ಮಂಗಳ ಮುಖಿಯರ ಮದುವೆ ಮೊದಲ ರಾತ್ರಿ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ವಿಡಿಯೋ

ಮಂಗಳ ಮುಖಿಯರ ಮದುವೆ ಮೊದಲ ರಾತ್ರಿ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ವಿಡಿಯೋ

ನಮ್ಮ ಪ್ರತಿ ಹೆಣ್ಣಿಗೆ ಪ್ರತಿ ಗಂಡು, ಪ್ರತಿ ಗಂಡಿಗೂ ಪ್ರತಿ ಹೆಣ್ಣು ಎಂಬಂತೆ ಯಾವ ರೀತಿ ಜಗದ ನಿಯಮದಲ್ಲಿ ಸೃಷ್ಟಿಕರ್ತನ ಸೃಷ್ಟಿಯ ರೀತಿ ಮದುವೆ, ಆಚಾರ, ವಿಚಾರ ಎಲ್ಲವೂ ನಡೆಯುತ್ತದೆಯೋ, ಅದೇ ರೀತಿ ನಮ್ಮೊಳಗೆ ಸಮಾಜದಲ್ಲಿ ಇವರಿಗೆ ಯಾವ ಮರ್ಯಾದೆ ಇಂದಿಗೂ ಸಿಗುತ್ತಿಲ್ಲ. ಇವರ ನಿಗೂಢ ಆಚಾರ ವಿಚಾರದ ಪದ್ಧತಿ ಯಾರಿಗೂ ಹೆಚ್ಚು ಗೊತ್ತೇ ಆಗುವುದಿಲ್ಲ. ಹೌದು ಅವರನ್ನು ನಮ್ಮ ಸಮಾಜ ಕೀಳಾಗಿ ನೋಡಲಾಗುತ್ತದೆ. ಅಂತಹವರನ್ನು ಕೆಲವರು ಮಂಗಳ ಮುಖಿ ಎಂದು ಕೆಲವರು ಕರೆಯುತ್ತಾರೆ, ಇನ್ನು ಕೆಲವರು ಚಕ್ಕ, ತೃತೀಯ ಲಿಂಗಿ, ನಪುಂಸಕ ಹೀಗೆ ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಾರೆ.

ನಾವು ನೀವು ಇಂದು ತಿಳಿದುಕೊಳ್ಳುವ ವಿಷಯ ಏನು ಅಂದ್ರೆ ಇದೇ ಮಂಗಳಮುಖಿಯರ ಕೆಲವು ಸಂಗತಿಳ ಬಗ್ಗೆ..ಹೌದು ಅವರ ಮದುವೆ ಹೇಗೆ ಆಗುತ್ತದೆ, ಯಾರ ಜೊತೆ ಆಗುತ್ತದೆ, ಒಂದು ಕಡೆ ಗಂಡು ಅಲ್ಲ ಇನ್ನೊಂದು ಕಡೆ ಹೆಣ್ಣು ಅಲ್ಲ ಅವರು ಹೇಗೆ ಮದುವೆ ಆಗುತ್ತಾರೆ, ಎಲ್ಲವೂ ಕೂಡ ನಿಮ್ಮ ತೆಲೆಯಲ್ಲಿ ಓಡುತ್ತಿರಬಹುದು, ಹೌದು ಸ್ನೇಹಿತರೆ, ಮಂಗಳ ಮುಖಿಯರು ಕೂಡ ಮದುವೆ ಆಗುತ್ತಾರೆ. ಆದರೆ ಅದು ಇಡೀ ಜೀವನದ ಉದ್ದಕ್ಕೂ ಸುಖಮಯವಾಗಿ ಸಂಸಾರ ನಡೆಸುವುದಕ್ಕೆ ಅಲ್ಲ, ಬದಲಿಗೆ ನಮ್ಮ ಧಾರ್ಮಿಕ ಗ್ರಂಥಗಳ ಪ್ರಕಾರ ಅವರ ಅಪಾರವಾದ ಒಂದು ನಂಬಿಕೆಯ ಮದುವೆ ಅದಾಗಿದೆ.

ಅವರು ಮದುವೆ ಆಗುವುದು ಆರಾಧ್ಯ ದೈವ ಎಂದು ಕರೆಸಿಕೊಳ್ಳುವ ಅರವಣ ಅವರನ್ನು. ಅಸಲಿಗೆ ಈ ಅರವಣ ಯಾರೋ ಮನುಷ್ಯ ಅಲ್ಲ, ಇವರ ಆರಾಧ್ಯ ದೈವ ಎಂದು ಕರೆಯಲಾಗಿದೆ. ಈ ಅರವನ ಯಾಕೆ ಅಷ್ಟು ಪ್ರಸಿದ್ಧಿ ಪಡೆದಿದ್ದಾರೆ ಗೊತ್ತಾ..? ಅಸಲಿಗೆ ಈ ದೇವಸ್ತಾನ ಎಲ್ಲಿ ಇರುವುದು, ಮಂಗಳಮುಖಿಯರ ಮದುವೆಯನ್ನ ಎಂದಾದರೂ ನೋಡಿದ್ದೀರಾ, ಮದುವೆ ಆದ ಬಳಿಕ ಏನೆಲ್ಲ ನಡೆಯುತ್ತದೆ, ಜೊತೆಗೆ ಇವರ ಮದುವೆ ನೋಡಬೇಕು ಅಂದರೆ ಮೊದಲು ನೀವು ಎಲ್ಲಿಗೆ ಹೋಗಬೇಕು ಗೊತ್ತ.? ಮುಂದೆ ಓದಿ ಎಲ್ಲವನ್ನು ತಿಳಿಸುತ್ತೇವೆ..   

ಹೌದು ಮಂಗಳಮುಖಿಯರು ಮದುವೆ ಆಗುವುದು ಅರ್ಜುನಾ ಮತ್ತು ದೇವ ಕನ್ಯೆ ಮಗ ಉಡುಪಿಯ ಸಂತಾನ ಐರಾವಂತ್ ಅವರನ್ನ ಹೌದು ಇವರನ್ನು ಅರಮನೆ ಎಂದು ಕರೆಯಲಾಗುತ್ತದೆ. ತಮಿಳುನಾಡು ವಿಲ್ಲುಪುರಂ ಜಿಲ್ಲೆಯ ಗೋಗಾಂ ನಲ್ಲಿ ಪ್ರತಿ ವರ್ಷ ಈ ಮಂಗಳಮುಖಿಯರ ಮದುವೆ ಅದ್ದೂರಿಯಾಗಿ ನಡೆಯುತ್ತೆ. ಪ್ರತಿವರ್ಷ ಹೊಸ ವರ್ಷದ ಮೊದಲ ಹುಣ್ಣಿಮೆಯ ಆರಂಭದ ದಿನದಿಂದ ತೃತೀಯ ಲಿಂಗಿಗಳ ಆರಾಧ್ಯದೈವ ಅರವಣನ ಜೊತೆ ಮದುವೆ ಆಗುತ್ತದೆ. ಅದು ಕೇವಲ ಒಂದು ದಿನದ ರಾತ್ರಿ ಮಾತ್ರ.

ಮಂಗಳಮುಖಿಯರು ಈ ದೇವಸ್ಥಾನದಲ್ಲಿ ಸುಮಾರು 17 ದಿನಗಳ ಕಾಲ ಮದುವೆ ಆಗುತ್ತಾರೆ. ಅದು ಆ ದೇವಸ್ಥಾನದ ಪೂಜಾರಿ ಕೈಯಲ್ಲಿ ತಾಳಿ ಕಟ್ಟಿಸಿಕೊಂಡು. ಮಾರ್ನೆ ದಿನ ಅಂದರೆ, 18ನೇ ದಿವಸ ಅರವಣ ಮೂರ್ತಿಯ ಮೆರವಣಿಗೆ ಮಾಡಿ ಒಡೆಯಲಾಗುತ್ತದೆ. ಧಾರ್ಮಿಕ ವಿಚಾರದ ಆಚರಣೆಯ ಪ್ರಕಾರ, ಇವರು ನಂಬಿದ ರೀತಿ ಅರವಣ ದೇವರು ಸಾವನ್ನಪ್ಪುತ್ತಾರೆ. ಇವರೆಲ್ಲ ಒಂದೇ ರಾತ್ರಿ ಕಳೆದು ಮರುದಿವಸ ವಿಧವೆ ಆಗುತ್ತಾರೆ.. ಕಣ್ಣೀರು ಹಾಕುತ್ತಾ ಶೃಂಗಾರ ಕಳಚಿ ವಿಧವೆಯ ಶೌಕಾಚರಣೆ ಮಾಡುತ್ತಾರೆ.

ಇದಕ್ಕೂ ಒಂದು ದೊಡ್ಡ ಕಥೆ ಇದೆ, ಮಹಾಭಾರತದ ಯುದ್ಧದ ಸಮಯದಲ್ಲಿ ಪಾಂಡವರು ಯುದ್ಧಕ್ಕೆ ಹೋಗುವ ಮುನ್ನ ದೇವಿಯಲ್ಲಿ ಪೂಜೆ ಮಾಡಿಸಿದ್ದರು.
ಆ ದೇವಿಗೆ ಆಗ ಒಂದು ನರಬಲಿ ಕೊಡಬೇಕಾಗುತ್ತದೆ. ಆಗ ಅರ್ಜುನ ಮತ್ತು ದೇವಕನ್ಯೆ ಉಲುಪಿ ಮಗನಾದ ಅರವಣ ನಾನು ನರಬಲಿ ಆಗುವುದಕ್ಕೆ ಸಿದ್ದ ಎಂದು ಹೇಳುತ್ತಾನೆ..ಆದರೆ ನನ್ನದೊಂದು ಕಂಡಿಶನ್ ಇದೆ ಎಂದು ಸಹ ಹೇಳಿದ್ದು, ನನಗೆ ಮದುವೆ ಮಾಡಿ ನಂತರ ನಾನು ನರಬಲಿ ಆಗುತ್ತೇನೆ ಎಂದು ಅರವಣ ಆಗ ಹೇಳಿರುತ್ತಾನಂತೆ. ನಂತರ ಪಾಂಡವರೆಲ್ಲರೂ ಚಿಂತಿಗೆ ಒಳಗಾಗುತ್ತಾರೆ..

ನಂತರ ಈತನಿಗೆ ಹೇಗೆ ಅಂದು ಮದುವೆ ಮಾಡಿದ್ದರು, ಯಾರ ಜೊತೆ ಮದುವೆ ಮಾಡಿಸಿ ಹೇಗೆ ಬಲಿ ಕೊಟ್ಟರು, ಜೊತೆಗೆ ಮೋಹಿನಿ ರೂಪದಲ್ಲಿದ್ದು ಅರವಣನ ಜೊತೆ ಮದುವೆ ಆಗಲು ಬಂದವರು ಯಾರು? ಜೊತೆಗೆ ಇಂದಿಗೂ ಕೂಡ ಆತನನ್ನು ಯಾಕೆ ಆರಾಧ್ಯದೈವ ಎಂದು ಈ ಮಂಗಳಮುಖಿಯರು ಕರೆಯುತ್ತಾರೆ ಎಲ್ಲವನ್ನು ಈ ವಿಡಿಯೋದಲ್ಲಿ ನೋಡಿ.. ಜೊತೆಗೆ ಈ  ಮಂಗಳಮುಖಿಯರ ಶವವನ್ನು ಯಾಕೆ ಯಾರಿಗೂ ಕಾಣದಂತೆ ಅಂತ್ಯ ಸಂಸ್ಕಾರ ಮಾಡಿ ಮುಗಿಸುತ್ತಾರೆ. ಅದರ ಹಿನ್ನೆಲೆ ಏನು ಎಂಬುದಾಗಿಯೂ ಕೂಡ ಈ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ, ಧನ್ಯವಾದಗಳು. ( video credit : DhruDhwa )