ಭೂಪಟ ದಿಂದ ಕಣ್ಮರೆಯಾಗಲಿರುವ ದೇಶ ಇಸ್ರೇಲ್ ಅಥವಾ ಪ್ಯಾಲೆಸ್ತೇನ್? ಸತ್ಯವಾಗುತ್ತಾ ಕೋಡಿಶ್ರೀ ಭವಿಷ್ಯ?
ಈಗ ಜಾಗತಿಕ ಮಟ್ಟದಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವ ವಿಚಾರ ಎಂದರೆ ಅದು ಇಸ್ರೊಲ್ ಹಾಗೂ ಪ್ಯಾಲೆಸ್ತೇನ್ ಯುದ್ಧ. ಇನ್ನೂ ಕಳೆದ ಎರಡು ಮೂರು ದಿನಗಳಿಂದ ಎರಡು ದೇಶಗಳ ನಡುವೆ ಯುದ್ದ ಶುರುವಾಗಿದ್ದು. ಈ ಯುದ್ಧದಿಂದ ಈ ಎರಡು ದೇಶದ ಅದೆಷ್ಟು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಈ ಎರಡು ದೇಶದ ಅಧಿಕಾರಿಗಳು ಕೊಡ ತಿಳಿಸಿದ್ದಾರೆ .ಇನ್ನೂ ಈ ಯುದ್ಧವನ್ನು ನೋಡುತ್ತಿದ್ದರೆ ಕಳೆದ ಎರಡು ತಿಂಗಳ ಹಿಂದೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿರುವ ಭವಿಷ್ಯ ವಾಣಿ ಸತ್ಯ ಆಗಬಹುದು ಎನ್ನುವ ಭೀತಿ ಎಲ್ಲರಲ್ಲೂ ಉಂಟಾಗಿದೆ.
ಇನ್ನೂ ಎರಡು ತಿಂಗಳ ಹಿಂದೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಜಗತ್ತಿನಲ್ಲಿ ಸಂಕಷ್ಟಗಳ ದಿನಗಳನ್ನು ಎದುರಿಸುವ ಪರಿಸ್ಥಿತಿ ಬರುತ್ತದೆ. ಇನ್ನೂ ಶ್ರಾವಣ ಮುಗಿದ ನಂತರ ಯುದ್ಧಗಳ ಕಾರಣದಿಂದ ಸಾಕಷ್ಟು ನೋವುಗಳನ್ನು ನಾವು ಅನುಭವಿಸುತ್ತೇವೆ ಎಷ್ಟರ ಮಟ್ಟಿಗೆ ಎಂದರೆ ಎರಡು ದೇಶಗಳ ಯುದ್ಧವು ನಮ್ಮ ಭೂಪಟದಲ್ಲಿ ಅದರ ಗುರುತು ಕೊಡ ಅಳಿದು ಹೋಗುವಷ್ಟು ಹಾನಿಯನ್ನು ಉಂಟು ಮಾಡುತ್ತದೆ ಎಂದು ಈಗಾಗಲೇ ತಿಳಿಸಿದರು. ಆದರೆ ಈಗ ಆ ಭವಿಷ್ಯ ಸತ್ಯ ಆಗುವ ಎಲ್ಲ ಸೂಚನೆ ನಮಗೆ ಸಿಗುತ್ತಿದೆ.
ಈಗ ಸದ್ಯದ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಪ್ಯಾಲೆಸ್ತೇನ ಒಂದು ಭಾಗ ಎಂದು ಗುರುತಿಸಿಕೊಂಡಿರುವ ಇಸ್ರೇಲ್ ಸಾಕಷ್ಟು ವರ್ಷಗಳ ಬಳಿಕ ತಾನು ಕೊಡ ಸ್ವತಂತ್ರ ದೇಶ ಎಂದು ಗುರುತಿಸಿಕೊಂಡಿದೆ. ಇನ್ನೂ ಈ ದೇಶ ತನ್ನ ಸ್ವತಂತ್ರ ಎಂದು ಅಸ್ತಿತ್ವಕ್ಕೆ ಬಂದು ಬರೋಬ್ಬರಿ 60 ವರ್ಷಗಳೇ ಉರುಳಿದೆ. ಆದರೆ ಇದೀಗ ಇಸ್ರೇಲ್ ಸ್ವತಂತ್ರ ದೇಶವೆಂದು ನೆರೆಹೊರೆ ದೇಶಗಳು ಒಪ್ಪಿಕೊಳಲ್ಲು ಸಿದ್ದವಿಲ್ಲ. ಹಾಗಾಗಿ ಏಕಾಏಕಿ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದೆ, ಈಗ ಇಸ್ರೇಲ್ ಕೂಡ ಯುದ್ಧವನ್ನು ಹೋರ ದೇಶದ ಮೇಲೆ ತನ್ನ ಶಕ್ತಿಯನ್ನು ಬಳಸಿ ದಾಳಿ ಮಾಡಲು ಶುರುಮಾಡಿದೆ. ಈಗ ಅಧಿಕಾರದಲ್ಲಿ ಇರುವ ಅಧಿಕಾರಿಗಳು ತಿಳಿಸಿರುವ ಪ್ರಕಾರ 1 ಸಾವಿರಕ್ಕೂ ಹೆಚ್ಚಿನ ಉಗ್ರರು ಸಾವನ್ನಪ್ಪಿದ್ದಾರೆ, ಹಾಗೆಯೇ 800ಕ್ಕೂ ಅಧಿಕ ಇಸ್ರೇಲ್ ನಾಗರೀಕರೇ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಿರುವಾಗ ಈ ದೇಶ ಇನ್ನಷ್ಟು ಸಾವನ್ನು ಅನುಭವಿಸುತ್ತಾ ಬಂದರೆ ಈ ದೇಶದ ಗುರುತು ಭೋಪಟದಿಂದ ಅಳಿಯುವ ಎಲ್ಲಾ ಸೂಚನೆ ಇದೆ. ಇನ್ನೂ ಇದೆಲ್ಲದನ್ನು ಗಮನಿಸಿದರೆ ಕೊಡಿ ಮಠದ ಸ್ವಾಮೀಜಿ ಹೇಳಿರುವ ಮಾತು ಸತ್ಯ ಆಗಬಹುದು ಎನ್ನುವ ಅನುಮಾನ ಹುಟ್ಟಿಕೊಂಡಿದೆ.




