ಮನೆ ಮಠವನ್ನು ಮಾರುವ ಪರಿಸ್ಥಿಯಲ್ಲಿ ಇದ್ದ ನಟ ದ್ವಾರಕೀಶ್! ಇವರ ಸಾವಿನ ಅಸಲಿ ಕಾರಣ ಏನು ಗೊತ್ತಾ?

ಮನೆ ಮಠವನ್ನು ಮಾರುವ ಪರಿಸ್ಥಿಯಲ್ಲಿ ಇದ್ದ ನಟ ದ್ವಾರಕೀಶ್! ಇವರ ಸಾವಿನ ಅಸಲಿ ಕಾರಣ ಏನು ಗೊತ್ತಾ?

ಇನ್ನೂ ನಮ್ಮ ಸ್ಯಾಂಡಲ್ ವುಡ್ ನ ಹಿರಿಯ ಕಲಾವಿದರ ಕೊಂಡಿ ಒಂದೊಂದಾಗಿ ಕಳಚಿ ಬೀಳುತ್ತಾ ಬಂದಿದೆ ಎಂದು ಹೇಳಬಹುದು. ಕಳೆದ ವರ್ಷದಲ್ಲಿ ಹಿರಿಯ ಕಲವಿದೆಯಾಗಿದ್ದ ಲೀಲಾವತಿ ಅಮ್ಮ ಅವರು ಅಗಲಿದ್ದರು. ಇದೀಗ ದ್ವಾರಕೀಶ್ ಅವರು ಇಂದು ಬೆಳಿಗ್ಗೆ ನಮ್ಮನ್ನು ಅಗಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಇನ್ನೂ ಅವರ ಮಗ ಯೋಗೇಶ್ ಅವರು ಮಾದ್ಯಮಗಳ ಮುಂದೆ ಬಂದು ತಿಳಿಸಿರುವ ಪ್ರಕಾರ ರಾತ್ರಿ ಹೊಟ್ಟೆ ನೋವು ಎಂದಿದ್ದರು. ಮಾತ್ರೆ ಕೊಡ ತೆಗೆದುಕೊಂಡು ಮಲಗಿ ಬೆಳಗೆ ಎದ್ದು ಬಂದು ಕಾಫಿ ಕುಡಿದು ರಾತ್ರಿ ಸರಿಯಾದ ನಿದ್ದೆ ಮಾಡಿಲ್ಲ ಎಂದು ಮತ್ತೆ ಮಲಾಗುವುದಾಗಿ ತಮ್ಮ ಕೋಣೆಗೆ ಹೋದರು. ನಾವು ಎರಡು ತಾಸು ಕಳೆದ ಬಳಿಕ ತಿಂಡಿಗೆ ಎಂದು ಹೋದಾಗ ಉಸಿರಡುತ್ತಿರಲಿಲ್ಲಾ ಎಂದು ಹೇಳಿಕೆ ನೀಡಿದ್ದಾರೆ.

ಇನ್ನೂ ಕನ್ನಡದ ಕುಳ್ಳ ಎಂದು ಹೆಸರು ಮಾಡಿ ಅತ್ಯತ್ತಮ ನಟ ನಿರ್ದೇಶಕ ಹಾಗೂ ನಿರ್ಮಾಪಕ ಎಂದೇ ಹೆಸರು ಮಾಡಿದ್ದ ಈ ನಟ ಒಂದು ಕಾಲದಲ್ಲಿ ಹೇಗೆ ಸಾಧನೆಯ ಶಿಕರ ಏರಿದ್ದರೋ ಹಾಗೆಯೇ ಸಮಯ ಕಳೆದ ಬಳಿಕ ಮನೆ ಮಠ ಎಲ್ಲವನ್ನು ಮಾರಿಕೊಂಡ ಪರಿಸ್ಥಿತಿಗೆ ಬಂದು ನಿಂತಿದ್ದಾರೆ. ಮೈಸೂರಿನ ಮೂಲದ ದ್ವಾರಕೀಶ್ ಮೆಕಾನಿಕಲ್ ಇಂಜಿನಿಯರಿಂಗ್ ಮಾಡಿ ತಮ್ಮದೇ ಆದ ವ್ಯವಹಾರವನ್ನು ಆರಂಭ ಮಾಡಿದರು. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಇವರು ಮಾವನ ಹಾಗೂ ಅಣ್ಣನ ಆಶ್ರಯದಲ್ಲಿ ಬೆಳೆದರು. ಅಣ್ಣಾ ವ್ಯವಹಾರ ನೋಡಿಸಿಕೊಂಡರೆ ಮಾವ ನಟನೆಯಲ್ಲಿ ಗುರುತಿಸಿಕೊಂಡಿದ್ದರು. ಮೊದಲಿಗೆ ಅಣ್ಣನ ವ್ಯವಹಾರದಲ್ಲಿ ಭಾಗಿ ಆಗಿದ್ದ ಇವರು ನಟನೆಯಲ್ಲಿ ಒಲವು ಹೆಚ್ಚಿಸಿಕೊಂಡು ಮದ್ರಾಸ್  ಗೆ ಬಂದರು. ಮೊದಲ ದಿನಗಳಲ್ಲಿ ಕಲಾವಿದನಾಗಿ ಗುರುತಿಸಿಕೊಂಡ ಇವರು.

ಆ ನಂತರ ಎಲ್ಲರ ಜೊತೆಗೂಡಿ ನಿರ್ಮಾಣಕ್ಕೆ ಕೈ ಹಾಕುತ್ತಾರೆ. ಇವರು ನಿರ್ಮಾಣ ಮಾಡಿದ ಮೊದಲ ಸಿನಿಮಾ ಮೇಯರ್ ಮುತ್ತಣ್ಣ ದೊಡ್ಡ ಹಿಟ್ ಪಡೆದು ಸಾಕಷ್ಟು ಹಣವನ್ನು ಸಂಪಾದನೆ ಮಾಡಿಕೊಟ್ಟಿತು. ಹೀಗೆ ರಾಜ್ ಕುಮಾರ್ ಹಾಗೂ ವಿಷ್ಣು ವರ್ಧನ್ ಅವರ ಜೊತೆ ಭಿನ್ನಾಭಿಪ್ರಾಯ ಬರುವ ವರೆಗೂ ಒಳ್ಳೆಯ ಹಣ ಗಳಿಸುತ್ತಾ ಇದ್ದರೂ. ಆದರೆ ಜಗಳದಿಂದ ಇವರ ಕಾಲ್ ಶಿಟ್ ಪಡೆದ ಇವರು ನಿರ್ಮಾಣ ಮಾಡಿದ ಸಿನಿಮಾ ಎಲ್ಲವು ಪ್ಲಾಪ್ ಆಗಿ ದೊಡ್ಡ ಸಲಾಗರನ್ನನ್ನಾಗಿ ಮಾಡಿತು.

ಅದಾದ ಬಳಿಕ ಇವರ ಕೈ ಹಿಡಿದ ಸಿನಿಮಾ ಆಪ್ತಮಿತ್ರ. ಈ ಚಿತ್ರದಿಂದ ಪಡೆದ ಹಣದಿಂದ ಸಾಲದಿಂದ ಮುಕ್ತಿಯನ್ನು ಪಡೆದುಕೊಂಡರು. ಅದಾದ ಬಳಿಕ ಚೌಕ, ಅಮ್ಮ ಐ ಲವ್ ಯು, ಚಾರುಲತಾ, ಆಟಗಾರ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಒಳ್ಳೆಯ ಹೆಸರು ಮಾಡಿದ್ದರು ಕೊಡ ಹಣ ಗಳಿಕೆಯಲ್ಲಿ ದೊಡ್ಡ ಹೊಡೆತವನ್ನು ದ್ವಾರಕೀಶ್ ಅನುಭವಿಸುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ ಮನೆಯಲ್ಲಿ ಇದ್ದ ಎಲ್ಲ ಬೆಲೆ ಬಾಳುವ ವಸ್ತುವನ್ನು ಮಾರುವುದು ಅಲ್ಲದೆ ಅವರಿಗೆ ಇದ್ದ 10 ಮನೆಯನ್ನು ಕೊಡ ಮಾರಿ ಸಾಲ ತೀರಿಸುವ ಪರಿಸ್ಥಿತಿ ಬಂದಿತ್ತು. ಇನ್ನೂ ಇವರ ಮನೆಯಲ್ಲಿ ಒಂದು ಮನೆಯನ್ನು ಕೊಡ ರಿಷಬ್ ಶೆಟ್ಟಿ ಖರೀದಿ ಮಾಡಿದ್ದಾರೆ.