ಸುಖವಾದ ರಾತ್ರಿ ಕಳೆಯಲು ಗಂಡ-ಹೆಂಡ್ತಿ ಏನು ಮಾಡಬೇಕು? ಇಲ್ಲಿದೆ ನೋಡಿ ಕೆಲವು ಟಿಪ್ಸ್

ಸುಖವಾದ ರಾತ್ರಿ ಕಳೆಯಲು ಗಂಡ-ಹೆಂಡ್ತಿ ಏನು ಮಾಡಬೇಕು? ಇಲ್ಲಿದೆ ನೋಡಿ ಕೆಲವು ಟಿಪ್ಸ್

ಮದುವೆ ಎಂಬ ಸುಂದರ ಸಂಬಂಧದಲ್ಲಿ ಪ್ರೀತಿ, ಪ್ರೇಮ, ಒಲುಮೆ… ಎಲ್ಲವೂ ಜೊತೆಯಾಗಿ ಸಾಗಬೇಕು. ಬಾಂಧವ್ಯದ ಪಯಣವು ಮುಚ್ಚುಮರೆ ಇಲ್ಲದೆ ಮುಂದುವರಿಯಬೇಕು

ಗೆಳೆಯರೇ, ಪ್ರೀತಿ, ಪ್ರೇಮ, ಸಂಸಾರ ಹಾಗೂ ಸ್ನೇಹದಲ್ಲಿ ಯಾವತ್ತೂ ಕೂಡ ನಾವು ಗೆಲ್ಲಬಾರದು. ಒಂದು ವೇಳೆ ನಾವು ಇವುಗಳಲ್ಲಿ ಗೆದ್ದರೆ ನಾವು ನಮ್ಮ ಸಂಗಾತಿಯನ್ನು ಕಳೆದುಕೊಳ್ಳುತ್ತೇವೆ. ನಾವು ಸಂಸಾರದಲ್ಲಿ ಸಂತೋಷವಾಗಿರಬೇಕೆಂದರೆ ಸಂಗಾತಿಯ ಎದುರು ಸೋಲುವುದನ್ನು ಕಲಿಯಬೇಕು‌. ಏಕೆಂದರೆ ಅವಳ ಪ್ರತಿ ಬೈಗುಳದಲ್ಲಿ, ಪ್ರತಿ ಜಗಳದಲ್ಲಿ ಅನಲಿಮಿಟೆಡ್ ಪ್ರೀತಿ ಹಾಗೂ ಕಾಳಜಿ‌ ಅಡಗಿರುತ್ತದೆ. ಅದಕ್ಕಾಗಿ ಹೆಂಡತಿ ಜಗಳ ಮಾಡಿದಾಗ ಅವಳೊಂದಿಗೆ ಮಾತಿಗೆ ಮಾತು ಬೆಳೆಸಿ ನಿಮ್ಮ ಹ್ಯಾಪಿನೆಸನ್ನು ಹಾಳು ಮಾಡಿಕೊಳ್ಳಬೇಡಿ. ಜಗಳ ಮಾಡಿಕೊಂಡು ಡೈವರ್ಸಾದವರಂತೆ ಬದುಕಬೇಡಿ. ಮಾತಿನಿಂದ ಬಗೆ ಹರಿಯುವ ಸಮಸ್ಯೆಗಳನ್ನು ಮಾತಿನಿಂದ ಬಗೆ ಹರಿಸಿ. ಮುತ್ತಿನಿಂದ ಬಗೆ ಹರಿಸುವ ಸಮಸ್ಯೆಗಳನ್ನು ಮುತ್ತಿನಿಂದ‌ ಬಗೆ ಹರಿಸಿಕೊಳ್ಳಿ


ರಾತ್ರಿ ಮಲಗುವ ಮುನ್ನ ಗಂಡ ಮತ್ತು ಹೆಂಡತಿ ಮೊಬೈಲ್ ಬಳಸೋದನ್ನು ಬಿಡಬೇಕು. ಮಲಗಲು ಹೋಗುವ ಮೊದಲು ಮೊಬೈಲ್ ದೂರದಲ್ಲಿ ಇಡಬೇಕು.

ಮಲಗುವ ಮೊದಲು ಇಬ್ಬರು ಜೊತೆಯಾಗಿ ರೊಮ್ಯಾಂಟಿಕ್ ಮಾತುಗಳನ್ನಾಡಿ. ಮಲಗುವ ಸಂದರ್ಭದಲ್ಲಿ ಹಣಕಾಸಿನ ಮತ್ತು ಕಚೇರಿಯ ಕೆಲಸಗಳ ಬಗ್ಗೆ ಮಾತನಾಡಬೇಡಿ. ಇದರಿಂದ ಇಬ್ಬರ ನಡುವೆ ಮುನಿಸು ಉಂಟಾಗುವ ಸಾಧ್ಯತೆ ಇರುತ್ತದೆ      

ರಾತ್ರಿ ಉತ್ತಮ ನಿದ್ದೆಗಾಗಿ ದಂಪತಿ ಅಲ್ಪ ಆಹಾರ ಸೇವನೆ ಮಾಡಬೇಕು. ರಾತ್ರಿ ಊಟ ಮಿತವಾಗಿದ್ರೆ ಆರೋಗ್ಯಕ್ಕೂ ಮತ್ತು ಉತ್ತಮ ನಿದ್ದೆಗೆ ಸಹಕಾರಿ

ರಾತ್ರಿ ಅದರಲ್ಲಿಯೀ ಬೆಡ್​​ರೂಮಿನಲ್ಲಿ ಆಫಿಸ್ ಕೆಲಸಗಳನ್ನು ಮಾಡುತ್ತಾ ಕುಳಿತುಕೊಳ್ಳಬೇಡಿ. ಬೆಡ್ ಮೇಲಿದ್ದಾಗ ಸಂಗಾತಿ ಮೇಲೆ ಮುನಿಸುಕೊಳ್ಳಬಾರದು

ಮಲಗುವ ಮುನ್ನ ಸಂಗಾತಿ ಜೊತೆ ಮನಸ್ಸು ತುಂಬುವರೆಗೆ ಮಾತನಾಡಿ. ಇದರಿಂದ ಇಬ್ಬರ ನಡುವಿನ ಬಾಂಧವ್ಯ ಗಟ್ಟಿಯಾಗುತ್ತದೆ. 
ವೈವಾಹಿಕ ಜೀವನದ ಗುಟ್ಟು ಬೆಡ್​​ರೂಮ್ ನಲ್ಲಿ ಇರುತ್ತೆ ಅಂತಾರೆ. ಈ ಖಾಸಗಿ ಕ್ಷಣಗಳನ್ನು ಅನುಭವಿಸಬೇಕು ಮತ್ತು ಅವುಗಳೊಂದಿಗೆ ಜೀವಿಸೋದನ್ನು ಕಲಿಯಬೇಕು