ನಾಲ್ಕನೇವಾರ ಮನೆಯಿಂದ ಹೊರ ಬಂದ ಟಫ್ ಕಂಟೆಸ್ಟಂಟ್! ಆ ಕಂಟೆಸ್ಟಂಟ್ ಯಾರು ಗೊತ್ತಾ?

ನಾಲ್ಕನೇವಾರ ಮನೆಯಿಂದ ಹೊರ ಬಂದ ಟಫ್ ಕಂಟೆಸ್ಟಂಟ್! ಆ ಕಂಟೆಸ್ಟಂಟ್ ಯಾರು ಗೊತ್ತಾ?

ಕನ್ನಡ ಕಿರುತೆರೆಯ ಮನೋರಂಜನೆಯ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಕನ್ನಡ ಬಿಗ್ ಬಾಸ್. ಇನ್ನೂ ಕನ್ನಡ ಬಿಗ್ ಬಾಸ್ ಈ ಬಾರಿ ದಶಕದ ಸೀಸನ್ ಆಗಿರುವ ಕಾರಣ ಮನೋರಂಜನೆ ಹಾಗೂ ರಿಯಾಲಿಟಿ ಶೋಗಳ ಪೈಕಿ ಕೊಡ ದೊಡ್ಡ ಹೈಪ್ ಕ್ರಿಯೇಟ್ ಮಾಡಿತ್ತು. ಆದರೆ ಈ ಸೀಸನ್ ನಲ್ಲಿ ಶುರುವಾಗಿದ್ದ ಹೈಪ್ ದಿನದಿಂದ ದಿನಕ್ಕೆ ಇಳಿಯುತ್ತಲೇ ಇದೆ. ಕಾರಣ ಪ್ರತಿ ಸೀಸನ್ ನಲ್ಲಿ ಕೇವಲ ಟಾಸ್ಕ್ ಸಮಯದಲ್ಲಿ ಜಗಳ ಇತ್ತು ಆದ್ರೆ ಈಗ ಪ್ರತಿ ದಿನ ಮನೋರಂಜನೆಗಿಂತ ಹೆಚ್ಚು  ಜಗಳಗಳೆ ಹೆಚ್ಚಾಗಿದೆ. ಹಾಗಾಗಿ ಪ್ರೇಕ್ಷಕರು ವರ್ಸ್ಟ್ ಸೀಸನ್ ಯವರ್ ಎನ್ನುವ ಹ್ಯಾಶ್ ಟ್ಯಾಗ್ ಕೊಡ ಶುರುಮಾಡಿದ್ದಾರೆ. 

ಇನ್ನೂ ನೆನ್ನೆ ನಡೆದ "ಸುದೀಪ್" ಅವರು ತಪ್ಪು ಭಾಷೆ ಹಾಗೂ ಟೀಕೆಗಳ ಮಾತುಗಳಿಗೆ ಬ್ರೇಕ್ ಮಾಡುವ ರೀತಿ ಎಲ್ಲರಿಗೂ ಕೊಡ ಸಕತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನೂ ಸುದೀಪ್ ಇವರಿಗೆಲ್ಲ ತಮ್ಮ ತಪ್ಪಿನ ಅರಿವು ಮಾಡಿಕೊಳ್ಳಲೇ ಬೇಕು ಎನ್ನುವ ಒತ್ತಡ ಸಾಮಾಜಿಕ ಜಾಲತಾಣಗಳಲ್ಲಿ ಬಂದಿತ್ತು. ಹಾಗಾಗಿ ಪ್ರತಿ ಬಾರಿಯ ಕ್ಲಾಸ್ ಗಿಂತ ಈ ಬಾರಿ ಖಾರವಾಗಿಯೆ ತೆಗೆದುಕೊಂಡಿದ್ದಾರೆ. ಇನ್ನೂ ಕಳೆದ ವಾರ "ಭಾಗ್ಯಶ್ರೀ" ಅವರು ಎಲಿಮಿನೇಟ್ ಆಗಬೇಕಿತ್ತು ಆದ್ರೆ ದಸರಾ ಹಬ್ಬದ ಪ್ರಯುಕ್ತ ಭಾಗ್ಯಶ್ರೀ ಅವರು ಸೇಫ್ ಆಗಿ ಮನೆಯಲ್ಲಿಯೆ ಉಳಿದುಕೊಂಡರು. ಇನ್ನೂ ಈ ವಾರ ಹುಲಿ ಉಗುರನ್ನು ಧರಿಸಿರುವ ಕಾರಣ "ವರ್ತೂರು" ಅವ್ರು ಮನೆಯಿಂದ ಪೊಲೀಸ್ ಠಾಣೆಗೆ ಹೋಗಿದ್ದರೂ.   

ಹಾಗೆಯೇ ತಮ್ಮ ಮೇಲಿದ್ದ ಆರೋಪವನ್ನು ಬಗೆಹರಿಸಿಕೊಂಡು ಈಗ ಜಾಮೀನು ಮುಖಾಂತರ ಹೋರ ಬಂದು ಮತ್ತೆ ದೊಡ್ಡ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾಗಿ ಈ ವಾರ ಡಬಲ್ ಎಲಿಮಿನೇಷನ್ ಇರಬಹುದು ಎನ್ನುವ ಸೂಚನೆ ಎಲ್ಲರಲ್ಲೂ ಇತ್ತು. ಆದ್ರೆ ಈಗ ಬಂದಿರುವ ಮಾಹಿತಿಯ ಮೂಲಕ ಈ ವಾರ ಅತಿ ಕಡಿಮೆ ವೋಟ್ ಪಡೆದುಕೊಂಡ "ರಕ್ಷಖ್ ಬುಲೆಟ್" ಅವರು ಮನೆಯಿಂದ ಹೋರ ಬಂದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ. ಇನ್ನೂ ರಕ್ಷಖ್ ಬುಲೆಟ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಷ್ಟು ದೊಡ್ಡ ಮನೆಯಲ್ಲಿ ಕಾಣಿಸಿಕೊಂಡಿಲ್ಲ ಇನ್ನೂ ಎಚ್ಚರಿಕೆ ನೀಡಿದ್ದರು ಕೊಡ ಯಾವ ಕ್ಷೇತ್ರದಲ್ಲಿ ಕೊಡ ತೊಡಗಿಸಿಕೊಳ್ಳದೆ ಇರುವ ಕಾರಣ ಈ ವಾರ ಮನೆಯಿಂದ ಹೊರ ಬಂದಿದ್ದಾರೆ.