ಟ್ವೀಟ್ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ರಶ್ಮಿಕ ಮಂದಣ್ಣ! ಕಾರಣ ಏನೂ ಗೊತ್ತಾ?

ಟ್ವೀಟ್ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ರಶ್ಮಿಕ ಮಂದಣ್ಣ! ಕಾರಣ ಏನೂ ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ಮೂಲಕ ಗುರುತಿಸಿಕೊಂಡ ಈಕೆ ಇಂದು ಪಂಚ ಭಾಷಾ ನಟಿ ಎಂದು ಗುರುತಿಸಿಕೊಂಡ ನಟಿಯ ಬಗ್ಗೆ ಮಾತನಾಡಲು ಹೊರಟ್ಟಿದ್ದೆವೆ. ಇನ್ನೂ ಈ ನಟಿಯ ಬಗ್ಗೆ ಸದಾ ಕಾಲ ಸುದ್ದಿಯಲ್ಲಿ ಇರುತ್ತದೆ. ಕೆಲವು ಬಾರಿ ಸಿನಿಮಾಗಳ ಬಗ್ಗೆ ಸದ್ದು ಮಾಡುತ್ತಿದ್ದರೆ ಮತ್ತೆ ಕೆಲವೇ ಬಾರಿ ಈಕೆ ಹೇಳುವ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಇನ್ನೂ ಈ ನಟಿ 2015 ರಲ್ಲಿ ನಮ್ಮ ಕನ್ನಡಿಗರು ತೆಗೆದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ರಂಗಕ್ಕೆ ಕಾಲಿಟ್ಟರು. ಇನ್ನೂ ಕೇವಲ ಒಂದೇ ಸಿನಿಮಾ ಮೂಲಕ ಹಿಟ್ ಎನ್ನುವ ಪಟ್ಟ ಗಿಟ್ಟಿಸಿಕೊಂಡು ನ್ಯಾಷನಲ್ ಕ್ರಷ್ ಕೂಡ ಆದರೂ. ಕೇವಲ ಒಂದೇ ಸಿನಿಮಾ ಮೂಲಕ ಪರ ಭಾಷಾ ಪ್ರೇಕ್ಷಕರ ಮನಸ್ಸನ್ನು ಕೊಡ ಗೆದ್ದಿದ್ದಾರೆ.   

ಇನ್ನೂ ಈ ನಟಿ ಕಿರಿಕ್ ಪಾರ್ಟಿ ಸಿನಿಮಾ ಪರಿಚಯ ಮಾಡಿಕೊಂಡು ಸಿನಿ ಕೆರಿಯರ್ ಶುರು ಮಾಡಿದ ಈಕೆ ಕೇವಲ ಏಳು ವರ್ಷದಲ್ಲಿ ಅತ್ಯಂತ ವೇಗ ಜನಪ್ರಿಯತೆ ಪಡೆದ ನಟಿ ಎಂದು ಗುರುತಿಸಿಕೊಂಡಿದ್ದಾರೆ. ಇನ್ನೂ ನಮ್ಮ ಕನ್ನಡ ಹುಡುಗಿ ಪರ ಭಾಷೆಯಲ್ಲಿ ಮಿಂಚುವುದು ಎಲ್ಲರಿಗೂ ಕೊಡ ಹೆಮ್ಮೆ ಆದರೆ ನಮ್ಮ ಕನ್ನಡಕ್ಕೆ ಯಾವ ಗೌರವ ನೀಡದೆ ಇರುವುದು ಈಕೆಯನ್ನು ಎಲ್ಲಾ ಕನ್ನಡಿಗರ ಕೋಪಕ್ಕೆ ಗುರಿಯಾಗಿದೆ. ಹಾಗಾಗಿ ಈಕೆಯನ್ನು ಹೆಚ್ಚಾಗಿ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಅಥವಾ ಆಯ್ಕೆ ಮಾಡಿಕೊಳ್ಳುವುದು ಕಡಿಮೆಯಾಗಿದೆ. ಇನ್ನೂ ಪರ ಭಾಷೆಯಲ್ಲಿ ಈಕೆಗೆ ಒಳ್ಳೆಯ ಬೇಡಿಕೆ ಇದೆ ಎಂದರೆ ತಪ್ಪಾಗಲಾರದು.

ಇನ್ನೂ ಈ ನಟಿ ಸದ್ಯದಲ್ಲಿ ಸುದ್ದಿಯಲ್ಲಿ ಇದ್ದಾರೆ. ಅದು ಸಿನಿಮಾಗಳ ಅಥವಾ ವಿವಾದಾತ್ಮಕ ಹೇಳಿಕೆ ಮೂಲಕ ಅಲ್ಲ. ಅದರ ಹೊರತಾಗಿ ಈಕೆಯ ಡುಪ್ ಹಾಕಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಚಾರಕ್ಕೆ ಕೋಪಗೊಂಡು ಖಾರವಾಗೀ ಟ್ವೀಟ್ ಮಾಡಿದ್ದಾರೆ. ಇನ್ನೂ ಝಿಯಾ ಪಟೇಲ್ ಎನ್ನುವ ಹುಡುಗಿಯ ಮುಖಕ್ಕೆ ರಶ್ಮಿಕ ಅವರ ಮುಖ ಹಾಕಿರುವ ಫೋಟೋ ಅದು ಫೇಕ್ ಎಂದು ಸಾಬೀತು ಮಾಡಲಾಗಿತ್ತು. ಇದೀಗ ಈ ವಿಚಾರಕ್ಕೆ ರಶ್ಮಿಕ ಅವರು ಟ್ವೀಟ್ ಮಾಡುವ ಮೂಲಕ ಈ ಟೆಕ್ನಾಲಜಿ ಇಂದ ಆಗುವ ಸಮಸ್ಯೆ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಇನ್ನೂ ಈ ನಟಿ ನಾನೊಬ್ಬ ನಟಿ ಆದ ಕಾರಣ ನನಗೆ ಅಷ್ಟಾಗಿ ತೊಂದರೆ ಆಗುವುದಿಲ್ಲ ಆದರೆ ಇದೇ ಕೆಲ್ಸ ಒಬ್ಬ ಸಾಮಾನ್ಯ ವರ್ಗಕ್ಕೆ ಆದರೆ ಆಗುವ ತೊಂದರೆಯ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಟ್ವೀಟ್ ಮುಖಾಂತರ ಮನವಿ ಮಾಡಿದ್ದಾರೆ.