ಸಂಜು ಬಸಯ್ಯ ಜೋಡಿಗೆ ಎಂತಹ ಚುಚ್ಚು ಮಾತುಗಳ ಬಂದಿದ್ದವು ಗೊತ್ತೇ..? ವೇದಿಕೆ ಮೇಲೆ ಎಲ್ಲಾ ಬಿಚ್ಚಿಟ್ಟ ಸಂಜು
ಜೀ ಕನ್ನಡದ ಖ್ಯಾತ ಪ್ರೋಗ್ರಾಮ್ ಆದಂತಹ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದವರಲ್ಲಿ ಕಲಾವಿದ ಸಂಜು ಬಸಯ್ಯ ಅವರು ಕೂಡ ಒಬ್ಬರು. ಹೌದು ಸಂಜು ಬಸಯ್ಯ ಮೂಲತಃ ಬೆಳಗಾವಿ ಜಿಲ್ಲೆಯವರು..ಆರಂಭದಲ್ಲಿ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ನಾಟಕ ಮಾಡುತ್ತಾ ಅವರಲ್ಲಿರುವ ಕಲೆಯ ಆರ್ಕೆಸ್ಟ್ರಾ ಮೂಲಕ, ಜನರನ್ನು ನಗಿಸುತ್ತಾ ತುಂಬಾನೇ ಚರ ಪರಿಚಿತ ಆಗಿದ್ದಂತವರು. ಯಾವಾಗ ನಟ ಸಂಜು ಬಸಯ್ಯ ಕನ್ನಡದ ಜೀ ಕನ್ನಡ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಬರುತ್ತಾರೋ ಆಗಿನಿಂದ, ಇವರ ದೊಡ್ಡ ಪರದೆ ಸಿನಿಮಾ ಜರ್ನಿ ಸಹ ಆರಂಭ ಆಗುತ್ತದೆ.
ನಟ ದರ್ಶನ್ ಅವರೊಟ್ಟಿಗೆ ದೊಡ್ಡ ಸಿನಿಮಾದಲ್ಲೂ ಸಹ ನಟಿಸುತ್ತಾರೆ. ಇದರ ನಡುವೆ ಅವರ ಮದುವೆ ಕೂಡ ದೊಡ್ಡದಾಗಿ ಸದ್ದು ಮಾಡಿತ್ತು. ಬಳ್ಳಾರಿ ಪಲ್ಲವಿ ಅವರನ್ನು ವಿವಾಹ ಆಗುವುದಾಗಿ ತಾವು ಪ್ರೀತಿ ಮಾಡುತ್ತಿರುವ ವಿಚಾರವನ್ನ ಆಗ ಜೀ ಕನ್ನಡದ ವೇದಿಕೆ ಮೇಲೆಯೆ ಹೇಳಿಕೊಂಡರು..ನಂತರ ಇವರಿಬ್ಬರ ಜೋಡಿ ನೋಡಿ ಕೆಲವರು ಖುಷಿ ಪಟ್ಟರೆ, ಇನ್ನೂ ಕೆಲವರು ಹುಳಿ ಹಿಂಡುವ ಕೆಲಸ ಮಾಡಿದರು ಎಂದರೆ ತಪ್ಪಾಗಲಾರದು. ಹೌದು ಆನಂತರದಲ್ಲಿ ಇವರಿಬ್ಬರು ಬೇರೆ ಬೇರೆ ಆಗಿದ್ದು ಉಂಟು. ಅದು ಕೇವಲ ಮೂರು ದಿನ ಮಾತ್ರವಂತೆ. ನಿಜ ಪ್ರೀತಿಗೆ ಯಾವುದು ಅಡ್ಡಿ ಬರುವುದಿಲ್ಲ ಎಂದು ಈ ಜೋಡಿ ತೋರಿಸಿಕೊಟ್ಟಿತು.
ಜನರ ಕೆಟ್ಟ ಕೆಟ್ಟ ಚುಚ್ಚು ಮಾತುಗಳನ್ನು ಕೇಳಿ ಕೇಳಿ ಇವರಿಬ್ಬರು ಬೇರೆ ಬೇರೆ ಆಗಲು ನಿರ್ಧರಿಸಿದ್ದರಂತೆ. ಅದನ್ನು ಸಂಜು ಬಸಯ್ಯ ಅವರೇ ಹೇಳಿಕೊಂಡಿದ್ದರು. ಹೌದು ಇದೀಗ ಎಲ್ಲವನ್ನು ಮೆಟ್ಟಿ ನಿಂತಿರುವ ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ಅವರು ಮದುವೆ ಆಗಿದ್ದಾರೆ. ಕೆಲವರು ಇವರಿಗೆ ಶುಭ ಕೋರಿದರೆ, ಇನ್ನೂ ಕೆಲವರು ಹಿಂದುಗಡೆಯಿಂದ ನಿಂತು ತುಂಬಾ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಸಂಜು ಬಸಯ್ಯ ಅವರೇ ಹೇಳಿಕೊಂಡಿದ್ದಾರೆ. ಆ ವಿಚಾರವನ್ನು ಇದೀಗ ವೇದಿಕೆ ಮೇಲೆ ಹೇಳಿಕೊಂಡಿರುವ ಸಂಜು ಬಸಯ್ಯ ಅವರು ನಮ್ಮ ಮುಂದೆ ಏನಪ್ಪಾ ಚಲೋ ಜೋಡಿ, ಮದುವೆ ಆದಿ ಎಂಬುದಾಗಿ ಹೇಳುತ್ತಾರೆ.
ಹಿಂದೆ ಹೋಗಿ, ಅವ ಏನು ಬಿಡಲೇ, ಆಕೀ ಏನೂ ಸುಖ ಕಂಡಾಳು ಎನ್ನುವಂತೆ ಹೆಚ್ಚು ಹೆಚ್ಚು ಚುಚ್ಚು ಮಾತುಗಳ ಆಡುತ್ತಿದ್ದಾರೆ ಎಂದು ಇರುವ ವಿಚಾರ ಹೇಳಿ ಕಣ್ಣೀರು ಸುರಿಸಿದರು ಸಂಜು ಬಸಯ್ಯ. ಜೊತೆಗೆ ಯಾರೆ ಆಗಲಿ, ಪ್ರೀತಿ ಮಾಡಿದರೆ ಮನಸ್ಸಿನಿಂದ ಪ್ರೀತಿ ಮಾಡಿ, ದೇಹದ ಬಗ್ಗೆ ಮುಖವನ್ನು ನೋಡಿಕೊಂಡು ಪ್ರೀತಿ ಮಾಡಬೇಡಿ, ನಾನು ಅವಳನ್ನು ಅರ್ಥ ಮಾಡಿಕೊಂಡಿದ್ದೇನೆ, ನನ್ನ ಅವಳು ಸಹ ಅರ್ಥಮಾಡಿಕೊಂಡಿದ್ದಾಳೆ. ನಿಜ ಪ್ರೀತಿಗೆ ಬೆಲೆ ಕೊಡಿ ಎಂಬುದಾಗಿ ಹೇಳಿದ್ದಾರೆ ಸಂಜು. ಅಸಲಿಗೆ ಇನ್ನು ಏನೇನೆಲ್ಲ ಸಂಜು ಬಸಯ್ಯ ಮತ್ತು ಪಲ್ಲವಿ ಅವರ ಮದುವೆ ಕುರಿತಾಗಿ ಈಗ ಮಾತುಗಳು ಬರುತ್ತಿದ್ದಾವೆ ಹಾಗೆ ಇವರ ಲವ್ ಸ್ಟೋರಿ ಹೇಗಿತ್ತು, ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ, ಹಾಗೂ ನೀವು ಕೂಡ ನಿಜ ಪ್ರೀತಿಗೆ ಬೆಲೆ ಕೊಡುವುದಾದರೆ ಇಂತಹ ಜೋಡಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿ ಅವರನ್ನ ಹಿಯಾಳಿಸುವ ಜನರಿಗೆ ನಿಮ್ಮದೇ ಆದ ಮಾತಿನಲಿ ಕಮೆಂಟ್ ಮಾಡಿ ಅಂಥಹವರಿಗೆ ಬುದ್ಧಿ ಹೇಳಿ, ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಧನ್ಯವಾದಗಳು...
VIDEO CREDIT : VN MEDIA KANNADA




