ನಾನು ಆರು ವರ್ಷಗಳ ಕಾಲ ಒಬ್ಬ ನಟನೊಂದಿಗೆ ರಿಲೇಷನ್ ಶಿಪ್ ನಲ್ಲಿ ಇದ್ದೇ ಎಂದ ತನಿಷಾ! ಆ ನಟ ಯಾರು ಗೊತ್ತಾ?

ನಾನು ಆರು ವರ್ಷಗಳ ಕಾಲ ಒಬ್ಬ ನಟನೊಂದಿಗೆ ರಿಲೇಷನ್ ಶಿಪ್ ನಲ್ಲಿ ಇದ್ದೇ ಎಂದ ತನಿಷಾ! ಆ ನಟ ಯಾರು ಗೊತ್ತಾ?

ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 10 ಕಳೆದ ಎಲ್ಲಾ ಸೀಸನ್ ಗಳಿಗಿಂತಲೂ ವಿಭಿನ್ನವಾಗಿ ಇತ್ತು ಎಂದರೆ ತಪ್ಪಾಗಲಾರದು. ದಶಕದ ಸಂಭ್ರಮ ಆಗಿರುವ ಕಾರಣದಿಂದ ಸಾಕಷ್ಟು ವಿಭಿನ್ನತೆಯನ್ನು ನಿರೀಕ್ಷೆ ಮಾಡುವಂತೆ ಮೊದಲೇ ಅಭಿಮಾನಿಗಳಿಗೆ ಕಲರ್ಸ್ ವಾಹಿನಿ ತಿಳಿಸಿತ್ತು. ಇನ್ನೂ ಚಾನಲ್ ಮಾತು ಕೊಟ್ಟಂತೆ ಎಲ್ಲವು ವಿಭಿನ್ನತೆಯಲ್ಲಿ ಇರಬೇಕು ಎಂದು ತನ್ನ ಮೊದಲ ದಿನಗಳಲ್ಲಿ ಕಳೆದ ಎಲ್ಲಾ ಸೀಸನ್ ನಲ್ಲಿ ತೋರದ ಟ್ವಿಸ್ಟ್ ಸ್ಪರ್ಧಿಗಳನ್ನು ವೋಟ್ ಮುಖಾಂತರ ಒಳಗಡೆ ಕಳುಹಿಸುವುದಾಗಿ ತಿಳಿಸಿ ತನ್ನ ಮೊದಲ ಹೆಜ್ಜೆಯಲ್ಲಿ ಸಾಕಷ್ಟು ವಿಭಿನ್ನತೆ ಹಾಗೂ  ಟ್ವಿಸ್ಟ್ ಅನ್ನು ಈ ಸೀಸನ್ ತೋರಿಸಿತ್ತು. ಆದ್ರೆ ದಿನ ಕಳೆಯುತ್ತಿದ್ದಂತೆ ನೆಗೆಟಿವಿಟಿ ಕೊಡ ಹೆಚ್ಚಾಗಿತ್ತು ಎಂದು ಹೇಳಬಹುದು.

ಇನ್ನೂ ಈ ಸೀಸನ್ ನಲ್ಲಿ ಸ್ಪರ್ಧಿ ಆಗಿ ಬಂದಿದ್ದ ತನಿಷ ಕೂಪಂಡಾ ಅವರು ಮೊದಲಿಗೆ ಕಡಿಮೆ ವೋಟ್ ಕಾರಣದಿಂದ ಅಂತಹರು ಎಂದು ಗುರುತಿಸಿಕೊಂಡು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು. ಆದರೆ ಮೊದಲ ದಿನದಿಂದ ಕೊನೆಯ ವಾರದ ವರೆಗೂ ಸಖತ್ ಟಪ್ ಕಂಟೆಸ್ಟೆಂಟ್ ಆಗಿ ಗುರುತಿಸಿಕೊಂಡು ಕೊನೆಯ ವಾರದಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ತನಿಷ ಅವರು ಮನೆಯಿಂದ ಹೋರ ಬಂದರು. ಇನ್ನೂ ಸಾಕಷ್ಟು ಜನರು ಇವರ ಧೈರ್ಯಕ್ಕೆ ಮೆಚ್ಚಿ ಬೆಂಕಿ ಎಂಬ ಬಿರುದು ಕೊಟ್ಟಿದ್ದು ಉಂಟು. ಇನ್ನೂ ಬಿಗ್ ಬಾಸ್ ಮುಗಿದ ಬಳಿಕ ತನಿಷ ಅವರು ತಮ್ಮದೇ ಆದ ಕೂಪಂಡಾಸ್ ಎಂಬ ಜ್ಯುವೆಲರಿ ಶಾಪ್ ಬಹಳ ಗ್ರ್ಯಾಂಡ್ ಓಪನಿಂಗ್ ಮಾಡಿದರು.  ಇನ್ನೂ ಆ ಓಪನಿಂಗ್ ಗೆ ಬಿಗ್ ಬಾಸ್ ಸ್ಪರ್ಧಿಗಳು ಕೊಡ ಭಾಗಿ ಆಗಿದ್ದರು.  

ಇನ್ನೂ ಈಗ  ತನಿಷ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಜ್ಯುವೆಲರಿ ಶಾಪ್ ಹಾಗೂ ತನ್ನ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ವೈರಲ್ ನಲ್ಲಿ ಇದ್ದಾರೆ. ಇನ್ನೂ ಇತ್ತೀಚೆಗೆ ಇಂಟರ್ವ್ಯೂ ನಲ್ಲಿ ಭಾಗಿ ಆಗಿದ್ದ ತನಿಷಾ ಅವರು ತನ್ನ ಹಳೆಯ ಪ್ರಿಯಕರನ ಬಗ್ಗೆ ಹೇಳಿದ್ದಾರೆ. ಆದರೆ ಹೆಸರನ್ನು ಎಲ್ಲಿಯೂ ಕೊಡ ಬಹಿರಂಗ ಪಡಿಸಿಲ್ಲ. ಆತ ಕೊಡ ನಟನಾಗಿದ್ದು ಒಟ್ಟಿಗೆ ಕೆಲ್ಸ ಮಾಡುವ ವೇಳೆಯಲ್ಲಿ ಒಂದು ವರ್ಷಗಳ ಕಾಲ ಸ್ನೇಹಿತರಾಗಿದ್ದು ಆ ನಂತರ ಆರು ವರ್ಷ ಕಾಲ ಪ್ರೀತಿಸಿದ್ದೇವೆ. ಆದರೆ ದಿನ ಕಳೆಯುತ್ತಿದ್ದಂತೆ ನನ್ನ ಪ್ರತಿಯೊಂದು ವಿಷಯ ಕೊಡ ಇವರಿಗೆ ಹೇಳಬೇಕಿತ್ತು ಅವರು ಒಪ್ಪಿಗೆ ಸೂಚಿಸಿದರೆ ಮಾತ್ರ ನಾನು ಮಾಡಬೇಕಿತ್ತು ಆದ್ರೆ ದಿನ ಕಳೆಯುತ್ತಿದ್ದಂತೆ ಬಹಳ ಕಿರಿ ಕಿರಿ ಎನಿಸಿ ನಾನು ಆ ರಿಲೇಷನ್ ಶಿಪ್ ಇಂದ ದೂರ ಬಂದೆ ಎಂದು ಬಹಿರಂಗವಾಗಿ ತಿಳಿಸಿದ್ದಾರೆ.