Anupama Gowda : ಅನುಪಮಾಗೆ ರಾಜ ರಾಣಿಯಿಂದ ಹೊರ ಕಳಿಸಿ ಕಲರ್ಸ್ ಕನ್ನಡ ಮೋಸ ಮಾಡಿತಾ..? ಇಲ್ಲಿದೆ ಅಸಲಿ ಸತ್ಯ

By Infoflick Correspondent

Updated:Monday, June 27, 2022, 13:38[IST]

Anupama Gowda :  ಅನುಪಮಾಗೆ ರಾಜ ರಾಣಿಯಿಂದ ಹೊರ ಕಳಿಸಿ ಕಲರ್ಸ್ ಕನ್ನಡ ಮೋಸ ಮಾಡಿತಾ..? ಇಲ್ಲಿದೆ ಅಸಲಿ ಸತ್ಯ

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ರಿಯಾಲಿಟಿ ಶೋಗಳು ನಡೆಯುತ್ತಿವೆ. ಒಂದರಮೇಲೊಂದರಂತೆ ಹೆಚ್ಚು ಪೈಪೋಟಿ ನೀಡುತ್ತಿರುವುದು ಜೊತೆಗೆ ಟಿಆರ್ಪಿ ವಿಚಾರದಲ್ಲಿ ಕೂಡ ಆಯಾ ಚಾನಲ್ಗಳು ಬೇರೆಬೇರೆ ಕಾರ್ಯಕ್ರಮಗಳನ್ನು ತರುತ್ತಲೇ ಇದ್ದಾರೆ..ಹೌದು ಸೀಸನ್ ಒಂದರಲ್ಲಿ ರಾಜ ರಾಣಿ ಶೋ ಕಲರ್ಸ್ ಕನ್ನಡದಲ್ಲಿ ಭರ್ಜರಿಯಾಗಿ ಮಿಂಚಿತ್ತು. ಅದೇ ಕಾರ್ಯಕ್ರಮದಲ್ಲಿ ನಟ ಸೃಜನ್ ಲೋಕೇಶ್ ಹಾಗೂ ನಟಿ ತಾರಾ ಅವರು ಜಡ್ಜ್ ಆಗಿ ಮೆರೆದಿದ್ದರು. ಇನ್ನೊಂದು ಕಡೆ ನಟಿ ಅನುಪಮ ಅವರು ನಿರೂಪಕಿಯಾಗಿ ಕಾರ್ಯಕ್ರಮ ನಡೆಸಿದ್ದು ದೊಡ್ಡ ಲೆವೆಲ್ಲಿಗೆ ತೆಗೆದುಕೊಂಡು ಹೋಗಿದ್ದು ಮೆಚ್ಚುವಂತಹ ಕೆಲಸ ಎನ್ನಬಹುದು. ಇದೀಗ ರಾಜ ರಾಣಿ ಸೀಸನ್-2 ಆರಂಭವಾಗಿದೆ. ಕಲರ್ಸ್ ಕನ್ನಡದಲ್ಲಿ ಮತ್ತೆ ಅವರೇ ಜಡ್ಜಸ್ ಆಗಿ ಮುಂದುವರೆದಿದ್ದಾರೆ.

ಆದರೆ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ಅವರನ್ನ ಕಾರ್ಯಕ್ರಮದಿಂದ ಕಿತ್ತೆಸೆಯಲಾಗಿದ್ದು, ಅಸಲಿಗೆ ಇದಕ್ಕೆ ಮೂಲ ಕಾರಣ ಏನೆಂದು ತಿಳಿದು. ಬಂದಿಲ್ಲ. ಇಲ್ಲಿಯವರೆಗೆ ಎಲ್ಲಾ ಚೆನ್ನಾಗಿತ್ತು ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ನಿರೂಪಕಿ ಅನುಪಮಾ ಇಲ್ಲವಲ್ಲ ಎಂದು ನಟಿ ಅನುಪಮಾ ಅವರ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. 

ಇದರ ಬಗ್ಗೆ ಈ ಮುಂಚೆಯೇ ಅವರಿಗೆ ಹೇಳಬೇಕಿತ್ತು, ಅವರು ಬೇರೆ ದಾರಿ ಏನಾದರೂ ನೋಡಿಕೊಳ್ಳುತ್ತಿದ್ದರು. ಹೀಗೆ ಇದ್ದಕ್ಕಿದ್ದಂತೆ ತೆಗೆದು ಹಾಕಿರುವುದು ಕಲರ್ಸ್ ಕನ್ನಡದ ಮೋಸ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಹೌದು ಅನುಪಮ ಅವರು ಕೂಡ ಲೈವ್ ನಲ್ಲಿ ಬಂದು ಯಾವ ಕಾರಣಕ್ಕೆ ನನ್ನನ್ನ ತೆಗೆದಿದ್ದಾರೆ ಎಂದು ನನಗೂ ಗೊತ್ತಿಲ್ಲ ಎಂದು ತುಂಬಾನೇ ನೋವಿನಲ್ಲಿ ಮಾತನಾಡಿದ್ದರು.

ಹೌದು ಇದಕ್ಕೆ ಮೂಲಕಾರಣ ಏನು ಎಂಬುದಾಗಿ ಇದೀಗ ಮತ್ತೆ ಅದೇ ವಿಷಯ ಚರ್ಚೆಗೆ ಬಂದಂತೆ ಕಾಣುತ್ತಿದೆ. ನಟಿ ಅನುಪಮಾ ಅವರಿಗೆ ರಾಜಾ ರಾಣಿಗೆ ನಿರೂಪಕಿಯಾಗಿ ಕೆಲಸ ಮಾಡಲು ಹೆಚ್ಚು ಸಂಭಾವನೆ ಇತ್ತು. ಅದೊಂದು ಕಾರಣಕ್ಕೆ ಅವರನ್ನು ತೆಗೆದಿರಬಹುದು. ಬೇರೆಯವರಿಗೆ ಅವಕಾಶ ಕೊಡೋಣ ಎಂದು ಈ ರೀತಿ ಮಾಡಿ ಜಾನವಿ ಅವರಿಗೆ ರಾಜ ರಾಣಿ ಎರಡರಲ್ಲಿ ನಿರೂಪಣೆ ಜವಾಬ್ದಾರಿ ವಹಿಸಿರಬಹುದು. ಅಥವಾ ಇನ್ನೊಂದು ಕಡೆ ಬೇಕು ಬೇಕು ಎನ್ನತಲೆ ಕಲರ್ಸ್ ಕನ್ನಡ ಚಾನೆಲ್ ನವರು ಈ ರೀತಿ ಅನುಪಮ ಅವರನ್ನು ಶೋದಿಂದ ಕಿತ್ತೆಸೆಯುವ ಮೂಲಕ ಮೋಸ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ನಿರೂಪಕಿ ಅನುಪಮಾ ಗೌಡ ಅವರು ಸಾಕಷ್ಟು ಸಿನಿಮಾರಂಗದಲ್ಲಿ ಕಷ್ಟಪಟ್ಟಿದ್ದು ಇದೀಗ ಮತ್ತೆ ಅವರಿಗೆ ಈ ರೀತಿ ಆಗಿದ್ದು ವಿಷಾದನೀಯ...ಬೇರೆ ಕಾರ್ಯಕ್ರಮದಲ್ಲಿಯಾದ್ರು ನಟಿ ಅನುಪಮಾ ಅವರು ನಿರೂಪಕಿಯಾಗಿ ಗುರುತಿಸಿಕೊಳ್ಳಲಿ ಎಂದು ನಾವು ಆಶಿಸೋಣ..ಧನ್ಯವಾದಗಳು...