ಮೊದಲ ಬಾರಿಗೆ ಸುದೀಪ್ ಇಲ್ಲದೇನೆ ಎಲಿಮಿನೇಷನ್ ಮುಕ್ತಾಯ..! ಈ ವಾರ ಹೊರ ಬಂದ ಸ್ಪರ್ಧಿ ಇವರೇ ವಿಡಿಯೋ ನೋಡಿ

Updated: Sunday, April 18, 2021, 15:06 [IST]

ಸ್ನೇಹಿತರೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟರ ಏಳನೆ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಬಿಗ್ಬಾಸ್ ಮನೆಯಿಂದ  ಸಿಂಗರ್ ಎನಿಸಿಕೊಂಡಿದ್ದ ವಿಶ್ವನಾಥ್ ಅವರು ಯಾರು ಊಹಿಸದ ರೀತಿ ಬಿಗ್ ಮನೆಯಿಂದ ಈ ವಾರ ಔಟ್ ಆಗಿದ್ದಾರೆ. ಹೌದು ಇತ್ತೀಚಿಗೆ ಎಲ್ಲರ ಗಮನಕ್ಕೂ ಬಂದ ಹಾಗೆ ಕಿಚ್ಚ ಸುದೀಪ್ ಅವರು ಈ ವಾರ ಕಾರ್ಯಕ್ರಮ ನಡೆಸಿಕೊಡುತ್ತಿಲ್ಲ ಎನ್ನಲಾಗಿ ಸುದ್ದಿ ಹಬ್ಬಿತ್ತು.      
 
ಇನ್ನೂ ಕೆಲವರು ಸುದೀಪ್ ಅವರಿಗೆ ಕೊರೋನ ಬಂದಿದೆ ಎನ್ನಲಾಗಿ ಕೆಲ ಮಾತುಗಳು ಕೇಳಿಬಂದವು. ಆದರೆ ಇದಕ್ಕೆಲ್ಲ ಸುದೀಪ್ ಅವರೇ ವಿಡಿಯೋ ಮೂಲಕ ತಮಗೆ ಕಾಲು ಪೆಟ್ಟಾದ ಕಾರಣ ಈ ವಾರ ಕಾರ್ಯಕ್ರಮವನ್ನು ನಡೆಸಿ ಕೊಡುತ್ತಿಲ್ಲ ಎಂದು ಹೇಳಿದ್ದರು. ಹೌದು ಸ್ನೇಹಿತರೆ ಸುದೀಪ್ ಅವರು ಇಲ್ಲದೇನೆ ಈ ವಾರ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದೆ. ಹಾಗೆ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಶಮಂತ್, ದಿವ್ಯಾ ಉರುಡುಗ, ದಿವ್ಯಾ ಸುರೇಶ್ , ಅರವಿಂದ್, ರಾಜೀವ್, ಮಂಜು, ಚಂದ್ರಚೂಡ್ ಹಾಗೆ ವಿಶ್ವನಾಥ್ ಸಹ  ನಾಮಿನೇಟ್ ಆಗಿದ್ದರು.
 
ಇದೆ ಹಿನ್ನೆಲೆಯಲ್ಲಿ ಸ್ಪರ್ಧಿಗಳಿಗೆ ಚಟುವಟಿಕೆ ಒಂದನ್ನು ನೀಡಿ, ಈ ಮೂಲಕವೇ ಬಿಗ್ ಬಾಸ್ ಮನೆಯಿಂದ ಈಗ ವಿಶ್ವನಾಥ್ ಹೊರ ಬಿದ್ದಿದ್ದು, ಬಿಗ್ ಬಾಸ್ ಮನೆಯ ಸಿಹಿ ಕಹಿ ವಿಚಾರಗಳನ್ನು ವೇದಿಕೆ ಮೇಲೆ ಹೇಳಿಕೊಳ್ಳದ ಹಾಗೆ ಹೊರಬಂದರು. ಗೆಳೆಯರೇ ಈ ಸ್ಪರ್ಧಿ ಮನೆಯಿಂದ ಈ ವಾರ ಹೊರ ಬಂದಿದ್ದು ಸರಿಯಾದ ನಿರ್ಧಾರವಾ ಅಥವ ನಿರ್ಧಾರ ತಪ್ಪಿದೆಯ ಕಾಮೆಂಟ್ ಮಾಡಿ, ಹಾಗೆ ಇವರನ್ನ ಬಿಟ್ಟು ಯಾರು ಮನೆಯಿಂದ ಈ ವಾರ ಹೊಗಬೇಕಿತ್ತು ತಿಳಿಸಿ ಧನ್ಯವಾದಗಳು....