುಗಾದಿ ಕಳೆದ ಬಳಿಕ ಮಳೆ ಆಗಲಿದೆ ಎಂಬ ಭವಿಷ್ಯ ಕೊಡ ನೀಡಿದಿದ್ದರು ಆದರೆ ಈಗ ಯುಗಾದಿ ಕಳೆದು ಒಂದು ತಿಂಗಳು ಆಗಿದ್ದರು ಕೊಡ ಮಳೆಯ ಯಾವ ಮುಸೂಚನೆ ಕೊಡ ಸಿಗುತ್ತಿಲ್ಲ. ಇನ್ನೂ ಕಳೆದ ಎರಡು ವಾರಗಳಿಂದ ಬೆಂಗಳೂರಿನಲ್ಲಿ ಕೊಂಚ ಬಿಸಿಲಿನ ತಾಪ ಕೊಡ ಕುಗ್ಗಿತ್ತು ಹೀಗಿರುವುದನ್ನು ಕಂಡು ತಾಪಮಾನ ಇಲಾಖೆ ಬೆಂಗಳೂರಿನಲ್ಲಿ ಮಳೆಯಾಗುವ ಸಾದ್ಯತೆ ಇದೆ ಎಂದು ತಿಳಿಸಿದ್ದರು.

 ನಾವು ಎಲ್ಲರು ವರುಣ ದೇವರನ್ನು ಮಳೆ ಬರಲಿ ಎಂದು ಪ್ರಾರ್ಥಿಸೋಣ 

ಮಳೆ  ಬರದಿರುವುದಕ್ಕೆ ಜನರು ಯಾವ ರೀತಿ ಕಾಮೆಂಟ್ ಮಾಡಿದ್ದಾರೆ ನೋಡಿ 
"ಯಾರ ಕಾಲ್ಗುಣ ಕೈ ಗುಣ ಏನಿಲ್ಲ ಮರಗಳ ನಾಶ. ಕಾಂಕ್ರೀಟ್ ರಸ್ತೆ ಎಲ್ಲೆಲ್ಲೂ ಅಪಾರ್ಟ್ಮೆಂಟ್ ಗಳ ಹಾವಳಿ ಇದೆ ಕಾರಣ
ಬೇಸಿಗೆಯಲ್ಲಿ ಮಳೆ ಬಾ ಬಾ ಬಾ ಅಂದ್ರೆ ಎಲ್ಲಿ ಬರುತ್ತೆ ಬೇಸಿಗೆಯಲ್ಲಿ ಒಂದೆರೆಡು ಬಾರಿ ಮಳೆಯಾಗುವುದು ಸಹಜ ಅದನ್ನೇ ಬಂದಿಲ್ಲ ಬಂದಿಲ್ಲ ಅಂದರೆ ? "
"ಮಳೆಯೇ ಬರದ ಹಾಗೆ ಮಾಡಿರುವುದು ಮಾನವರಾದ ನಾವು ,ಅದನ್ನು ಸರಿಪಡಿಸಿಕೊಳ್ಳದೆ ಬಾ ಬಾ ಎಂದರೆ ಪ್ರಯೋಜನವೇನು ? "