ಡಾ. ಬ್ರೋ ಕಾಣೆಯಾಗಿರೋದು ನಿಜಾನಾ..? ಅದ್ಕೆ ಅಸಲಿ ಸತ್ಯ ಇಲ್ಲಿದೆ ನೋಡಿ
ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರನಾಗಿ ಮತ್ತು ಕರುನಾಡಿನ ಪ್ರತಿಯೊಬ್ಬರ ಮಿಡಿತ ಆಗಿ ಡಾ. ಬ್ರೋ ಗಗನ್ ಗೌಡ ಅವರು ತುಂಬಾನೇ ಪ್ರಸಿದ್ಧಿ ಪಡೆದಿದ್ದಾರೆ. ಹೌದು ಅವರ ಚಟಪಟ ಮಾತಿನ ಮೂಲಕ ನಮಸ್ಕಾರ ದೇವರು ಎಂದು ಮಾತು ಆರಂಭಿಸುವ ಅವರ ಕನ್ನಡ ಶೈಲಿ ಹಾಗೂ ಕನ್ನಡದ ಮೇಲಿನ ಅಭಿಮಾನ, ಕನ್ನಡ ಭಾಷೆಯ ಮೇಲಿನ ಪ್ರೀತಿ, ನಿಜಕ್ಕೂ ಎಲ್ಲರೂ ಕೂಡ ಮೆಚ್ಚುವಂತಾಗಿತ್ತು. ಗಗನ್ ಗೌಡ ಅವರು ಆರಂಭದಲ್ಲಿ ತುಂಬಾನೇ ಕಷ್ಟಪಟ್ಟು ಮೇಲೆ ಬಂದಿದ್ದಾರೆ.. ಇಂದಿಗೂ ಕೂಡ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಯಾವುದೇ ವಿಡಿಯೋ ಕಂಡ ತಕ್ಷಣ ಕ್ಷಣಾರ್ಧದಲ್ಲಿ ಮಿಲಿಯನ್ ಗಟ್ಟಲೆ ಎರಡು ಮೂರು ದಿವಸಗಳಲ್ಲಿ ವೀಕ್ಷಣೆ ಕಂಡು ವೈರಲ್ ಆಗುತ್ತದೆ. ಅವರು ಕನ್ನಡದ ನೆಲ ಜಲದ ಬಗ್ಗೆ ಕರ್ನಾಟಕದ ಬಗ್ಗೆ ಎಲ್ಲೆಡೆ ನಮ್ಮ ತನವನ್ನು ಹೆಚ್ಚೆಚ್ಚು ಪಸರಿಸುವ ಕೆಲಸ ಮಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ಡಾಕ್ಟರ್ ಬ್ರೋ ಎಂದೇ ಖ್ಯಾತಿ ಪಡೆದಿದ್ದಾರೆ ಗಗನ್ ಗೌಡ.
ಹೌದು ಗಗನ್ ಗೌಡ ಅವರು ಆರಂಭದಲ್ಲಿ ನಮ್ಮ ದೇಶದ ಅವಿಸ್ಮಯ ಮತ್ತು ಆಕರ್ಷಣೀಯ ಸ್ಥಳಗಳಿಗೆ ಮೊದಲು ಬೇಟಿ ಕೊಡುತ್ತಿದ್ದರು..ಆನಂತರ ಅಲ್ಲಿಯ ಕೆಲವು ವಿಚಾರಗಳನ್ನು ನಮಗೆ ಗೊತ್ತಿರದ ಅಂಶಗಳನ್ನು ಕನ್ನಡಿಗರಿಗೆ ಮುಟ್ಟಿಸುತ್ತಿದ್ದರು. ಅದಾದ ನಂತರ ಹೆಚ್ಚು ಹೊರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಗಗನ್. ನಮ್ಮ ಕನ್ನಡ ನೆಲದ ಬಗ್ಗೆ, ನಮ್ಮ ಹೆಮ್ಮೆಯ ಕನ್ನಡ ಭಾಷೆಯ ಬಗ್ಗೆ, ಜೊತೆಗೆ ಇಲ್ಲಿಯ ಸಂಸ್ಕೃತಿಯ ಮತ್ತು ಭಾರತದ ಸಂಸ್ಕೃತಿಯನ್ನು ಇಡೀ ವಿಶ್ವಕ್ಕೆ ಸಾರುತ್ತಿದ್ದಾರೆ..ಅಂತಹ ಕೆಲಸ ಮಾಡುತ್ತಿದ್ದವರು ಇದ್ದಕ್ಕಿದ್ದಂತೆ ಇದೀಗ ಕಾಣೆಯಾಗಿದ್ದಾರೆ ಎಂದರೆ ಏನು ಅರ್ಥ.. ಇತ್ತೀಚಿಗಷ್ಟೇ ವರ್ಲ್ಡ್ ಕಪ್ ಸಮಯದಲ್ಲಿ ಸತತವಾಗಿ ಅವರು ಕಾಣಿಸಿಕೊಂಡಿದ್ದನ್ನು ನೀವು ನೋಡಿದ್ದಿರಿ. ಅದಕ್ಕೂ ಮುನ್ನ ಚೀನಾ ದೇಶಕ್ಕೆ ಹೋಗಿ ಅಲ್ಲಿಯ ಕೆಲವು ವಿಚಾರಗಳನ್ನು ಮತ್ತು ಅಲ್ಲಿಯ ಕೆಲವು ಅಂಶಗಳನ್ನು ಆ ದೇಶದ ಆಧುನಿಕರಣದ ವಿಚಾರವಾಗಿ ಅಲ್ಲಿಯ ಡೆವಲಪ್‌ಗಳ ಬಗ್ಗೆ ಮಾತನಾಡಿ ನಮ್ಮ ದೇಶದಲ್ಲಿ ಆಗಬೇಕಿರುವ ಕೆಲವು ಬೆಳವಣಿಗೆ ಬಗ್ಗೆ ಮಾತನಾಡಿ ಸುದ್ದಿ ಆಗಿದ್ದರು. ಅಷ್ಟೇ ಕೆಲವರು ಅವರನ್ನ ಟ್ರೊಲ್ ಕೂಡ ಮಾಡಿದ್ದುಂಟು. ಅದನ್ನು ತುಂಬಾನೇ ಸೀರಿಯಸ್ ಆಗಿ ಕೆಲವರು ತೆಗೆದುಕೊಂಡು ದೇಶದ್ರೋಹಿ ಎನ್ನುವ ಪಟ್ಟ ಸಹ ಅವರಿಗೆ ಕಟ್ಟಿದರು.
ಅದಕ್ಕೆ ತಕ್ಕಂತೆ ಇದೀಗ ಅವರು ಕಾಣದಿರುವ ಹಿನ್ನೆಲೆಯಲ್ಲಿ ಕೆಲವರು ಅವರ ಕಾಣೆಯಾಗಿದ್ದಾರೆ. ಅತ್ತ ದೂರದ ದೇಶ ಚೀನಾದವರು ಅವರನ್ನು ಹಿಡಿದೊಟ್ಟು ಕೊಂಡಿದ್ದಾರೆ. ಅಥವಾ ಡಾ. ಬ್ರೋ ಮನಸ್ಸಿಗೆ ಬೇಸರ ಆಗಿ ವಿಡಿಯೋ ಮಾಡುವುದನ್ನೆ ಬಿಟ್ಟಿದ್ದಾರೆ. ಹಾಗೆ ಹೀಗೆ ಎಂದು ಸಾಕಷ್ಟು ಮಾತುಗಳು ಕೇಳಿ ಬಂದಿವೆ. ಅಸಲಿಗೆ ಅವರು ಈಗ ಎಲ್ಲಿದ್ದಾರೆ ಗೊತ್ತಾ..? ಅವರು ಎಲ್ಲಿಯೂ ಕೂಡ ಕಾಣೆಯಾಗಿಲ್ಲ ಎನ್ನುವ ಖುಷಿಯ ವಿಚಾರ ತಿಳಿದು ಬಂದಿದ್ದು, ಈ ವಿಡಿಯೋವನ್ನು ನೋಡಿ ಇದೀಗ ಎಲ್ಲಿದ್ದಾರೆ ಎನ್ನುವ ಸತ್ಯವನ್ನು ನೀವೂ ಕೂಡ ಖಚಿತ ಪಡಿಸಿಕೊಳ್ಳಿ, ಧನ್ಯವಾದಗಳು... ( video credit : Global Kannadiga )




