ದೊಡ್ಡ ಮನೆಯಲ್ಲಿ ಬಟ್ಟೆ ಬಿಚ್ಚಿ ನಿಂತ ಕಾರ್ತಿಕ್! ಕಾರಣ ಏನೂ ಗೊತ್ತಾ?
ನಮ್ಮ ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದ್ರೆ ಅದು ಬಿಗ್ ಬಾಸ್ ಸೀಸನ್. ಇನ್ನೂ ಹಿಂದಿ ಅವತರಣಿಕೆಯಲ್ಲಿ ಶುರುವಾದ ಈ ರಿಯಾಲಿಟಿ ಶೋ ಇಂದು ಎಲ್ಲಾ ಭಾಷೆಗಳಲ್ಲಿ ಕೊಡ ಟಾಪ್ ಲಿಸ್ಟ್ ಪಡೆದುಕೊಂಡಿದೆ. ಇನ್ನೂ ಎಲ್ಲಾ ಭಾಷೆಯಲ್ಲಿ ಕೂಡ ಯಶಸ್ವಿಯಾಗಿ ಎರಡಂಕಿ ಯ ಸೀಸನ್ ಗಳು ಕೂಡ ಮುಕ್ತಾಯ ಕಂಡಿದೆ. ಈಗ ನಮ್ಮ ಕನ್ನಡ ಬಿಗ್ ಬಾಸ್ ಸರದಿ. ಇನ್ನೂ ಕಳೆದ ತಿಂಗಳು ಬಿಗ್ ಬಾಸ್ ಸೀಸನ್ ಹತ್ತರ ಭರ್ಜರಿ ಓಪನಿಂಗ್ ಪಡೆದು ಸತತ ಒಂದು ತಿಂಗಳಿಂದ ಬಿಗ್ ಬಾಸ್ ಸ್ಪರ್ಧಿಗಳ ಗೊಂದಲಕ್ಕೆ ತೆರೆ ಬಿದ್ದಿತು. ಇನ್ನೂ ಎಲ್ಲಾ ಭಾಷೆಯಲ್ಲಿ ಇಲ್ಲದ ಟ್ವಿಸ್ಟ್ ಇನ್ನೂ ನಮ್ಮ ಕನ್ನಡ ಬಿಗ್ ಬಾಸ್ ಸೀಸನ್ ಹತ್ತರಲ್ಲಿ ಅಡಗಿದೆ ಎನ್ನುವ ಸಂದೇಶ ಎಲ್ಲೆಡೆ ಸಾರುತ್ತಿದೆ. ಇನ್ನೂ ಮೊದಲ ದಿನವೇ ಇದರ ಟ್ವಿಸ್ಟ್ ನ ಜಲಕ್ ಕೊಡ ತೋರಿಸಲಾಗಿದೆ.
ಇನ್ನೂ ಈ ಟ್ವಿಸ್ಟ್ ಬಗ್ಗೆ ನಿಮಗೆಲ್ಲರಿಗೂ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. ಈಗಾಗಲೇ ರಿವಿಲ್ ಆಗಿರುವ ಟ್ವಿಸ್ಟ್ ಅದು. ಇನ್ನೂ ಶುರುವಿನಲ್ಲಿ ಜನರ ವೋಟಿಂಗ್ ಪ್ರಕ್ರಿಯೆ ಮೂಲಕ ಎಲ್ಲರನ್ನೂ ದೊಡ್ಡ ಮನೆಯ ಪ್ರವೇಶ ನೀಡಲಾಗಿತ್ತು. ಆದರೆ 80ಕ್ಕಿಂತ ಕಡಿಮೆ ಪಡೆದುಕೊಂಡ "ಡ್ರೋನ್ ಪ್ರತಾಪ್, ತನಿಷ, ವರ್ತೂರು ಸಂತೋಷ್, ರಕ್ಷಕ್ ಬುಲೆಟ್, ಸಂಗೀತ ಹಾಗೂ ಕಾರ್ತಿಕ್" ಅವರನ್ನು ಡೇಂಜರ್ ಜೋನ್ ನಲ್ಲಿ ಇಟ್ಟು ಆ ನಂತರ ಅವರನ್ನು ಮನೆಯ ಪ್ರವೇಶ ಮಾಡಲಾಗಿತ್ತು. ಇದೀಗ ಡೇಂಜರ್ ಜೋನ್ ನಿಂದಾ ಒಟ್ಟಾಗಿ ಬಂದವರಲ್ಲಿ ಹೆಚ್ಚಿನ ಚಟುವಟಿಕೆಗಳಲ್ಲಿ ಒಂದಾಗಿದ್ದ ಕಾರಣ ಅವರಲ್ಲಿ ಹೆಚ್ಚಿನ ಸ್ನೇಹ ಬೆಳೆಯುತ್ತಾ ಹೋಯಿತು.
ಆ ಸ್ನೇಹಿತರ ನಡುವೆ ಈಗ ಹೈಲೈಟ್ ಆಗಿರುವವರು ಎಂದ್ರೆ ಅದು ಸಂಗೀತ ಹಾಗೂ ಕಾರ್ತಿಕ್. ಇನ್ನೂ ಬಿಗ್ ಬಾಸ್ ಸೀಸನ್ ಹತ್ತರ ಕ್ಯುಟ್ ಕಪಲ್ ಎನ್ನುವ ಪ್ರಸಿದ್ದಿ ಕೂಡ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇವರಿಬ್ಬರೂ ಮಾತ್ರ ನಾವಿಬ್ಬರೂ ಜಸ್ಟ್ ಫ್ರೆಂಡ್ ಎನ್ನುವ ಮುದ್ರೆಯಿಂದ ಓಡಾಡುತ್ತಿದ್ದಾರೆ. ಈಗ ಕಡಿಮೆ ವೋಟ್ ಪಡೆದು "ಸ್ನೇಕ್ ಶ್ಯಾಮ್" ಕೂಡ ಮೊದಲ ಎಲಿಮಿನೇಟ್ ಕಾಂಟೆಸ್ಟ್ ಆಗಿ ಹೊರಬಿದ್ದಿದ್ದಾರೆ. ಇನ್ನು ಮರುದಿನವೇ ಮತ್ತೆ ನಾಮಿನೇಟ್ ಆದ "ಸಂತು, ಮೈಕಲ್ ಸಂಗೀತ " ಅವರನ್ನು ಸೇವ್ ಮಾಡಲು ಅವರ ಪರವಾಗಿ ಆಟವಾಡಲು ಬಿಗ್ ಬಾಸ್ ಅವಕಾಶ ನೀಡಿದ್ದರು. ಆಗ ಸಂಗೀತ ಅವರ ಪರವಾಗಿ "ಕಾರ್ತಿಕ್" ಅವರು ಆಟ ಆಡಿದ ರೀತಿ ಆಟ ಆದ ಬಳಿಕ ಕಾರ್ತಿಕ್ ಅವರನ್ನು ಸಂಗೀತ ಅವರು ನೋಡಿಕೊಳ್ಳುವ ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದೆ.




