ತಾಳಿ ಕಟ್ಟುವ ವೇಳೆ ಕೈ ಅಡ್ಡ ತಂದು ಮದುವೆ ನಿರಾಕರಿಸಿದ ವಧು..! ಅಸಲಿಗೆ ಕಾರಣ ಇಲ್ಲಿದೆ

ತಾಳಿ ಕಟ್ಟುವ ವೇಳೆ ಕೈ ಅಡ್ಡ ತಂದು ಮದುವೆ ನಿರಾಕರಿಸಿದ ವಧು..! ಅಸಲಿಗೆ ಕಾರಣ ಇಲ್ಲಿದೆ

ಮದುವೆ ವಿಚಾರಕ್ಕೆ ಬರುವುದಾದರೆ ಸಾಕಷ್ಟು ಇತ್ತೀಚಿನ ಘಟನೆಗಳು ನಮ್ಮನ್ನ ಭಯ ಬೀತರನ್ನಾಗಿ ಮಾಡುತ್ತಿವೆ. ಹೌದು ಹಿಂದಿನ ಕಾಲದಲ್ಲಿ ಹೀಗಿರಲಿಲ್ಲ. ಒಂದು ಬಾರಿ ಅವ್ರ ಹಿರಿಯರು ಒಪ್ಪಿ ಮದುವೆ ನಿಶ್ಚಯ ಮಾಡಿದರೂ ಅಂತ ಆದರೆ, ಯಾವುದೇ ಕಾರಣಕ್ಕೂ ಆ ಮದುವೆ ಮುರಿದು ಬೀಳುತ್ತಿರಲಿಲ್ಲ. ಅವರ ಹುಡುಗಿಗೆ ಇಷ್ಟವೋ ಕಷ್ಟವೋ ಗೊತ್ತಿಲ್ಲ, ಅವರ ತಂದೆ ತಾಯಿ ಒಪ್ಪಿದ ಮೇಲೆ ಮುಗಿದೆ ಹೋಗುತ್ತಿತ್ತು..ಹಾಗೇನೇ ಅವರ ಮರ್ಯಾದೆ ಕಾಯುವುದಕ್ಕೊ, ಇನ್ಯಾವುದೋ ಒಂದು ವಿಚಾರಕ್ಕೋ ತಾಳಿ ಕಟ್ಟಿಸಿಕೊಂಡು ಜೀವನದುದ್ದಕ್ಕೂ ಹುಡುಗನ ಜೊತೆ ಜೀವನ ಮಾಡುತ್ತಿದ್ದರು ಹುಡುಗಿಯರು.

ಆದರೆ ಈಗಿನ ಕಾಲ ಹಾಗಲ್ಲ. ಮದುವೆಗೂ ಮುನ್ನ ತಮ್ಮ ಇಷ್ಟದ ಹುಡುಗನನ್ನೇ ಆರಿಸಿಕೊಂಡು ಮದುವೆ ಆಗುತ್ತಾರೆ ಈಗಿನ ಹುಡುಗಿಯರು. ಲವ್ ಮಾಡ್ತಾರೆ, ಲವ್ ಹೆಸರಲ್ಲಿ ಕೆಲವರು ಅದೇನೇನೋ ಮದುವೆ ಮುನ್ನವೇ ಮಾಡ್ತಾರೆ, ಅದೆಲ್ಲ ನಾವು ಹೇಳುವ ಹಾಗಿಲ್ಲ. ಹೌದು ತಮ್ಮ ಇಷ್ಟವನ್ನು ಹೇಳಿಕೊಂಡು ಮದುವೆಗೆ ಒಪ್ಪಿಗೆ ಈಗ ಸೂಚಿಸುತ್ತಾರೆ ಎನ್ನಬಹುದು. ಅದರ ನಡುವೆ ನಿನ್ನೆ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ ಗೆಳೆಯರೇ. ಅದುವೇ ಮದುವೆ ಕಾರ್ಯ ಸ್ಥಗಿತ ಆದ ವಿಡಿಯೋ. 

ಮದುವೆಗೆ ತುಂಬಾ ಜೋರಾಗಿ ಎಲ್ಲವ ಹಮ್ಮಿಕೊಂಡಿದ್ದ ವರನ ಕಡೆಯವರು ಇದರಿಂದ ಶಾಕ್ ಆಗಿದ್ದಾರೆ. ಇತ್ತ ಹುಡುಗಿ ತಂದೆ ತಾಯಿ ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಅಸಲಿಗೆ ಏನಾಯ್ತು ಅಂದ್ರೆ, ಹುಡುಗಿಗೆ ಸಣ್ಣ ವಯಸ್ಸು ಅಂದರೆ ಬಾಲ್ಯ ವಿವಾಹ ಏನು ಅಲ್ಲ, ಆದರೆ ಮದುವೆ ಆಗುವುದಕ್ಕೆ ಸಣ್ಣ ವಯಸ್ಸು..ಇನ್ನೇನು ಹುಡುಗಿಗೆ ಹುಡುಗ ತಾಳಿ ಕಟ್ಟಬೇಕು, ಆಗ ತಾಳಿ ಕಟ್ಟಬೇಡಿ ಎಂದು ಕೈ ಅಡ್ಡ ತಂದ ಹುಡುಗಿ, ನನಗೆ ಈಗಲೇ ಮದುವೆ ಆಗಲು ಇಷ್ಟ ಇಲ್ಲ, ನಾ ಇನ್ನು ಓದಬೇಕು ಎಂದಿದ್ದಾಳೆ. ಅಸಲಿಗೆ ಇದಕ್ಕೆ ಬಲವಾಗಿ ಕಾರಣ ಇರುವುದು ಇತ್ತೀಚಿಗಷ್ಟೇ ಹುಡುಗಿಗೆ ಬಿಸಿಎ ಸೀಟ್ ದೊರಕಿತ್ತಂತೆ. ಹಾಗಾಗಿ ನಾನು ಈಗ ಸುಮ್ಮನೆ ಕುಳಿತು ತಾಳಿ ಕಟ್ಟಿಸಿ ಕೊಂಡಿದ್ದೆ ಆದರೆ, ಮುಂದೆ ನಾನು ಓದಲಾಗುವುದಿಲ್ಲ ಎಂದು ಅರಿತು ಈ ರೀತಿ ನಿರ್ಧಾರ ಮಾಡಿದ್ದಾಳೆ. ಎಲ್ಲರೂ ಹುಡುಗಿಗೆ ಹೇಳಿದರು ಹುಡುಗಿ ತಾಳಿ ಕಟ್ಟಿಸಿಕೊಂಡಿಲ್ಲ ಕೊನೆಗೂ ಮದುವೆ ನಿಂತು ಹೋಗಿದೆ. 

ಆದರೆ ಇದರಿಂದ ಎರಡು ಮನೆಯವರ ಕಡೆಯೂ ಮಾನ ಹೋಗಿದೆ..ಹುಡುಗಿಯ ತಂದೆ ತಾಯಿ ಮತ್ತೆ ಮುಂದೆ ಈಕೆಗೆ ಮದುವೆ ಹೇಗೆ ಮಾಡಬೇಕು ಎನ್ನುವ ಹೆಚ್ಚು ಆತಂಕದಲ್ಲಿ ಕಣ್ಣೀರು ಸುರಿಸುತ್ತಿದ್ದಾರೆ. ಅತ್ತ ಹುಡುಗನ ಕಡೆಯವರು ತುಂಬಾ ಖರ್ಚು ಮಾಡಿದ್ದೀವಿ ಮದುವೆಗೆ, ಈ ರೀತಿ ಇಷ್ಟ ಇಲ್ಲ ಅಂದರೆ ಮೊದಲೇ ಹೇಳಬಹುದು ಎಂದು ಪೊಲೀಸ್ ಠಾಣಾ ಮೆಟ್ಟಿಲು ಏರಿದ್ದಾರೆ. ಈ ನಿಂತ ಮದುವೆ ಘಟನೆಯಿಂದ ನಾವು ಅರಿತುಕೊಳ್ಳುವುದು ತುಂಬಾನೇ ಇದೆ..ಸೂಕ್ಷ್ಮವಾಗಿ ನೋಡಿದರೆ ಏನಾದರೂ ಒಂದನ್ನು ಜೀವನದಲ್ಲಿ ಅರಿತುಕೊಳ್ಳಲೇಬೇಕು ಅಲ್ವಾ.

ಇದು ನಡೆದಿರುವುದು ಚಿತ್ರದುರ್ಗ ಹೊಸದುರ್ಗ ಬಳಿ ಚಿಕ್ಕಬ್ಯಾನದಕೆರೆಯ ಹುಡುಗನ ಊರಿನಲ್ಲಿ. ಹೌದು ಹುಡುಗಿ ಚಳ್ಳಕೆರೆ ತಿಪ್ಪಾರೆಡ್ಡಿ ಹಳ್ಳಿಯ ಮೂಲದವರು ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..ಹಾಗೆ ಇಂತಹ ಘಟನೆಗಳು ಎಲ್ಲೂ ಹೆಚ್ಚಾಗಿ ಮರುಕಳಿಸುವುದಿಲ್ಲ, ತೀರಾ ಕಡಿಮೆ. ಆದರೂ ಹುಡುಗಿಯರು ತಮ್ಮ ನಿಲುವನ್ನು ಈ ರೀತಿ ಕೆಲವರು ಕಂಡುಕೊಳ್ಳುತ್ತಿದ್ದಾರೆ ಎಂದು ಹೇಳಬೇಕು ಅಷ್ಟೇ. ಆದ್ರೆ ಮದುವೆಗೂ ಮುನ್ನವೇ ಎಲ್ಲವನ್ನ ಹೇಳಬೇಕು. ಅತ್ತ ತಂದೆ-ತಾಯಿ ಮಾನ ಕಳೆದು ಕಣ್ಣೀರು ಹಾಕುವಂತೆ ತಪ್ಪು ಮಾಡಿದಳು ಎಂದು ಹೇಳಬೇಕೋ, ಅಥ್ವಾ ತನ್ನ ಓದಿಗೆ ಈ ಕಠಿಣವಾದ ನಿರ್ಧಾರ ಮಾಡಿದ್ದು ಸರಿ ಎಂದು ಹೇಳಬೇಕೋ ಒಂದು ಗೊತ್ತಾಗುತ್ತಿಲ್ಲ. ಅತ್ತ ಹುಡುಗನ ವಿಚಾರ ಏನಾಗಿರುತ್ತದೆ ಅದು ಅವನ ಹಣೆಬರಹ ಅನ್ನಬೇಕೋ ಒಂದು ಗೊತ್ತಾಗುತಿಲ್ಲ. ಇದ್ರಲಿ ನಿಮ್ಮ ಪ್ರಕಾರ ಯಾರದು ಸರಿ ಯಾರದ್ದು ತಪ್ಪು ಎಂದು ಇದರ ಬಗ್ಗೆ ನಿಮ್ಮ ಅನಿಸಿಕೆ ಹೇಳಿ, ಧನ್ಯವಾದಗಳು.. ( video credit : Third Eye ).