ಪ್ರೇಮಿಗಳ ದಿನಾಚರಣೆಯ ಮುಂದಿನ 7 ದಿನಗಳ ಕಾಲ ಹೀಗೆ ಮಾಡಿ..! ನಿಮ್ಮ ಸಂಗಾತಿ ನಿಮ್ಮನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ
ಪ್ರೇಮಿಗಳ ದಿನಾಚರಣೆ ಇನ್ನೇನು ಹತ್ತಿರ ಬರುತ್ತಿದೆ. ಹೌದು ಈ 7 ದಿನಗಳ ಮುಂಚೆಯೇ ಪ್ರೇಮಿಗಳು ಪ್ರೇಮಿಗಳ ದಿನಾಚರಣೆಯ ಹಬ್ಬವನ್ನು ಆಚರಿಸಲು ಶುರು ಮಾಡಿಕೊಂಡಿದ್ದಾರೆ. ಈ ಏಳು ದಿನಗಳಲ್ಲಿ ಪ್ರತಿ ದಿನವೂ ಅದರದೇ ಆದ ವೈಶಿಷ್ಟ್ಯತೆ ಹೊಂದಿದ್ದು ಇದು ಪ್ರೇಮಿಗಳಿಗೆ ಮಾತ್ರ ವಿಶೇಷ ದಿನ ಆಗಿರುತ್ತವೆ. ಈ ಬಗ್ಗೆ ಇಂದಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
ಮೊದಲಿಗೆ ಗುಲಾಬಿ ದಿನ, ಹೌದು ಇದನ್ನು ರೋಜ್ ಡೇ ಎಂದು ಕರೆಯುತ್ತಾರೆ... ಸೆವೆಂತ್ ಫೆಬ್ರವರಿಯ ದಿನ ಈ ರೋಜ್ ಡೇ ಆಗಿದ್ದು, ನೀವು ನಿಮ್ಮ ಹೊಸದಾದ ಪ್ರೀತಿ ಈಗ ಎದುರು ನೋಡುತ್ತಿದ್ದರೆ, ಅಥ್ವಾ ಈಗಾಗಲೇ ತಮ್ಮ ಪ್ರೀತಿಯಲ್ಲಿ ಬಿದ್ದಿದ್ದರೆ ರೋಜ್ ದಿನದಂದು ಒಂದು ಕೆಂಪು ಗುಲಾಬಿಯ ಹೂ ಅಥ್ವಾ ಹೂ ಗುಚ್ಛ ನೀಡಿ, ಹಾಗೆ ನಿಮ್ಮ ಮುಖದಲ್ಲಿ ಬಂದು ಮುಗುಳ್ನಗೆ ಬೀರಿ, ಈ ಮೂಲಕವೇ ನಿಮ್ಮ ಪ್ರೀತಿಗೆ ಹೊಸ ಮೆಟ್ಟಿಲು ಈ ಸುಂದರ ದಿನ ಹಾಕಿದಂತಾಗುತ್ತದೆ..
ಎರಡನೆಯದು ಫೆಬ್ರವರಿ 8 ಪ್ರಪೋಸ್ ಡೇ ಹೌದು, ಈ ದಿನ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳುವ ದಿನ, ನಿಮ್ಮ ಹುಡುಗಿಯ ಮುಂದೆ ನಿಮ್ಮ ಪ್ರೀತಿ ಪ್ರಸ್ತಾಪಿಸುವ ದಿನ. ಒಳ್ಳೆಯ ಇಂಪಾದ ಜಾಗದಲ್ಲಿ ನಿಮ್ಮ ಸಂಗಾತಿಯನ್ನು ಈ ದಿನ ಕರೆದುಕೊಂಡು ಹೋಗಿ, ಹಾಗೆ ಆಕೆ ಮುಂದೆ ನನ್ನ ಮನದಾಳದಲ್ಲಿರುವ ಪ್ರೀತಿಯ ಭಾವನೆಗಳ ಮಾತುಗಳ ಹೇಳುತ್ತಿದ್ದೇನೆ ಎಂದು ಮಾತು ಆರಂಭಿಸಿ, ಈ ದಿನಕ್ಕಾಗಿ ನಾನು ಇಷ್ಟು ದಿವಸ ಕಾದಿದ್ದು, ನಿನ್ನನ್ನು ಎಷ್ಟು ಪ್ರೀತಿ ಮಾಡುತ್ತೇನೆ ಎಂದು ಪದಗಳಲಿ ಹೇಳಲು ಆಗದು, ಇದಕ್ಕಿಂತ ಒಳ್ಳೆಯ ಕ್ಷಣ ಮತ್ತೆ ಬಾರದು, ನನ್ನ ಜೀವನದಲ್ಲಿ ನೀನು ಒಂದು ಅದ್ಭುತವೆ ಸರಿ. ನಿನ್ನ ಜೊತೆ ಇರುವ ಪ್ರತಿ ಕ್ಷಣ ನಾನು ನನ್ನ ಮರೆತು ಬಿಡುತ್ತೇನೆ, ಅಷ್ಟು ನಿನ್ನ ಪ್ರೀತಿ ನನ್ನ ಕಾಡುತ್ತಿದೆ. ನನ್ನ ಕೊನೆಯ ಉಸಿರು ಇರುವವರೆಗೂ ನಿನ್ನನ್ನು ನಾನೇ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ, ನನ್ನ ಪ್ರೀತಿಯನ್ನು ಹೆಮ್ಮರವಾಗಿ ಬೆಳೆಸುತ್ತೇನೆ, ಐ ಲವ್ ಯು' ನಿ ನನ್ನ ಪ್ರೀತಿಯ ಒಪ್ಪಿದರೆ ಅದೇ ನನಗೆ ನೀನು ನೀಡುವ ಈ ದಿನದ ಅತಿ ದೊಡ್ಡ ಉಡುಗೊರೆ ಎಂದು ಹೇಳಿಬಿಡಿ...
ಮೂರನೆಯದು ಫೆಬ್ರವರಿ 9 ಚಾಕಲೇಟ್ ದಿನ, ನಿಮ್ಮ ಪ್ರೀತಿಯನ್ನು ಒಪ್ಪಿದ ಬಳಿಕ, ಪ್ರೀತಿಗಿಂತ ಮೊದಲು ನಿಮ್ಮ ಮೇಲೆ ಸಾಕಷ್ಟು ಕೋಪ, ಮುನಿಸು, ತಾಪ, ಯಾವುದೋ ಒಂದು ವಿಚಾರಕ್ಕೆ ಆಗಿರುತ್ತದೆ. ಎಲ್ಲವನ್ನು ಬದಿಗಿಟ್ಟು ನನ್ನ ಪ್ರೀತಿ ಒಪ್ಪಿದ್ದಕ್ಕೆ ಮೊದಲು ಬಾಯಿ ಸಿಹಿ ಮಾಡೋಣ ಎಂದು ನಿಮ್ಮ ಹುಡುಗಿಗೆ ನೀವೇ ನಿಮ್ಮ ಕೈಯಾರೆ ಚಾಕೊಲೇಟ್ ಒಂದನ್ನ ಕೊಟ್ಟು ತಿನ್ನಿಸಿ.
ಫೆಬ್ರವರಿ 10 ಇದು ಟೆಡ್ಡಿ ಡೇ ಆಗಿದ್ದು, ನನ್ನ ಜೊತೆ ನಿನ್ನ ಸ್ನೇಹ ಹೀಗೆ ಇರಲಿ, ಈ ಪ್ರೀತಿಯ ಸ್ನೇಹದಲ್ಲಿ ನಮ್ಮಿಬ್ಬರ ಪ್ರೀತಿ ಇನ್ನೂ ಎತ್ತರಕ್ಕೆ ಚಿಗುರಲಿ, ಅತಿ ದೊಡ್ಡ ಬಂಗಾರ ನೀನು ನನಗೆ ಸಿಕ್ಕಂತಾಗಿದೆ. ಹಾಗಾಗಿ ನಾನು ನಿನಗೆ ಟೆಡ್ಡಿ ಬೇರ್ ನ ಕೊಡುತ್ತಿದ್ದೇನೆ ಎಂದು ಈ ಮಾತನ್ನು ಹೇಳಿ. ಪ್ರೀತಿಯ ನಿಮ್ಮಿಬ್ಬರ ಈ ಹಬ್ಬವನ್ನು ಆಚರಿಸಿ..
ಫೆಬ್ರವರಿ 11 ಭರವಸೆ ನೀಡುವ ದಿನ ಆಗಿದ್ದು, ಇದನ್ನು ಪ್ರಾಮಿಸ್ ಡೇ ಎಂದು ಕರೆಯುತ್ತಾರೆ, ಈ ದಿನವನ್ನು ಸುಮ್ಮನೆ ಕಾಟಾಚಾರಕ್ಕೆ ಮಾಡಬಾರದು, ಬದಲಿಗೆ ನಿಮ್ಮ ಸಂಗಾತಿ ಮೇಲೆ ನಿಮಗೆ ನಂಬಿಕೆ ಇರಬೇಕು. ಹಾಗೇನೇ ನಿಮ್ಮ ಮೇಲೆ ಅವರಿಗೂ ನಂಬಿಕೆ ಇರಬೇಕು. ಜೀವನದಲ್ಲಿ ಅದೆಂತಹ ಕಷ್ಟದ ಸಮಯ ಬಂದರೂ ಒಬ್ಬರಿಗೊಬ್ಬರು ಬಿಟ್ಟು ಕೊಡದೆ, ನಿಮ್ಮ ಪ್ರೀತಿಯನ್ನು ಕಾಪಾಡಿದರೆ ಈ ದಿನಕ್ಕೆ ಒಂದು ಅರ್ಥ ಬರುತ್ತದೆ.. ಅದುವೇ ಪ್ರಾಮಿಸ್ ಡೇ. ನಿಮ್ಮ ಪ್ರೀತಿ ಬೆಳೆಸುವ ಮುನ್ನ ಇಬ್ಬರೂ ಶಪಥ ಮಾಡಿ, ಹಾಗೆ ನಿನ್ನ ನಂಬಿಕೆಗೆ ನಾನು ಎಂದಿಗೂ ದಕ್ಕೆ ತರುವುದಿಲ್ಲ ಎನ್ನುವ ಭರವಸೆ ಮಾತನ್ನ ನಿಮ್ಮ ಹುಡುಗಿಗೆ ನೀವು ಹೇಳಿ, ಹಾಗೆ ಒಬ್ಬರಿಗೊಬ್ಬರು ಗೌರವ ನೀಡುತ್ತಾ, ನಿಮ್ಮ ಪ್ರೀತಿಗೆ ಬೆಲೆ ನೀಡುತ್ತಾ, ಇಬ್ಬರ ಮಾತನ್ನು ಇಬ್ಬರೂ ಪರಸ್ಪರ ಕೇಳಿಕೊಳ್ಳುತ್ತಾ ಜೀವನ ಸಾಗಿಸಿದರೆ, ನೀವು ಈ ದಿನ ಮಾಡಿದ ಪ್ರತಿಜ್ಞೆ ನಿಜವಾಗುತ್ತದೆ. ನಿಮ್ಮ ಜೀವನದಲ್ಲಿಯ ಒಂದೊಳ್ಳೆ ಜೀವನ ನಿಮ್ಮದಾಗುತ್ತದೆ.. ಹಾಗೆ ನಿಮ್ಮ ಪ್ರೀತಿ ಇನ್ನಷ್ಟು ಗಟ್ಟಿ ಆಗುತ್ತದೆ.
ಫೆಬ್ರವರಿ 12 ಅಪ್ಪಿಕೊಳ್ಳುವ ದಿನ, ಇದನ್ನು ಕೆಲವರು ಮ್ಯಾಜಿಕ್ ಡೇ ಎಂದು ಕರೆಯುತ್ತಾರೆ..ಹೌದು ನಿಮ್ಮ ಸಂಗಾತಿಯೊಡನೆ ನೀವು ತಬ್ಬಿಕೊಂಡಾಗ ಅವರಿಗೆ ಕಂಫರ್ಟ್ ಜೋನ್ ಫೀಲ್ ಆಗಬೇಕು. ನಿಮಗೂ ಅದೇ ಫೀಲ್ ಆಗಬೇಕು. ಇಲ್ಲದೆ ಹೋದರೆ ಇಬ್ಬರ ನಡುವೆ ಏನೋ ಸರಿ ಇಲ್ಲ ಎನ್ನುವ ಅರ್ಥ ಬರುತ್ತದೆ.. ಹಾಗೆ ಈ ದಿನ ಮಾತುಗಳು ಇಲ್ಲದೆ ಕೇವಲ ಮೌನದಲ್ಲಿಯೇ ನಿಮ್ಮ ಪ್ರೀತಿ ಇಬ್ಬರಿಗೂ ಅರ್ಥವಾಗುವಂತಹ ದಿನ ಆಗಿದೆ. ಅಪ್ಪಿಕೊಂಡಾಗ ಇಬ್ಬರಿಗೂ ಕೆಟ್ಟದಾದ ರೀತಿ ಭಾವನೆ ಬರದೆ ಒಂದು ನಿಷ್ಕಲ್ಮಶ ಗಾಳಿಯ ರೀತಿ ನಿಮ್ಮ ಮನಸ್ಸಿನಲ್ಲಿ ಸೋಕಿದಾಗ ಈ ದಿನಕ್ಕೆ ನೀವಿಬ್ಬರು ಪರಿಪೂರ್ಣ ಪ್ರೇಮಿಗಳು ಎಂದೆನಿಸುವುದು.. ಹಾಗೆ ನೀವು ಸಂಪೂರ್ಣವಾಗಿ ನಿಮ್ಮ ಪ್ರೀತಿಯ ಕಡಲಲ್ಲಿ ಅನುಭವಿಸಿದಂತೆ ಎನ್ನಲಾಗಿದೆ.
ಫೆಬ್ರವರಿ 13 ಕಿಸ್ ಡೇ, ಹೌದು ಈ ದಿನದಲ್ಲಿ ಯಾರೂ ಕೂಡ ಆತುರಗೆಟ್ಟು ಮುನ್ನುಗ್ಗಬಾರದು. ಅದು ನಿಮ್ಮ ತಲೆಯ ಕೆಟ್ಟ ವಿಚಾರಕ್ಕೆ ಅನುವು ಮಾಡಿದಂತೆ. ಈ ವೇಳೆ ನಿಮ್ಮ ಸಂಗಾತಿಯಿಂದ ಪ್ರೀತಿ ಕಳೆದುಕೊಂಡ್ರು ನೀವು ಕಳೆದುಕೊಳ್ಳಬಹುದು.. ಇದರಲ್ಲಿ ಮಾತ್ರ ಆತುರ ಪಡಬೇಡಿ.. ಇಬ್ಬರೂ ಸಮ್ಮತದಿಂದ ಒಂದು ಶಾಂತ ಜಾಗದಲ್ಲಿ ಕುಳಿತುಕೊಳ್ಳಿ,, ಹಾಗೆ ಒಪ್ಪಿಗೆ ಪಡೆದು ಕೈ ಕೈ ಹಿಡಿದು ಕುಳಿತುಕೊಳ್ಳಿ. ಈ ಸಂದರ್ಭ ನಿಮ್ಮನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ನಿಮ್ಮಿಬ್ಬರಿಗೂ ಅರಿವು ಬಾರದಂತೆ ಪರಸ್ಪರ ಅಪ್ಪುಗೆ ಜೊತೆಯಾಗಿ ಒಂದೊಳ್ಳೆ ಮಧುರ ಚುಂಬನ ನಿಮ್ಮ ನಡುವೆಯೆ ಆಗ ಹುಟ್ಟಿಕೊಳ್ಳುತ್ತದೆ..ಹೀಗೆ ಹುಟ್ಟಿದ ಆ ಗಳಿಗೆ ಇದು ಕೂಡ ಪ್ರೀತಿಯೇ ಎಂದು ಹೇಳಲಾಗಿದೆ..
ಇನ್ನು ಕೊನೆಯ ದಿನ ಫೆಬ್ರವರಿ 14, ಈ ದಿನ ತುಂಬಾನೇ ವಿಶೇಷವಾದಂತಹ ದಿನ ಪ್ರೇಮಿಗಳಿಗೆ ಆಗಿದೆ. ಈ ದಿನ ನೀವು ನಿಮ್ಮ ಮನಸ್ಸಿನಲ್ಲಿ ಯಾವ ಕಲ್ಮಶವೂ ಇಲ್ಲದೆ ಪ್ರೀತಿನ ವ್ಯಕ್ತಪಡಿಸಿ, ಇಬ್ಬರು ನಿಷ್ಕಲ್ಮಶದಿಂದ ಬಂದು ಮುಕ್ತವಾಗಿ ಭೇಟಿಯಾಗಿ, ನಿಮ್ಮ ಪ್ರೀತಿ ಮೇಲೆ ಪರಸ್ಪರ ಇಬ್ಬರಿಗೂ ನಂಬಿಕೆ ಇರಲಿ, ಗೌರವ ಹೆಚ್ಚಾಗಿರಲಿ, ನನ್ನ ಮೊದಲ ಆಸೆ ನೀನೆ, ಕೊನೆಯ ಆಸೆಯೂ ನೀನೆ ಗೆಳತಿ ಎಂದು ಈ ಮಾತನ್ನು ಹೇಳಿ, ಜೀವನದಲ್ಲಿ ಇಬ್ಬರು ಎಂತಹ ಸಂದರ್ಭದಲ್ಲಿ ಆದ್ರೂ ಜೊತೆಯಾಗಿಯೇ ಇರೋಣ, ಜೊತೆಯಾಗಿಯೇ ಜೀವನ ಮಾಡೋಣ , ಹಾಗೆ ಮದುವೆಯಾಗಿ ಇನ್ನೊಬ್ಬರಿಗೆ ಸ್ಪೂರ್ತಿದಾಯಕದ ಜೀವನ ತೋರಿಸೋಣ ಎನ್ನುವ ಭರವಸೆ ಮಾತುಗಳು ಅಂತರಾಳದಿಂದ ಬಂದರೆ ನಿಮ್ಮ ಪ್ರೀತಿ ಗೆದ್ದಂತೆಯೇ ಸರಿ. ಆಗ ನಿಮ್ಮ ಪ್ರೀತಿಯ ಮಡಿಲಲ್ಲಿ ತೇಲಾಡುವಿರಿ. ಈ ಅಂದದ ತಕ್ಷಣಕ್ಕೆ ಸಾಕ್ಷಿಯಾಗುವಿರಿ.. ಹೌದು ನಿಮಗೆ ಈ ಮಾಹಿತಿ ಉಪಯುಕ್ತ ಆಯ್ತು ಅಂತ ಅನಿಸಿದರೆ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...