ನೀವು ಈ ಸಮಯದಲ್ಲಿ ಸ್ನಾನ ಮಾಡಿದರೆ ದಾರಿದ್ಯಾ ಕಟ್ಟಿಟ್ಟ ಬುತ್ತಿ ? ಯಾವ ಸಮಯದಲ್ಲಿ ಸ್ನಾನ ಮಾಡ ಬೇಕು ನೋಡಿ

ನೀವು ಈ ಸಮಯದಲ್ಲಿ ಸ್ನಾನ ಮಾಡಿದರೆ ದಾರಿದ್ಯಾ ಕಟ್ಟಿಟ್ಟ ಬುತ್ತಿ ?  ಯಾವ ಸಮಯದಲ್ಲಿ ಸ್ನಾನ ಮಾಡ ಬೇಕು ನೋಡಿ

ಈ  ಲೇಖನವನ್ನು  ನಾವು ಸಾಮಾಜಿಕ ಜಾಲ ತಾಣಗಳಲ್ಲಿ ದೊರಕುವ ಸುದ್ದಿಗಳನ್ನು ಆದರಿಸಿ ಕೊಟ್ಟಿರುತ್ತೇವೆ . ಇದು ನಮ್ಮ ಸ್ವಂತ ಅಭಿಪ್ರಾಯ ವಲ್ಲ . ಜ್ಯೋತಿಷ್ಯ ಮತ್ತು ಪಂಚಾಂಗ ನಂಬುವರು ಎಷ್ಟು ಜನ ಇದ್ದರೋ ಅಷ್ಟೇ ಜನ ನಂಬದಿರುವರು ಇದ್ದಾರೆ . ಇದು ಅವರವರ ನಂಬಿಕೆಗೆ ಬಿಟ್ಟದ್ದು  ಆದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಾವು ಬಯಸುತ್ತೇವೆ . ಅನ್ಯತಾ ಭಾವಿಸ ಬೇಡಿ

ಜೀವನದಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದ ತತ್ವ ಇದೆ, ಪ್ರತಿಯೊಂದು ಕೆಲಸಕ್ಕೂ ಅದರದೇ ಆದ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಹೌದು ಎಲ್ಲಾ ಕೆಲಸಗಳನ್ನು ನಾವು ಗೌರವಿಸಬೇಕು..ಹಿಂದೂ ಸಂಪ್ರದಾಯದಲ್ಲಿ ಯಾವ ರೀತಿ ಗುರು ಹಿರಿಯರು ಕೆಲವು ವಿಷಯಗಳ ತತ್ವಗಳ ಬಗ್ಗೆ ಹೇಳಿಕೊಟ್ಟಿದ್ದಾರೆಯೋ ಆದೆ ರೀತಿ ಅವುಗಳ ಪಾಲನೆ ಮಾಡಿದಾಗ ಒಳ್ಳೆಯದಾಗಿ ಒಳ್ಳೆ ದಿನಗಳು ನಮ್ಮ ಹತ್ತಿರ ಬರುತ್ತವೆ. ಹೌದು ಜೀವನದಲ್ಲಿ ಪ್ರತಿಯೊಬ್ಬರೂ ಸ್ನಾನ ಮಾಡುತ್ತಾರೆ..ಆದರೆ ಸ್ನಾನ ಮಾಡುವ ಸಮಯ ಮಾತ್ರ ಕೆಲವರಲ್ಲಿ ತುಂಬಾನೇ ವಿಭಿನ್ನ ಆಗಿರುತ್ತದೆ..ಕೆಲವರು ಸ್ನಾನ ಮಾಡುವುದೇ ಇಲ್ಲ ಅದು ಬೇರೆ ವಿಷಯ.ಸ್ನಾನ ಮಾಡದೆ ಇರುವವರು ಎಂದಿಗೂ ಕೂಡ ಯಶಸ್ಸನ್ನು ಕಾಣಲು ಸಾಧ್ಯವೇ ಇಲ್ಲ ಎಂದು ಸಂಪ್ರದಾಯದಲ್ಲಿ ತಿಳಿದು ಬಂದಿದೆ.

ಸ್ನಾನ ಮಾಡುವ ಕೆಲವರ ಸಮಯ ಬೆಳಗ್ಗೆ ಆಗಿರುತ್ತದೆ. ಇನ್ನೂ ಕೆಲವರದ್ದು 6:00 ನಂತರ, ಕೆಲವರದ್ದು 8 ಗಂಟೆ ನಂತರ, ಮತ್ತಿತರರು ಮಧ್ಯಾಹ್ನದ ಹೊತ್ತಿಗೆ ಸ್ನಾನ ಮಾಡ್ತಾರೆ. ಇನ್ನೂ ಕೆಲವರದ್ದು ಸಾಯಂಕಾಲ, ಇನ್ನು ಕೆಲವರದು ರಾತ್ರಿ ವೇಳೆ ಸ್ನಾನ ಮಾಡಿ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ..ಇದು ತುಂಬಾನೇ ತಪ್ಪು. ಸ್ನಾನಕ್ಕಾಗಿ ಒಂದು ನಿರ್ದಿಷ್ಟವಾದ, ನಿಖರವಾದ ಸಮಯ ಅಂತ ಇದೆ.. ಅದರಲ್ಲಿ ನಾಲ್ಕು ವಿಭಾಗಗಳು ಬರುತ್ತವೆ. ಮೊದಲು ದೇವರ ಸ್ನಾನ, ಋಷಿಮುನಿಗಳ ಸ್ನಾನ, ಮನುಷ್ಯರ ಸ್ನಾನ, ಹಾಗೂ ಕೊನೆಯದು ಈ ರಾಕ್ಷಸನ ಸ್ನಾನ ಎಂದು. 

ಈ ನಾಲ್ಕು ಸ್ನಾನಗಳ ಬಗ್ಗೆ ಇಂದಿನ ಈ ಲೇಖನದಲ್ಲಿ ನೀವು ತಿಳಿದುಕೊಳ್ಳುವಿರಿ. ಮೊದಲಿಗೆ ಋಷಿ ಸ್ನಾನ ಅಂದರೆ ಬೆಳಗಿನ ಜಾವ ಮೂರು ಗಂಟೆಯಿಂದ ನಾಲ್ಕು ಗಂಟೆಯ ಒಳಗೆ ಸ್ನಾನ ಮಾಡಿದರೆ ನಿಮ್ಮ ಕಷ್ಟಗಳು ದೂರಾಗಿ, ನಿಮಗೆ ಕಷ್ಟದ ದಿನಗಳು ದೂರಾಗಿ ಪುಣ್ಯ ಫಲಗಳು ಸಮೀಪಿಸುತ್ತವೆ. ನಿಮ್ಮ ಕಷ್ಟದ ದಿನಗಳು ದೂರ ಆಗುತ್ತಲೇ ಹೋಗಿ, ನಿಮ್ಮ ಜೀವನದಲ್ಲಿ ನೀವೂ ಹೆಚ್ಚು ಯಶಸ್ಸನ್ನು ಪಡೆಯುವಿರಿ..ಎರಡನೆಯದು ದೇವರ ಸ್ನಾನ, ನಾಲ್ಕು ಗಂಟೆಯಿಂದ 5 ಗಂಟೆ ಬೆಳಗಿನ ಜಾವ ಒಳಗೆ ಸ್ನಾನ ಮಾಡಬೇಕು. ಈ ಸಮಯದಲ್ಲಿ ನೀವು ಸ್ನಾನ ಮಾಡಿದರೆ ದೇವರ ಆಶೀರ್ವಾದ ನಿಮಗೆ ಈ ವೇಳೆಯಲ್ಲಿ ಸ್ನಾನ ಮಾಡಿದರೆ ಸಿಗುತ್ತದೆ. ದೇವರಿಗೆ ನಿಮ್ಮ ಸಂಕಲ್ಪವನ್ನು ಅರ್ಪಿಸಿದಂತೆ..ಮನಸ್ಸು ನಿರಾಳ ಆಗಿರುತ್ತದೆ.. ದೇವರಿಗೆ ಬೆಳಗಿನ ಜಾಗ ನೈವೇದ್ಯ ಮಾಡುವ ಸಮಯ ಇದಾಗಿದ್ದು ಈ ಸಮಯದಲ್ಲಿ ನೀವು ಸ್ನಾನ ಮಾಡಿದರೆ ಆ ದಿನ ತುಂಬಾ ವಿಶೇಷವಾಗಿ ಇರುತ್ತದೆ. ತುಂಬಾ ಮೃದುವಾಗಿ ನಿಮ್ಮ ಮನಸ್ಸು ಎಲ್ಲಾ ಕೆಲಸದಲ್ಲಿಯೂ ಉತ್ಸಾಹ, ಉನ್ಮಾದ ಮನಸ್ಸಿನಿಂದ ಖುಷಿಯಲ್ಲೆ ಇರುತ್ತದೆ.

ಮೂರನೇಯ ಸ್ನಾನ ಮನುಷ್ಯನ ಸ್ನಾನ, ಐದರಿಂದ ಆರು ಗಂಟೆ ಒಳಗೆ ಬೆಳಗಿನ ಜಾವ ಸ್ನಾನ ಮಾಡಿದರೆ ಅದನ್ನೆ ಮನುಷ್ಯನ ಸ್ನಾನ ಎನ್ನುತ್ತಾರೆ.. ಕೊನೆಯದಾಗಿ ಆರು ಗಂಟೆ ನಂತರ ನೀವು ಸ್ನಾನ ಮಾಡಿದರೆ ಅದುವೇ ರಾಕ್ಷಸ ಜಳಕ. ಈ ಸಮಯದಲ್ಲಿ ನೀವು ಸ್ನಾನ ಮಾಡಿದರೆ ನಿಮಗೆ ಆಗುವ ಹಾನಿಕಾರಕ ಅಂಶಗಳು, ನಿಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳು, ನಿಮ್ಮ ಏಳಿಗೆಯಾ ಮಟ್ಟಕ್ಕೆ ನಿಮ್ಮನ್ನು ತೆಗೆದುಕೊಂಡು ಹೋಗುವಲ್ಲಿ ವಿಫಲವಾಗುವ ಸಮಯ ನಿಮ್ಮನ್ನು ಹೇಗೆ ಕುಗ್ಗಿಸುತ್ತದೆ ಎಂದು ತಿಳಿಯಲು ಈ ವಿಡಿಯೋ ನೋಡಿ. ವಿಡಿಯೋ ತುಂಬಾನೇ ಇಂಫಾರ್ಮೇಟಿಕ್ ಆಗಿದೆ. ಒಮ್ಮೆ ವಿಡಿಯೋ ನೋಡಿ, ವಿಡಿಯೋ ಶೇರ್ ಮಾಡಿ ಧನ್ಯವಾದಗಳು... ( video credit : Divine media )