ಒಂದು ಹೆಣ್ಣು ತನ್ನ ಗಂಡನ ಬಳಿ ಇದನ್ನೆ ಹೆಚ್ಚಾಗಿ ಬಯಸೋದು..! ವಿಡಿಯೋ ನೋಡಿ ತಿಳಿದುಕೊಳ್ಳಿ
ಸುಖ ಸಂಸಾರದಲ್ಲಿ ಗಂಡ ಹೆಂಡತಿಯ ಕೆಲವು ಪಾತ್ರಗಳು ನಿಜ ಜೀವನದಲ್ಲಿ ತುಂಬಾನೇ ಪ್ರಾಮುಕ್ಯತೆ ಪಡೆಯುತ್ತವೆ. ಗಂಡ ಹೆಂಡತಿ ನಡುವೆ ತಿಳಿದುಕೊಳ್ಳುವ ವಿಷಯಗಳು ಸಾಕಷ್ಟಿವೆ. ದಂಪತಿಯ ಸುಖ ಸಂಸಾರಕ್ಕೆ ಜೀವನದಲ್ಲಿ ಹೆಂಡತಿ ತಿಳಿಯಲೆಬೇಕಾದ ಗಂಡನ ಕೆಲ ವಿಷಯಗಳು, ಹಾಗೂ ಗಂಡನು ಸಹ ತಿಳಿದುಕೊಳ್ಳುವ ಹೆಂಡತಿಯ ಕೆಲವು ವಿಷಯಗಳು ಎಲ್ಲರಿಗೂ ಗೊತ್ತಿದ್ದರೆ ಚೆಂದ.. ಒಂದು ಹೆಣ್ಣು ತನ್ನ ಪ್ರೀತಿಯ ಗಂಡನ ಬಳಿ ಏನೆನೆಲ್ಲಾ ಬಯಸುತ್ತಾಳೆ ಎನ್ನುವ ಮಾಹಿತಿ ಇಂದಿನ ಈ ಲೇಖನದಾಗಿದೆ ನೋಡೋಣ ಬನ್ನಿ..
ಎಂದಿಗೂ ಕೂಡ ತನ್ನ ಪ್ರೀತಿಯ ಮಡದಿಯನ್ನ ಅನ್ಯರ ಮುಂದೆ ನಿಂದಿಸಬಾರದು. ಹಾಗಿರುವ ಗಂಡನನ್ನ ಹೆಣ್ಣು ಹೆಚ್ಚು ಪ್ರೀತಿ ಮಾಡುತ್ತಾಳೆ..ಆತನಿಂದ ಇಂತಹ ಗುಣ ಬಯಸುತ್ತಾಳೆ.. ಹೆಂಡತಿಯರ ಮುಂದೆ ಬೇರೆ ಹೆಣ್ಣನ್ನು ಎಂದಿಗೂ ಕೂಡ ಹೊಗಳಲೇಬಾರದು. ಹೆಂಡತಿಯ ಮುಂದೆ ಬೇರೆ ಮಹಿಳೆಯ ವರ್ಣನೆ ಮಾಡೋದು ಮೊದಲು ಬಿಡಬೇಕು. ಬೇರೊಬ್ಬನ ಹೆಂಡತಿಯ ಬಗ್ಗೆ ಆಕೆಯ ಅಂದ ಚಂದದ ಕುರಿತು ಮಾತನಾಡದಿರುವ ಗಂಡನನ್ನ ಹೆಣ್ಣು ಇಷ್ಟಪಡುತ್ತಾಳೆ..ಬೇರೆ ಹೆಂಗಸಿನ ಅಂದದ ಸೌಂದರ್ಯವಿಕೆ ಬಗ್ಗೆ ಮಾತನಾಡದೆ ಗಂಡ ಆದವನು ಇದ್ದುದರಲ್ಲಿಯೇ ಖುಷಿಯಾಗಿ ಇರಬೇಕು.
ಎಂದಿಗೂ ತನ್ನ ಹೆಂಡತಿಗೆ ಮನೆಯಲ್ಲಿಯ ಊಟದ ಬಗ್ಗೆ ಜೊತೆಗೆ ಊಟದ ಕೊರತೆ ಬಗ್ಗೆ ಹೇಳಬಾರದು. ಆಕೆ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಬೇಕು. ಯಾವ ಮಾತು ಆಕೆಗೆ ನೋವು ಆಗುತ್ತದೆಯೋ ಅದನ್ನು ಗಂಡ ಆದವನು ಬಿಡಬೇಕು. ಈ ರೀತಿಯ ಗುಣಗಳಿರುವ ಗಂಡನನ್ನು ಕೂಡ ಮಹಿಳೆಯರು ಇಷ್ಟಪಡುತ್ತಾರೆ ಎಂದು ತಿಳಿದು ಬಂದಿದೆ. ಗಂಡ ಹೆಂಡ್ತಿ ಅಂದಮೇಲೆ ಆಗಾಗ ಜಗಳ ಆಡುವುದು ಮಾಮೂಲಿ. ಆದರೆ ಜಗಳ ಆದ ನಂತರ ಮಹಿಳೆ ಆಗಲಿ, ಪುರುಷ ಆಗಲಿ ಇಬ್ಬರಲ್ಲಿ ಒಬ್ಬರಾದ್ರು ಸಮಾಧಾನ ಮಾಡಲು ಮುಂದೆ ಬರಬೇಕು. ಆದರೆ ಹೆಣ್ಣು ಬಯಸುವುದು ನನ್ನ ಗಂಡನೆ ನನ್ನನ್ನು ಸಮಾಧಾನ ಮಾಡಲಿ ಎನ್ನುವ ಒಂದು ಸಣ್ಣ ಪ್ರೀತಿಯ ಅಂಶವನ್ನು.
ಆಗಾಗ ಹೆಂಡತಿ ಕೆಲಸದಲ್ಲಿ ಸಹಾಯ ಮಾಡಬೇಕು. ಚಿಕ್ಕ ಚಿಕ್ಕ ಆಕೆಯ ಆಸೆಗಳನ್ನು ಈಡೇರಿಸುವಲ್ಲಿ ಗಂಡ ಆದವನು ಪ್ರಯತ್ನ ಪಡಬೇಕು. ತಾನು ಪ್ರತಿದಿನ ಕಷ್ಟ ಪಡುತ್ತಾನೆ, ತಾನು ಎಷ್ಟು ಕಷ್ಟಪಡುತ್ತಾನೋ ಒಂದು ಕುಟುಂಬವನ್ನು ಸಾಗಿಸಲು, ತನ್ನ ಹೆಂಡತಿ ಕೂಡ ಅಷ್ಟೇ ಮನೆಯಲಿ ಕಷ್ಟ ಪಡುತ್ತಾಳೆ ಎನ್ನುವ ಒಂದು ಸಣ್ಣದಾದ ತಿಳುವಳಿಕೆ ಸಹ ಗಂಡನಿಗೆ ಇರಬೇಕು.. ಎಂದಿಗೂ ಮಕ್ಕಳ ಎದುರು ಹೆಂಡತಿಯನ್ನು ಹೊಡೆಯುವುದು ಆಗಲಿ, ಅಥ್ವಾ ಆಕೆಯ ಮೇಲೆ ಕೈ ಮಾಡುವ ಗುಣವನ್ನು ಇಟ್ಟುಕೊಳ್ಳಬೇಡಿ..
ನಿಮ್ಮ ತಂದೆ ತಾಯಿಗೆ ನೀವು ಹೇಗೆ ಮರ್ಯಾದೆಯನ್ನ ಕೊಡುತ್ತೀರೋ ನಿಮ್ಮ ಹೆಂಡತಿಗೂ ಕೂಡ ಮರೆಯಾದೆ ಕೊಡಿ.. ನಿಮ್ಮ ತಾಯಿಯ ಎಷ್ಟು ಪ್ರೀತಿ ಮಾಡುತ್ತಿರೋ ಅಷ್ಟೇ ಪ್ರೀತಿಯನ್ನು ನಿಮ್ಮ ಹೆಂಡತಿಗೂ ಕೊಡಿ, ಇದನ್ನೇ ಆಕೆ ಹೆಚ್ಚು ಬಯಸುವುದು. ಅಸಲಿಗೆ ಇನ್ನೂ ಯಾವೆಲ್ಲ ಅಂಶಗಳು ಗಂಡ ಹೆಂಡತಿಯರ ನಡುವೆ ನಡೆಯುತ್ತವೆ, ಯಾವ ಅಂಶಗಳನ್ನು ತನ್ನ ಗಂಡನಿಂದ ಹೆಣ್ಣಾದವಳು ಬಯಸುತ್ತಾಳೆ ಎನ್ನಲಾಗಿ ತಿಳಿಯಲು ಈ ವಿಡಿಯೋ ಕೊನೆಯವರೆಗೂ ನೋಡಿ, ಮತ್ತು ವಿಡಿಯೋದಲ್ಲಿಯ ಮಾಹಿತಿ ನಿಮಗೆ ಸ್ವಲ್ಪ ಆದರೂ ಇನ್ಫರ್ಮ್ಯಾಟಿಂಗ್ ಇದೆ ಅಂತ ಅನಿಸಿದರೆ ವಿಡಿಯೋ ಶೇರ್ ಮಾಡಿ, ಮತ್ತು ಈ ಮಾಹಿತಿಗೊಂದು ಮೆಚ್ಚುಗೆ ನೀಡಿ ಧನ್ಯವಾದಗಳು..( video credit : Tips4kannada )