ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಡುಪ್ಲಿಕೇಟ್ ರಶ್ಮಿಕ! ಅಸಲಿಗೆ ಈಕೆ ಯಾರು ಗೊತ್ತಾ?

ಸಾಮಾಜಿಕ ಜಾಲತಾಣಗಳಲ್ಲಿ  ಸದ್ದು ಮಾಡುತ್ತಿರುವ ಡುಪ್ಲಿಕೇಟ್ ರಶ್ಮಿಕ! ಅಸಲಿಗೆ ಈಕೆ ಯಾರು ಗೊತ್ತಾ?

ಸಾಮಾಜಿಕ ಜಾಲತಾಣಗಳ ಎಂದರೆ ಅದು ಮನೋರಂಜನೆಯ ಒಂದು ದೊಡ್ಡ ವೇದಿಕೆ. ಇನ್ನೂ ಈ ದೊಡ್ಡ ವೇದಿಕೆಯ ಮೂಲಕ ಅದೆಷ್ಟೋ ಕಲಾವಿದರ ಭವಿಷ್ಯಕ್ಕೆ ಒಂದು ಅವಕಾಶ ನೀಡುವ ಚಿಕ್ಕ ವೇದಿಕೆಯ ರೀತಿ ಸೃಷ್ಟಿ ಮಾಡಲಾಗಿತ್ತು. ಆದ್ರೆ ಇಂದು ಈ ಸಾಮಾಜಿಕ ಜಾಲತಾಣ ಒಂದು ಮನೋರಂಜನೆಯ ವೇದಿಕೆ ಹೇಳುವುದಕ್ಕಿಂತ ಕೆಟ್ಟ ಕೆಟ್ಟ ವಿಚಾರಗಳಿಗೆ ಪ್ರೇರೇಪಿತ ಮಾಡುವ ವೇದಿಕೆ ಆಗಿ ಬದಲಾಗುತ್ತಾ ಬಂದಿವೆ. ಇನ್ನೂ ಈ ವೇದಿಕೆ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿ ಎಲ್ಲರಿಗೂ ಕೊಡ ಪರಿಚಿತ ಮಾಡಿ ತಮ್ಮನ್ನು ತಾವು ಗುರುತಿಸಿಕೊಂಡು ಈ ಸಮಾಜದಲ್ಲಿ ಒಂದು ನೆಲೆ ಹಾಗೂ ಗುರುತನ್ನು ಮಾಡಿಕೊಳ್ಳುವ ವೇದಿಕೆಯಾಗಿತ್ತು. ಆದರೆ ಈಗ ಹಾಗಿಲ್ಲ ಈ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪಾಸಿಟಿವ್ ಗಿಂತ ನೆಗಟಿವ್ ಹೆಚ್ಚಾಗಿದೆ.

ಹೀಗಿದ್ದರೂ ಕೊಡ ಈ ಸಾಮಾಜಿಕ ಜಾಲತಾಣಗಳನ್ನು ನಾವು ಯಾವ ರೀತಿ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಕೊಡ ನಿಂತಿರುತ್ತದೆ. ಆದರೆ ಈ ಸೆಲಬ್ರೆಟಿಗಳ ಜೀವನ ಕೊಡ ಅಷ್ಟು ಸುಲಭವಲ್ಲ. ಇನ್ನೂ ಇವರ ಹೆಸರು ಹಾಗೂ ಫೋಟೋಗಳು ಒಳಿತಿನ ಕಾರ್ಯಕ್ಕೆ ಬಳಸುವುದಕ್ಕಿಂತ ಹೆಚ್ಚಾಗಿ ಕೆಟ್ಟ ಕೆಲಸಗಳಲ್ಲಿ ಅಥವಾ ನೆಗಟಿವ್ ಹರಡುವ ವಿಷಯಕ್ಕೆ ಅಥವಾ ಅವರ ಹೆಸರನ್ನು ಹಾಳು ಮಾಡುವ ಸಲುವಾಗಿ ಈ ರೀತಿಯ ಗಿಮಿಕ್ ಕೊಡ ಮಾಡಲಾಗುತ್ತದೆ. ಇದೀಗ ಈ ಸಮಸ್ಯೆಯಲ್ಲಿ ಸಿಲುಕಿರುವುದು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡು ಪಂಚ ಭಾಷಾ ನಟಿಯಾಗಿ ಗುರುತಿಸಿಕೊಂಡಿರುವ "ರಶ್ಮಿಕ ಮಂದಣ್ಣ".

ಹೌದು ! ಸ್ನೇಹಿತರೇ ಇತ್ತೀಚೆಗೆ ರಶ್ಮಿಕ ಮಂದಣ್ಣ ಅವರ ಲಿಫ್ಟ್ ನಲ್ಲಿ ಕಪ್ಪು ಬಟ್ಟೆ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದೆ. ಆಗ ರಶ್ಮಿಕ ಅವರು ಇಷ್ಟು ಬೋಲ್ಡ್ ಆಗಿಬಿಟ್ಟರಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿತ್ತು. ಆದರೆ ಆ ಫೋಟಿನಲ್ಲಿ ಇದ್ದವರು "ಝರಾ ಪಟೇಲ್". ಇನ್ನೂ ಆಕೆಯ ಮುಖಕ್ಕೆ ರಶ್ಮಿಕ  ಅವರ ಫೋಟೋ ಅಟ್ಯಾಚ್ ಮಾಡಲಾಗಿತ್ತು. ಆದರೆ ಆ ಫೋಟೋ ರಶ್ಮಿಕ ಅವರದ್ದೇ ಎನ್ನುವ ರಿತಿಯಿದ್ದ ಕಾರಣ ಸಾಕಷ್ಟು ವೈರಲ್ ಆಗಿತ್ತು. ಆದರೆ ಈಗ ಅಭಿಷೇಕ್ ಎನ್ನುವವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಫೋಟೋಗಳನ್ನು ಹಾಗೂ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಎಲ್ಲರ ಪ್ರಶ್ನೆ ಹಾಗೂ ಟೀಕೆಯ ಮಾತುಗಳಿಗೆ ಬ್ರೇಕ್ ಹಾಕಿದ್ದಾರೆ.