ಬಾರದ ಲೋಕಕ್ಕೆ ಪಯಣ ಬೆಳೆಸಿದ ಸ್ಯಾಂಡಲ್ ವುಡ್ ನ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ! ಏನಾಗಿತ್ತು ಗೊತ್ತಾ?

ಬಾರದ ಲೋಕಕ್ಕೆ ಪಯಣ ಬೆಳೆಸಿದ ಸ್ಯಾಂಡಲ್ ವುಡ್ ನ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ! ಏನಾಗಿತ್ತು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹಿರಿಯ ಕಲಾವಿದರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಲೇ ಬರುತ್ತಿದೆ ಎಂದು ಹೇಳಬಹುದು. ಇನ್ನೂ ಕಳೆದ ವರ್ಷ ಸಾಕಷ್ಟು ವರ್ಷಗಳಿಂದ ವೃದ್ಯಾಪ್ಯದ ಕಾಯಿಲೆ ಯಿಂದ ಬಳಲುತ್ತಿದ್ದ ಲೀಲಾವತಿ ಅವರು ಕೊಡ ವಿಧಿವಶ ಆಗಿದ್ದರು. ಹಾಗೆಯೇ ಕಳೆದ ತಿಂಗಳು ಆರೋಗ್ಯದಲ್ಲಿ ಏರು ಪೇರು ಆಗಿರುವ ಕಾರಣದಿಂದ ಹೇಮಾ ಚೌದರಿ ಕೊಡ ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗೆ ಒಬ್ಬರ ನಂತರ ಮತ್ತೊಬ್ಬರ ಎಂದು ನಮನ್ನು ಹಿರಿಯ ಕಲಾವಿದರು ಅಗಲುತ್ತಾ ಬರುತ್ತಿದ್ದಾರೆ. ಇದೀಗ ದ್ವಾರಕೀಶ್ ಅವರು ನಮ್ಮನ್ನು ಅಗಲಿದ್ದಾರೆ ಎಂಬ ಸ್ಫೋಟಕ ಸುದ್ದಿ ಹೊರಬಿದ್ದಿದೆ.

ಇನ್ನೂ ನಮ್ಮ ಸ್ಯಾಂಡಲ್ ವುಡ್ ನಲ್ಲಿ ನಟ ವಿಷ್ಣುವರ್ಧನ್ ಅವರ ಜೊತೆಗೆ ಸದಾ ತುಣುಕು ಹಾಕಿರುವ ಹೆಸರು ಎಂದರೆ ಅದು ನಟ ನಿರ್ದೇಶ ಹಾಗೂ ನಿರ್ಮಾಪಕ ಎಂದು ಹೆಸರು ಮಾಡಿರುವ  ದ್ವಾರಕೀಶ್. ಇನ್ನೂ ದ್ವಾರಕೀಶ್ ಅವರು 1942ರ ಆಗಸ್ಟ್ ತಿಂಗಳ 19ರಂದು ಮೈಸೂರಿನಲ್ಲಿ ಜನಿಸಿದರು. ಇನ್ನೂ ಇವರ ಬಾಲ್ಯವನ್ನು ಮೈಸೂರಿನ ಇಟ್ಟಿಗೆಗೂಡಿನಲ್ಲಿ ಬೆಳೆದವರು. ಕರ್ನಾಟಕದ ಕುಳ್ಳ ಎಂದು ಪ್ರಸಿದ್ದಿ ಪಡೆದಿರುವ ದ್ವಾರಕೀಶ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶಾರದಾ ವಿಲಾಸ್ ಅಲ್ಲಿ ಮುಗಿಸಿ ಮತ್ತು ಕಾಲೇಜನ್ನು ಬನುಮಯ್ಯ ಅವರ ಶಾಲೆಯಲ್ಲಿ ಪಡೆದುಕೊಂಡಿದ್ದಾರೆ.   ಹಾಗೆಯೇ ಅವರು ಸಿಪಿಸಿ ಪಾಲಿಟೆಕ್ನಿಕ್ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪಡೆದುಕೊಂಡಿದ್ದಾರೆ. 

ಇನ್ನೂ ದ್ವಾರಕೀಶ್ ಮತ್ತು ಅವರ ಸಹೋದರ ಮೈಸೂರಿನ ಗಾಂಧಿ ಚೌಕದಲ್ಲಿ "ಭಾರತ್ ಆಟೋ ಸ್ಪೇರ್ಸ್" ಎಂಬ ಆಟೋಮೋಟಿವ್ ಬಿಡಿಭಾಗಗಳಲ್ಲಿ ತಮ್ಮದೇ ಆದ ವ್ಯವಹಾರವನ್ನು ಪ್ರಾರಂಭಿಸಿದರು. ಹೀಗೆ ಮನೆಯ ಕಷ್ಟವನ್ನು ಸುಧಾರಿಸಲು ಈ ಕೆಲ್ಸ ನಿರ್ವಹಣೆ ಮಾಡುತ್ತಾ ಇದ್ದರೂ ಆದ್ರೆ ಇವರ ಚಿಕ್ಕವಸ್ಸಿನಿಂದಲೇ ಕನಸಾಗಿದ್ದ ನಟನೆ ಇವರನ್ನು ಸೆಳೆಯುತ್ತಾ ಬಂತು. ಆಗ ತಮ್ಮ ಕನಸನ್ನು ಹುಡುಕಿಕೊಂಡು ಹೋರಟ ನಟ ದ್ವಾರಕೀಶ್ ಅವರು ಬಂದಿದ್ದು ಗಾಂಧಿ ನಗರದಲ್ಲಿ ಕಷ್ಟದಿಂದಲೇ ತಮ್ಮ ಸಿನಿಮಾ ಪಯಣವನ್ನು ಶುರುಮಾಡಿದ ದ್ವಾರಕೀಶ್ ಅವರು ಬಹಳ ವರ್ಷಗಳ ಶ್ರಮದ ಪ್ರತಿ ಫಲವಾಗಿ ಇಂದು ನಟ ನಿರ್ದೇಶ ಹಾಗೂ ನಿರ್ಮಾಪಕನಾಗಿ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಇಂದು ತಮ್ಮ ಅಭಿಮಾನಿಗಳನ್ನು ಹಾಗೂ ಕುಟುಂಬದವರನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೇ ಎಂದು ಸ್ಫೋಟಕ ಮಾಹಿತಿ ಹೊರಗಡೆ ಬಿದ್ದಿದೆ. ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ 1942 ಆಗಸ್ಟ್ 19ರಂದು ಜನಿಸಿದ ಇವರು ಕನ್ನಡದ ಪ್ರತಿಭಾನ್ವಿತ ನಟರಾಗಿ ಹೆಸರುವಾಸಿಯಾಗಿದ್ದರು.
ನಟ ದ್ವಾರಕೀಶ್‌ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಅವರ ಮನೆಯಲ್ಲಿಯೇ ನಿಧನರಾಗಿದ್ದಾರೆ