ಗಂಡನನ್ನು ಕೊಲ್ಲಲು 7 ಲಕ್ಷ ಸುಪಾರಿ ಕೊಟ್ಟವಳು ಇವಳೇ ನೋಡಿ..

ಗಂಡನನ್ನು ಕೊಲ್ಲಲು 7 ಲಕ್ಷ ಸುಪಾರಿ ಕೊಟ್ಟವಳು ಇವಳೇ ನೋಡಿ..

ಅವರಿಬ್ಬರು ಕಳೆದ ವರ್ಷ ಮಾರ್ಚ್ 13ರ ರಂದು ಮದುವೆಯಾಗಿದ್ದರು. ಇಬ್ಬರೂ ಮದುವೆಯಾದ ಮೇಲೆ ಸುಂದರವಾದ ಜೀವನವನ್ನು ಕಟ್ಟಿಕೊಳ್ಳಬೇಕು. ಗಂಡ ಮಂಜುನಾಥ್, ಅಡುಗೆ ಕಂಟ್ರ್ಯಾಕ್ಟರ್ ಆಗಿದ್ದ ಮಂಜುನಾಥ್ ಗೆ ಭಾರೀ ಡಿಮ್ಯಾಂಡ್ ಇತ್ತು. ಯಾವುದಕ್ಕೂ ಕೊರತೆ ಇಲ್ಲ ಎಂಬಂತೆ ಸೆಟಲ್ ಆಗಿದ್ದ. ಮಂಝುನಾಥ್ ಗೆ ತಂದೆ-ತಾಯಿ ಇರಲಿಲ್ಲ. ಇಳಿವಯಸ್ಸಿನ ಅಜ್ಜಿ ಮಾತ್ರವೇ ಇದ್ದರು. ಹರ್ಷಿತಾ ಮೂಲತಃ ಮಾಗಡಿಯ ಮಾಲೂರಿನ ಹುಡುಗಿ. ಕಳೆದ ವರ್ಷ ಇಬ್ಬರೂ ಅದ್ಧೂರಿಯಾಗಿ ಮದುವೆಯಾಗಿದ್ದರು. ಸಂಸಾರಕ್ಕೆ ಯಾವುದೇ ಕೊರತೆ ಇರಲಿಲ್ಲ. ಹಾಗಿದ್ದರೂ ಗಂಡನ ಕೊಲೆ ಮದುವೆಯಾಗಿ ವರ್ಷ ತುಂಬುವುದರೊಳಗೆ ನಡೆದೇ ಹೋಗಿತ್ತು. 

ಹರ್ಷಿತಾಗೆ ದೊಡ್ಡಮ್ಮನ ಮಕ್ಕಳು ರಘು ಹಾಗೂ ರವಿಕಿರಣ್ ಎಂದು ಇದ್ದರು. ಹರ್ಷಿತಾ ಸದಾ ರಘು ಜೊತೆಗೆ ಫೋನಿನಲ್ಲಿ ಮಾತನಾಡುತ್ತಿದ್ದಳಂತೆ. ಕೊಂಚ ಹೆಚ್ಚಿನ ಸಲುಗೆಯನ್ನೇ ಹೊಂದಿದ್ದಳು ಎನ್ನಲಾಗಿದೆ. ಹರ್ಷಿತಾ ತನ್ನ ಅಕ್ರಮ ಸಂಬಂಧಕ್ಕಾಗಿ ಪತಿಯನ್ನೇ ಕೊಲೆ ಮಾಡುವ ಮನಸ್ಸು ಮಾಡಿದ್ದಾಳೆ. ಹಾಗಾಗಿ ಸಾಕಷ್ಟು ಪ್ಲಾನ್ ಅನ್ನು ಮಾಡಿಕೊಂಡಿದ್ದಾಳೆ. ಕೊಲೆ ಮಾಡಲು 7 ಲಕ್ಷ ರೂಪಾಯಿ ಸುಪಾರಿಯನ್ನು ಕೂಡ ನೀಡಿದ್ದಾಳೆ. ಮಂಜುನಾಥ್ ನೆಲೆಸಿದ್ದು, ಕುಣಿಗಲ್ ನ ಸೀನಪ್ಪನ ಹಳ್ಳಿಯಲ್ಲಿ. ಇನ್ನು ಹರ್ಷಿತಾ ಅವರು ದೊಡ್ಡಮ್ಮನ ಮಕ್ಕಳು ಇರುವುದು ಬೆಂಗಳೂರಿನಲ್ಲಿ.   

ಹರ್ಷಿತಾ ಗಂಡ ಮಂಝುನಾಥ್ ಫೆಬ್ರವರಿ 3 ರಂದು ಹುಟ್ಟು ಹಬ್ಬದ ಪ್ರಯುಕ್ತ ಸ್ನೇಹಿತರ ಜೊತೆಗೆ ಕುಣಿಗಲ್ ನಲ್ಲಿ ಪಾರ್ಟಿ ಮಾಡಿ ಬಂದಿದ್ದಾನೆ. ರಾತ್ರಿ ಮಲಗಿದ್ದಾಗ ಮಂಝುನಾಥ್ ಗೆ ಕರೆ ಬಂದಿದೆ. ಮಾತನಾಡಲು ಮನೆಯಿಂದ ಹೊರಗೆ ಹೋದ ಮಂಜುನಾಥ್ ವಾಪಸ್ ಮನೆಗೆ ಬರಲೇ ಇಲ್ಲ. ಸೀನಪ್ಪನ ಹಳ್ಳಿಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಕಿತ್ನಾಗಮಂಗಲದ ಕರೆಯಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ. ತನಿಖೆ ನಡೆಸಿದ ಪೊಲೀಸರಿಗೆ ಹೆಂಡತಿಯೇ ಮೊದಲ ಆರೋಪಿ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಮೂವರನ್ನು ಬಂಧಿಸಿದ್ದು, ಇನ್ನೂ ನಾಲ್ಕು ಜನ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.