ನಿಮ್ಮದೇ ಯು ಟ್ಯೂಬ್ ಚಾನೆಲ್ ಇಂದ ಲಕ್ಷ ಲಕ್ಷ ಸಂಪಾದಿಸ ಬೇಕಾ ? ಈ ವಿಡಿಯೋ ನೋಡಿ

ನಿಮ್ಮದೇ ಯು ಟ್ಯೂಬ್ ಚಾನೆಲ್ ಇಂದ ಲಕ್ಷ ಲಕ್ಷ ಸಂಪಾದಿಸ ಬೇಕಾ ? ಈ ವಿಡಿಯೋ ನೋಡಿ

ಸದ್ಯದ ಯುಗ ಇಂಟರ್ನೆಟ್ ಯುಗವಾಗಿದೆ. ಇಂದಿನ ಪ್ರತಿಯೊಬ್ಬರೂ ಇಂಟರ್ನೆಟ್ ನಲ್ಲಿ ಸತತವಾಗಿ ನಿರತರಾಗಿರುತ್ತಾರೆ. ಅಲ್ಲದೆ ಇಂದಿನ ಪ್ರತಿಯೊಬ್ಬರು ಇಂಟರ್ನೆಟ್ ಗೆ ತುಂಬಾ ಅಡಿಕ್ಟ್ ಆಗಿಬಿಟ್ಟಿದ್ದಾರೆ ಅವರಿಗೆ ಇಂಟರ್ನೆಟ್ ಉಪಯೋಗ ಮಾಡದೆ ನಿದ್ದೆಯೇ ಬರುವದಿಲ್ಲ. ಪ್ರತಿಯೊಬ್ಬರೂ ಇಂಟರ್ನೆಟ್ ಮತ್ತು ಮೊಬೈಲ್ ಇವರೆಡರ್ ಗುಲಾಮನಾಗಿದ್ದಾರೆ. ಒಂದು ವೇಳೆ ಒಂದು ಹೊತ್ತಿನ ಊಟ ದೊರೆಯದಿದ್ದರು ನಡೆಯುತ್ತೆ ಆದರೆ ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದೆ ಮನುಷ್ಯ ಬದಕಲು ಸಾಧ್ಯವಿಲ್ಲ ಅಷ್ಟೊಂದು ಅಡಿಕ್ಟ್ ಆಗಿದ್ದಾರೆ. ಆದರೆ ಈ ಇಂಟರ್ನೆಟ್ ಮತ್ತು ಮೊಬೈಲ ಮೂಲಕವೇ ಇಂದು ಪ್ರತಿಯೊಬ್ಬರೂ ರಾತ್ರೋರಾತ್ರಿ ಯೇ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ಯೂಟ್ಯೂಬರ್ ಎಂದರೆ ತಮ್ಮ ಚಾನೆಲ್ ಮೂಲಕ ಯೂಟ್ಯೂಬ್ ಪ್ಲಾಟ್‌ಫಾರ್ಮ್‌ನಲ್ಲಿ ವಿಡಿಯೋಗಳನ್ನು ರಚಿಸುವ ಮತ್ತು ಅಪ್ಲೋಡ್ ಮಾಡುವ ವ್ಯಕ್ತಿ. ಅವರು ತಮ್ಮ ವಿಡಿಯೋಗಳ ಮೂಲಕ ವೀಕ್ಷಕರಿಗೆ ಮಾಹಿತಿಯನ್ನು, ಮನರಂಜನೆಯನ್ನು, ಶಿಕ್ಷಣವನ್ನು ಅಥವಾ ಅನೇಕ ಬಗೆಯ ವಿಷಯಗಳನ್ನು ಒದಗಿಸುತ್ತಾರೆ. ಯೂಟ್ಯೂಬರ್‌ಗಳು ತಮ್ಮ ಕಾರ್ಯನೈಪುಣ್ಯದ ಮೇಲೆ ಆಧಾರಿತವಾಗಿ ಆರ್ಥಿಕವಾಗಿ ಲಾಭ ಪಡೆಯಬಹುದು, ಇದಕ್ಕಾಗಿ ಜಾಹೀರಾತುಗಳು, ಸ್ಪಾನ್ಸರ್‌ಷಿಪ್‌ಗಳು, ಮತ್ತು ವೀಕ್ಷಕರಿಂದ ಧನಸಹಾಯವು ಪ್ರಮುಖ ಮಾರ್ಗಗಳಾಗಿವೆ.
ಮೊದಲು ಜನರಿಗೆ ಇಷ್ಟ ಆಗುವ ನಿಮ್ಮದೇ ಒರಿಜಿನಲ್ ಕಂಟೆಂಟ್ ಹಾಕಿ. ಅದು ಯಾವುದೇ ಸ್ಥಳ ಅಥವಾ ದೇಶ ವಾಗಿರ ಬಹುದು ಒಟ್ಟಿನಲ್ಲಿ ಜನರಿಗೆ ಇಷ್ಟ ಆಗುವ ಹಾಗೆ ಇರ ಬೇಕು  ಇಲ್ಲಿದೆ ನೋಡಿ ಪ್ರಸಿದ್ಧ ಯು ಟ್ಯೂಬರ್ಸ್ ತಿಂಗಳಿಗೆ ಎಷ್ಟು ಸಂಪಾದಿಸುತ್ತಾರೆ ಅಂತ 
1)ಡಿವಿ ಇನ್ನ್ ಕನ್ನಡ; ಇದು ಟಾಪ್ ಐದನೇ ಸ್ಥಾನದಲ್ಲಿ ಇರುವ ಯೂಟ್ಯೂಬ್ ಚಾನಲ್ ಮೊದಲಿಗೆ ಹಿಂದಿ ಭಾಷೆಯಲ್ಲಿ ಯೂಟ್ಯೂಬ್ ಚಾನಲ್ ತೆರೆದ ಇವರು ವರ್ಷ ಕಳೆದರೂ ಕೊಡ 1ಲಕ್ಷ ಜನರನ್ನು ಫಾಲೋವ್ರಸ್ ಪಡೆಯಲು ಸಾಧ್ಯವಾಗಲಿಲ್ಲ ಆದರೆ ಇವರು ಕನ್ನಡದಲ್ಲಿ ತೆರೆದ ನಂತರ ಕೇವಲ ಒಂದೇ ತಿಂಗಳಿಗೆ 4.57 ಲಕ್ಷ ಫಾಲೋವರ್ ಇವರ ತಿಂಗಳ ಸಂಭಳ 80ಸಾವಿರದಿಂದ 12ಲಕ್ಷದ ವರೆಗೂ ದುಡಿಯಲಿದ್ದಾರೆ.  

2) ನ್ಯೂಸ್ ಅಲರ್ಟ್; ಇದು ನಾಲ್ಕನೇ ಸ್ಥಾನದಲ್ಲಿ ಇದನ್ನು ನಡೆಸುತ್ತಿರುವುದು ಸಮಾಜ ಸೇವಕ ಹಾಗೂ ಕಾರ್ಯಕರ್ತನಾಗಿ ಗುರುಸುಕೊಂಡಿರುವ  ಚಂದನ್. ಬೆಂಗಳೂರಿಗೆ ಕೆಲ್ಸ ಹುಡುಕಿಕೊಂಡು ಬಂದ ಈತ ತನ್ನ ಆದಾಯ ಸಾಲದೆ 2018ನಲ್ಲಿ ಯೂಟ್ಯೂಬ್ ಚಾನಲ್ ಆರಂಭ ಮಾಡುತ್ತಾರೆ. ಇನ್ನೂ ಅಲ್ಲಿ ಜಗತ್ತಿನಲ್ಲಿ ನಡೆಯುವ ಎಲ್ಲಾ ಅಪ್ಡೇಟ್ ಗಳನ್ನು ಕೊಡುತ್ತಾ ಬಂದಿದ್ದು ಈಗ ಅವರಿಗೆ 6ಲಕ್ಷದ ವರೆಗೂ ಹಿಂಬಾಲಕರನ್ನು ಹೊಂದಿದ್ದಾರೆ. ಇನ್ನೂ ಇದರಿಂದ ಇವರು ಒಂದು ಲಕ್ಷದ ಮೂವತ್ತು ಸಾವಿರದಿಂದ 30ಲಕ್ಷದ ವರೆಗೂ ದುಡಿಯುತ್ತಾರೆ.

3)  ಟೆಕ್ ಇನ್ ಕನ್ನಡ; ಇಂಜಿನಿಯರಿಂಗ್ ಪದವೀಧರರು ಆಗಿರುವ ಇವರು ಒಂದು ದಿನ ಮೊಬೈಲ್ ಯಾವುದು ಉತ್ತಮ ಹಾಗೂ ಅದ್ರ ಗುಣಲಕ್ಷಣಗಳು ಯಾವುವು ಎಂದು ತಿಳಿಸುವ  ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡುತ್ತಾರೆ. ಇನ್ನೂ ಅದಕ್ಕೆ 5ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಇನ್ನೂ ಇದರಿಂದ ಇವರು 1.60ಲಕ್ಷ ದಿಂದ 12ಲಕ್ಷದ ವರೆಗೂ ಸಂಪಾದನೆ ಮಾಡುತ್ತಾರೆ. ಹಾಗೆಯೇ ಇತರ ಫೋನ್ ಗಳನ್ನು ಪ್ರಮೋಟ್ ಮಾಡುವುದಕ್ಕೆ 50ಸಾವಿರದ ವರೆಗೂ ಪಡೆಯುತ್ತಾರೆ.   

( video credit :Bhai Log ) 

4) ಕಾಲಮದ್ಯಮ; ಈ ಚಾನಲ್ ಎರಡನೇ ಸ್ಥಾನದಲ್ಲಿ ಇದ್ದು ಇದನ್ನು ನಡೆಸುತ್ತಿರುವವರು ಪರಮೇಶ್ವರ್ ಇವರು ತನ್ನ ಚಾನಲ್ ನಲ್ಲಿ ಕಲಾವಿದರನ್ನು ಇಂಟರ್ವ್ಯೂ ಮಾಡುತ್ತಾರೆ. ಇನ್ನೂ ಈ ಇಂಟರ್ವ್ಯೂ ವಿಡಿಯೋಗಳು ದಿನಕ್ಕೆ ಲಕ್ಷದ ವರೆಗೂ ವ್ಯೂಸ್ ಪಡೆದುಕೊಳ್ಳುತ್ತದೆ. ಇನ್ನೂ ಇದರಿಂದ ಇವರು 10ಲಕ್ಷದ ವರೆಗೂ ಪಡೆದುಕೊಳ್ಳುತ್ತಾರೆ.

5) ಡಾಕ್ಟರ್ ಬ್ರೋ; ಈ ಚಾನಲ್ ಮೊದಲನೇ ಸ್ಥಾನದಲ್ಲಿ ಇದೆ. ನಾವು ಡಾಕ್ಟರ್ ಬ್ರೋ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆಯೇ ಇಲ್ಲ ಎಂದು ಹೇಳಬಹುದು. ಈತ ಅರ್ಧ ಪ್ರಪಂಚವನ್ನು ಈಗಾಗಲೇ ಸುತ್ತಿದ್ದು ಇದರಿಂದಲೇ ಯೂಟ್ಯೂಬ್ ನಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಬಹುದು. ಎಷ್ಟೆಲ್ಲಾ ಪ್ರಖ್ಯಾತಿ ಪಡೆದಿರುವ ಇವರು ಪ್ರಮೋಶನ್ ಎಲ್ಲವು ಸೇರಿ ತಿಂಗಳಿಗೆ 20ಲಕ್ಷದ ವರೆಗೂ ಸಂಪಾದನೆ ಮಾಡುತ್ತಾರೆ.