ನಾನು ಯಾಕಾದ್ರೂ ಮದುವೆ ಆದನೋ ಎಂದು ಕಣ್ಣೀರು ಹಾಕಿದ್ದ ಸೋನು..! ಅಂದು ಹೇಳಿದ್ದೇನು ನೋಡಿ
ಚಿತ್ರರಂಗದಲ್ಲಿ ಸಾಕಷ್ಟು ನಟಿಯರ ವೈಯಕ್ತಿಕ ಜೀವನ ತುಂಬಾನೇ ಹೇಳಿಕೊಳ್ಳುವ ಮಟ್ಟದಲ್ಲಿ ಸೊಗಸಾಗಿಲ್ಲ. ಕೆಲವರು ಚೆನ್ನಾಗಿ ವಯಕ್ತಿಕ ಜೀವನ ನಡೆಸಿದರೆ, ಇನ್ನು ಕೆಲವರು ನಾನು ಮದುವೆ ಆದರೂ ಯಾಕದೇನೋ, ಇಂತಹ ಗಂಡ ನನಗೆ ಸಿಕ್ಕಿದನಲ್ಲ ಎಂದು ದೇವರನ್ನು ಬೈಕೊಂಡು ಜೀವನವನ್ನು ಕಳೆದವರು ಇದ್ದಾರೆ. ಹಾಗೆ ಈ ಜೀವನವನ್ನ ನೋವಿನಲ್ಲೇ ಕಳೆಯುತ್ತಲು ಇದ್ದಾರೆ. ಹೌದು ಅಂತಹವರಲ್ಲಿ ನಟಿ ಸೋನು ಗೌಡ ಅವರು ಕೂಡ ಒಬ್ಬರು..ವೆಡ್ಡಿಂಗ್ ಗಿಫ್ಟ್ ಸಿನಿಮಾ ಟ್ರೈಲರ್ ಲಾಂಚ್ ಮತ್ತು ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಸೋನು ಗೌಡ ಅವರು ತಮ್ಮ ವೈಯಕ್ತಿಕ ಮದುವೆ ವಿಚಾರವಾಗಿ ಮಾತನಾಡಿದ್ದರು.
ಸೋನು ಗೌಡ ಅವರಿಗೆ ನಿಮ್ಮ ವಿಚ್ಛೇದನ ಕುರಿತಾಗಿ, ನಿಮ್ಮ ವಯಕ್ತಿಕ ಜೀವನದ ಕಠಿಣ ಸಂದರ್ಭ ಯಾವಾಗ ಬಂದಿತು ನಿಮಗೆ ಎನ್ನುವ ಪ್ರಶ್ನೆಗೆ ಉತ್ತರ ಕೇಳಿದ್ದು, ಸೋನು ಗೌಡ ಅವರು ಪ್ರತಿಕ್ರಿಯೆ ನೀಡಿದರು. ನಮ್ಮ ಆ ನೋವನ್ನ ಹೇಳಿಕೊಳ್ಳವುದಕ್ಕಿಂತ ಅನುಭವಿಸುವುದು ತುಂಬಾನೇ ಕಷ್ಟ ಆದಂತದ್ದು. ಇವತ್ತಿನ ದುನಿಯಾದಲ್ಲಿ ದುಡ್ಡು ಮಾಡುವುದು ತುಂಬಾನೇ ಸುಲಭ, ಅದು ಎಜುಕೇಶನ್ ಇದ್ದರೆ ಸಾಕು, ಎಷ್ಟು ದುಡ್ಡು ಬೇಕಾದ್ರೂ ಮಾಡಬಹುದು, ಆದರೆ ಮದುವೆ ಆಗುವ ಮುನ್ನ 10 ಬಾರಿ ಯೋಚಿಸಿ ಎಂದು ಈಗಿನ ಯುವ ಪೀಳಿಗೆಗೆ ನಾನು ಹೇಳುತ್ತೇನೆ. ಕಾರಣ ಅಷ್ಟು ಕಷ್ಟವನ್ನು ನಾನು ಅನುಭವಿಸಿದ್ದೇನೆ, ಅದರಿಂದ ಬಲಿಷ್ಠ ಕೂಡ ಈಗ ಆಗಿದ್ದೇನೆ ಎಂದರು.
ಇವತ್ತು ದುಡ್ಡು ಬರುತ್ತೆ ಹೋಗುತ್ತೆ ಆದರೆ ಅದು ಇಂಪಾರ್ಟೆಂಟ್ ಅಲ್ಲ, ಮಲಗುವಾಗ ನೆಮ್ಮದಿಯಿಂದ ಮಲಗಬೇಕು ಅದು ಮುಖ್ಯ, ಅಂತಹ ಪಾರ್ಟ್ನರ್ ಸಿಕ್ಕರೆ ತುಂಬಾನೇ ಚೆನ್ನ ಎಂದು ನಟಿ ಸೋನು ಗೌಡ ಅವರು ಭಾವುಕರಾದರು. ಮದುವೆ ಮಾಡಿಕೊಂಡ ಮೇಲೆ ಹುಡುಗಿಯರು ಎಂದಿಗೂ ಡಿಪೆಂಡ್ ಆಗಬಾರದು. ನನ್ನ ಗಂಡ ಇದ್ದಾನೆ ಎಂದು ಅವನು ದುದಿತನೆ ಎಂದು ಎಂದೂ ಅಂದುಕೊಳ್ಳಬೇಡಿ, ನೀವೂ ದುಡಿರಿ, ಆದ್ರೆ ನನ್ನ ಗಂಡ ಇದ್ದಾನೆ ಎನ್ನುವ ಒಂದು ಪ್ರಜೆನ್ಸ್ ಇದ್ದರೆ ಸಾಕು, ಆತನ ಸಪ್ಪೋರ್ಟ್ ತುಂಬಾ ಮುಖ್ಯ ಆಗಿರುತ್ತದೆ ಅದೊಂದು ಇತ್ತು ಅಂದರೆ ನೀವು ದುಡಿಯುತ್ತಾಯಿದ್ದರೆ ಯಾವ ತೊಂದರೆಯೂ ಬರುವುದಿಲ್ಲ, ನಮಗಾಗಿ ಒಬ್ಬರು ಇದ್ದಾರೆ ಎಂದರೆ ಅಷ್ಟೇ ಸಾಕು ಜೀವನದಲ್ಲಿ ಎಂದು ತಮ್ಮ ಮದುವೆ ವಿಚಾರದ ಕುರಿತು ಕೆಲ ವಿಚಾರಗಳ ಹಂಚಿಕೊಂಡಿದ್ದಾರೆ ಸೋನು. ಇಲ್ಲಿದೆ ನೋಡಿ ಸೋನು ಗೌಡ ಅವರ ವಿಡಿಯೋ, ಒಮ್ಮೆ ನೋಡಿ, ಮತ್ತು ಈ ಕುರಿತಾಗಿ ನಿಮ್ಮ ಅಭಿಪ್ರಾಯ ಹೇಳಿ ಧನ್ಯವಾದಗಳು...
( video credit : tv 9 Kannada )




