ದಿಢೀರನೆ ಆಸ್ಪತ್ರೆಗೆ ದಾಖಲಾದ ಹ್ಯಾಟ್ರಿಕ್ ಹೀರೋ ಶಿವಣ್ಣ! ಕಾರಣ ಏನೂ ಗೊತ್ತಾ?
ನಮ್ಮ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮನೆ ಎಂದ ಕೂಡಲೇ ನೆನಪಾಗುವ ಹೆಸರು ಎಂದರೆ ಅದು ರಾಜ್ ಕುಮಾರ್ ಕುಟುಂಬ. ಇನ್ನೂ ಈ ಕುಟುಂಬಕ್ಕೆ ಸಾಕಷ್ಟು ವರ್ಷಗಳಿಂದ ಇರುವ ಗೌರವ ಹೆಚ್ಚಾಗುತ್ತಲೇ ಇದೆಯೇ ಹೊರತು ಎಂದಿಗೂ ಕುಗ್ಗಿಲ್ಲ. ಇನ್ನೂ ಈ ದೊಡ್ಡ ಮನೆಯಲ್ಲಿ ಇರುವ ಸರಳತೆಗೆ ಹೆಚ್ಚು ಪ್ರಸಿದ್ದಿ ಹಾಗೂ ಪ್ರೀತಿ.
ಇನ್ನೂ ಈ ಕುಟುಂಬದ ಸದಸ್ಯರು ತಮ್ಮ ನಟನೆ, ಸಂಗೀತ,ನಿರ್ಮಾಣ ಹಾಗೂ ನಿರ್ದೇಶಕ ಸ್ಥಾನದಲ್ಲಿ ಇಂದು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಹೆಸರನ್ನು ಮಾಡಿದ್ದಾರೆ. ಇನ್ನೂ ಈ ಕುಟುಂಬದಲ್ಲಿ ಒಗ್ಗಟ್ಟಿನ ಮೇಲೆ ಯಾರ ಕಣ್ಣೂ ಬಿತ್ತೋ ತಿಳಿದಿಲ್ಲ. ಕೆಲವು ವರ್ಷಗಳಿಂದ ದೊಡ್ಡ ಮನೆಯ ಸದಸ್ಯರ ಸಂಖ್ಯೆ ಕೂಗುತ್ತಾ ಬರುತ್ತಿದೆ.
ಇನ್ನೂ ಇಂದು ಹಾಗೂ ಎಂದೆಂದೂ ಮರೆಯಲಾಗದ ನೋವು ಎಂದರೆ ಅದು ನಮ್ಮ ನೆಚ್ಚಿನ ಅಪ್ಪು ಅವ್ರ ಅಕಾಲಿಕ ಮರಣ. "ಅಪ್ಪು" ಅವರು ಮೂರು ವರ್ಷಗಳ ಹಿಂದೆ ಹೃದಯಾ ಘಾತದಿಂದ ನಮ್ಮನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ನಾವಿನ್ನೂ ಅವರ ಸಾವಿನಿಂದ ಹೊರಗೆ ಬಂದಿಲ್ಲ ಹೀಗಿರುವಾಗ ಇದೀಗ ಮತ್ತೆ "ಶಿವಣ್ಣ" ಆರೋಗ್ಯ ಸಮಸ್ಯೆ ಯಿಂದ ಆಸ್ಪತ್ರೆಗೆ ದಾಖಲು ಆಗಿದ್ದಾರೆ ಎಂಬ ಸುದ್ದಿ ಹೋರ ಬಿದ್ದಿದೆ. ಹೌದು ಸ್ನೇಹಿತರೇ ಮೊನ್ನೆಯಷ್ಟೇ ಶಿವಣ್ಣ ಅವರು ಧೃತಿ ಅವರ ಬಗ್ಗೆ ಸ್ಪಷ್ಟನೆ ನೀಡುವ ಸಮಯದಲ್ಲಿ ಬಹಳ ಆರೋಗ್ಯವಾಗಿ ಕಾಣಿಸಿಕೊಂಡರು. ಅಪ್ಪು ಅವರ ಮೂರನೇ ವರ್ಷದ ಪುಣ್ಯ ಸ್ಮರಣೆಯಲ್ಲಿ ಧೃತಿ ಅವರು ಭಾಗಿ ಆಗಿಲ್ಲ ಎಂದು ಸಾಮಾಜಿಕ ಜಾಲತಣಗಳಲ್ಲಿ ಪ್ರಶ್ನೆ ಎದುರಾಗಿತ್ತು.
ಇದಕ್ಕೆ ಶಿವಣ್ಣ ಮಾದ್ಯಮಗಳ ಮುಂದೆ ಬಂದು ಧೃತಿ ಅವರು ತಂದೆಯ ಕನಸಿನಂತೆ ಉನ್ನತ ವ್ಯಾಸಂಗಕ್ಕೆ ವಿದೇಶದಲ್ಲಿ ಇದ್ದಾರೆ. ಆ ಸಮಯದಲ್ಲಿ ಅವರಿಗೆ ಪರೀಕ್ಷೆ ಇದ್ದದ್ದರಿಂದ ಅವರು ಬರಲು ಸಾಧ್ಯವಾಗಿಲ್ಲ ಎಂದು ಎಲ್ಲಾ ಪ್ರಶ್ನೆಗೆ ಉತ್ತರ ಕೊಟ್ಟಿದ್ದರು. ಆದ್ರೆ ನೆನ್ನೆ ಅತಿಯಾದ ಸುಸ್ತು ಹಾಗೂ ನಿಶಕ್ತಿ ಹೊಂದಿದ ಕಾರಣ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇದೀಗ ಸಂಪೂರ್ಣ ಗುಣ ಮುಖರಾಗಿದ್ದಾರೆ ಎಂದು ವೈದ್ಯರು ಮದ್ಯಮಗಳ ಮುಂದೆ ತಿಳಿಸಿದ್ದಾರೆ. ಇದೀಗ ಶಿವಣ್ಣ ಕೊಡ ತಮ್ಮ ಅಭಿಮಾನಿಗಳಿಗೆ ತಾನು ಆರೋಗ್ಯವಾಗಿ ಇದ್ದೇನೆ ಎಂದು ಮನೆಯ ಮುಂದೆ ಮಕ್ಕಳ ಜೊತೆ ಕೇರಂ ಆಡುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಳ್ಳುವ ಮೂಲಕ ತಿಳಿಸಿದ್ದಾರೆ.




