ಹಣದ ಆಸೆಗೆ ಸ್ನೇಹಿತೆಯಿಂದಲೇ ಕೊಲೆಯಾದ ಈ ಬ್ಯುಸಿನೆಸ್ ವುಮೆನ್! ಆಕೆ ಯಾರು ಹಾಗೂ ಹೇಗೆ ಕೊಲೆಯಾದದ್ದು ಗೊತ್ತಾ?

ಹಣದ ಆಸೆಗೆ ಸ್ನೇಹಿತೆಯಿಂದಲೇ ಕೊಲೆಯಾದ ಈ ಬ್ಯುಸಿನೆಸ್ ವುಮೆನ್! ಆಕೆ ಯಾರು ಹಾಗೂ ಹೇಗೆ ಕೊಲೆಯಾದದ್ದು ಗೊತ್ತಾ?

ಬ್ಯುಸಿನೆಸ್ (Business) ಎಂದರೆ ಲಾಭಕ್ಕಾಗಿ ಸೇವೆಗಳು ಅಥವಾ ಉತ್ಪನ್ನಗಳ ಉತ್ಪಾದನೆ, ಖರೀದಿ ಮತ್ತು ಮಾರಾಟದ ಕ್ರಿಯೆಗಳು.ಬ್ಯುಸಿನೆಸ್‌ ಆರಂಭಿಸುವ ಮೊದಲು, ವೈಯಕ್ತಿಕ ಆಸಕ್ತಿಗಳು, ಮಾರುಕಟ್ಟೆ ತಜ್ಞರು, ಹಣಕಾಸಿನ ಯೋಜನೆ, ಮಾರಾಟ ಮತ್ತು ಮಾರುಕಟ್ಟೆ ತಂತ್ರಗಳು, ಕಾನೂನು ಮತ್ತು ನಿಯಮಗಳ ಬಗ್ಗೆ ಸಮಗ್ರ ಅಧ್ಯಯನ ಮಾಡುವುದು ಅಗತ್ಯವಿದೆ. ಇನ್ನೂ e ಬ್ಯುಸಿನೆಸ್ ಪೀಠಿಕೆ ಯಾಕಪ್ಪಾ ಎಂದ್ರೆ ಇದೆ ಬ್ಯುಸಿನೆಸ್ ಇಂದ ದೊಡ್ಡ ಕಂಪನಿಗಳನ್ನು ಕಟ್ಟಿ ಲಾಭ ಪಡೆದು ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಂಡ ಮೂವರು ಹೆಣ್ಣು ಮಕ್ಕಳ ಕಥೆ ಹೇಳಲು. ಇನ್ನೂ ಈ ಘಟನೆ ನಡೆದದ್ದು ಇಂದೋರ್ ನಲ್ಲಿ. 

ಇಂದೋರ್ ನಲ್ಲಿ ಬ್ಯುಸಿನೆಸ್ ಮಾಡುತ್ತಾ ನೆಲೆಸಿದ್ದ ತಾಯಿ ಆಶ್ಲೇಷ ಹಾಗೂ ಅವರ ಮಗಳು ಗಾಯತ್ರಿ ಈಕೆಯ ಮಗಳು ರೋಹಿಣಿ ಬಹಳ ಸುಖವಾಗಿ ಹಾಗೂ ಶ್ರೀಮಂತರ ಜೀವನ ನಡೆಸುತ್ತಿದ್ದರು. ಹೀಗೆ ಮಾಲ್ ನಲ್ಲಿ ಬ್ಯಾಂಕ್ ಸಿಬ್ಬಂದಿಯ ಮಗಳಾದ ನೇಹಾ ಅವರ ಅಚಾನಕ್ ಭೇಟಿ ಇವರಿಬ್ಬರನ್ನು ಬಹಳ ಹತ್ತಿರ ಮಾಡುತ್ತದೆ. ಇನ್ನೂ ಇವರಿಬ್ಬರೂ ಒಳ್ಳೆಯ ಸ್ನೇಹಿತರು ಆಗುತ್ತಾರೇ ಆದರೆ ನೇಹಾ ಹಾಗೂ ಅವಳ ಬಾಯ್ ಫ್ರೆಂಡ್ ನ ಉದ್ದೇಶ ಅಷ್ಟು ಒಳ್ಳೆಯದಾಗಿ ಇರಲಿಲ್ಲ. ದುಡ್ಡು ಸಂಪಾದನೆ ಮಾಡಲು ಯಾವ ಹಂತಕ್ಕೆ ಬೇಕಾದರೂ ಇಳಿಯುವ ಮನೋಭಾವನೆಯನ್ನು ಇವರಿಬ್ಬರೂ ಹೊಂದಿದ್ದರು. ಸಲಿಗೆಯ ಮೇಲೆ ರೋಹಿಣಿ ಮನೆಗೆ ಬಂದ ನೇಹಾ ಅವರ ಆಸ್ತಿಯನ್ನು ನೋಡಿ ಒಂದು ದಿನ ಆ ಮೂವರನ್ನು ಕೊಲೆ ಮಾಡುತ್ತಾಳೆ.   

ರೋಹಿಣಿ ಮನೆಯ ಬಳಿ ರಕ್ತದ ಕಾಲಿನ ಗುರುತುಗಳನ್ನು ಗಮನಿಸಿದ ನೆರೆಯ ಮನೆಯವರು ತಕ್ಷಣವೇ ಪೊಲೀಸರಿಗೆ ಕರೆ ಮಾಡುತ್ತಾರೆ. ಪೊಲೀಸರು ಅಲ್ಲಿನ ಒಂದೊಂದೇ ಆಧಾರವನ್ನು ಹುಡುಕುತ್ತಾ ಹೊರಟಾಗ ಸಾಕ್ಷಿ ಸಿಕ್ಕಿದ್ದರು ಕೊಡ ಯಾರದ್ದು ಎಂದು ಊಹಿಸಲು ಬಹಳ ಕಷ್ಟವಾಗಿತ್ತು. ಆಗ ಸಿಕ್ಕ ಲೀಡ್ ಎಂದ್ರೆ ರೋಹಿಣಿಯ ದೂರವಾಣಿಯ ಸಂಪರ್ಕ ಕೊಲೆಯಾಗುವ ಮುನ್ನ ಮಾತನಾಡಿದ ಕೊನೆ ಸಂಖ್ಯೆಯ ಬಗ್ಗೆ ಪರಿಶೀಲಿಸಿದಾಗ ಸಿಕ್ಕಿದ್ದೇ ನೇಹಾ ಹಾಗೂ ಆತನ ಬಾಯ್ ಫ್ರೆಂಡ್ . ಕೊಲೆ ಮಾಡುವ ಸಮಯದಲ್ಲಿ ಆತನ ಬಾಯ್ ಪ್ರೆಂಡ್ ಗೆ ಕೂಡ ಕಾಲಿಗೆ ಬುಲೆಟ್ ತಾಕಿದ್ದರಿಂದ   ಅವನ ಹೆಜ್ಜೆ ಗುರುತುಗಳನ್ನು  ಮುಕ್ಯ ಎವಿಡೆನ್ಸ್ ಮಾಡಿ ಅವರನ್ನು ಬಂಧಿಸಿ ಮರಣ ದಂಡನೆಯ ವಿಧಿಸಲಾಗಿತ್ತು. ಆದ್ರೆ ಹಣದ ಆಸೆಯಿಂದ ಈ ಮುಗ್ಧ ಮೂರು ಜೀವಗಳು ಬಲಿಯಾದವು ಎಂದು ಹೇಳಬಹುದು.

( video credit:  (KANNADA TECH FOR YOU )