Rakhi Sawant : ನನ್ನನ್ನು ಕ್ಷಮಿಸಿ ಎಂದ ನಟಿ ರಾಖಿ ಸಾವಂತ್! ಏಕೆ ಗೊತ್ತೆ? ಇಲ್ಲಿದೆ ಪ್ರಕರಣದ ಸಂಪೂರ್ಣ ವಿವರ

By Infoflick Correspondent

Updated:Friday, April 29, 2022, 20:36[IST]

Rakhi Sawant : ನನ್ನನ್ನು ಕ್ಷಮಿಸಿ ಎಂದ ನಟಿ ರಾಖಿ ಸಾವಂತ್! ಏಕೆ ಗೊತ್ತೆ? ಇಲ್ಲಿದೆ ಪ್ರಕರಣದ ಸಂಪೂರ್ಣ ವಿವರ

ವಿವಾದಾತ್ಮಕ ನಟಿ ಎಂದೇ ಹೆಸರುಮಾಡಿದ ಒಂದಲ್ಲೊಂದು ವಿಚಾರಗಳ ಮೂಲಕ ಸದ್ದು ಮಾಡುತ್ತಲೇ ಇರುವ ರಾಖಿ ಸಾವಂತ್ ಇದೀಗ ಮತ್ತೆ ವಿವಾದದ ಸುಳಿಗೆ ಸಿಲುಕಿದ್ದಾರೆ. ರಾಖಿ ಸಾವಂತ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಅಶ್ಲೀಲ ಬಟ್ಟೆ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಬುಡಕಟ್ಟು ಜನಾಂಗದವಳು ನಾನು ಎಂದು ಹೇಳಿ ವಿವಾದ ಮೈ ಮೇಲೆ ಎಳೆದು ಕೊಂಡಿದ್ದಾರೆ. ಬುಡಕಟ್ಟು ಉಡುಗೆಯನ್ನು ಅಶ್ಲೀಲವಾಗಿ ಧರಿಸಿದ ರಾಖಿ ಸಾವಂತ್ ವಿಡಿಯೋದಲ್ಲಿ ರಾಖಿ ಸಾವಂತ್, 'ನನ್ನ ಲುಕ್ ನೋಡಿದ್ದೀರಾ. ಇದು ಸಂಪೂರ್ಣ ಟ್ರೈಬಲ್ ಲುಕ್. ಆದಿವಾಸಿ ಲುಕ್' ಎಂದು ಹೇಳಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಶ್ಲೀಲ ಬಟ್ಟೆ ಧರಿಸಿ ಬುಡಕಟ್ಟು ಜನಾಂಗದ ಹೆಸರು ಹೇಳುವ ಮೂಲಕ ಬುಡಕಟ್ಟು ಜನಾಂಗಕ್ಕೆ ಅವಮಾನ ಮಾಡಿದ್ದಾರೆ ಎನ್ನುವ ಕಾರಣಕ್ಕೆ ರಾಖಿ ಸಾವಂತ್ ವಿರುದ್ಧ ದೂರು ದಾಖಲಿಸಲಾಗಿದೆ. ವಿಡಿಯೋ ಶೇರ್ ಮಾಡಿದ ಬಳಿಕ ವಿವಾದ ಜೋರಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದ್ದಾರೆ. 1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ರಾಖಿ ಸಾವಂತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.    

ಪ್ರಕರಣಕ್ಕೆ ಸಂಬಂಧಿಸಿ ಅಜಯ್ ಟಿರ್ಕಿ ಎಂಬುವವರು ಜಾರ್ಖಂಡ್‌ನಲ್ಲಿ ರಾಖಿ ಸಾವಂತ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನಲ್ಲಿ 'ರಾಕಿ ಬುಡಕಟ್ಟು ವೇಷಭೂಷಣಕ್ಕೆ ಅಪಮಾನ ಮಾಡಿದ್ದಾರೆ. ಅದನ್ನೂ ಅವರು ಅರೆನಗ್ನ ರೀತಿಯಲ್ಲಿ ಹಾಕಿಕೊಂಡಿದ್ದಾರೆ. ಇದರಿಂದ ನಮ್ಮ ಸಮುದಾಯದ ಮಹಿಳೆಯರಿಗೆ ಅವಮಾನ ಆಗಿದೆ. ನಾವು ಗೌರವಿಸುವ ಸಂಪ್ರದಾಯಕ್ಕೆ ಧಕ್ಕೆ ತರುವಂತಹ ಕೆಲಸವನ್ನು ರಾಕಿ ಮಾಡಿದ್ದಾರೆ. ಹಾಗಾಗಿ ಸೂಕ್ತ ಕ್ರಮ ತಗೆದುಕೊಳ್ಳಬೇಕೆಂದು' ದೂರಿನಲ್ಲಿ ಉಲ್ಲೇಖಿಸಲಾಗಿದೆ. 

ಬುಡಕಟ್ಟು ಸಮುದಾಯದವರ ಭಾವನೆಗಳಿಗೆ ದಕ್ಕೆಯಾಗಿರುವುದಕ್ಕೆ ಕ್ಷಮೆ ಕೋರುತ್ತೇನೆ. ನನ್ನನ್ನು ಸಹೋದರಿ ಎಂದು ಭಾವಿಸಿ ಕ್ಷಮಿಸಿ' ಎಂದು ಬುಡಕಟ್ಟು ಸಮುದಾಯದ ಸದಸ್ಯರಿಗೆ ರಾಖಿ ಸಾವಂತ್ ವಿನಂತಿಸಿದ್ದಾರೆ.