Meghana Raj : ಧ್ರುವ ಸರ್ಜಾ ಅತ್ತಿಗೆ ಮೇಘನಾ ಬಗ್ಗೆ ಹೇಳಿದ ಮಾತು !! ನಿಜವಾಗಲು ಇವರ ಬಾಂಧವ್ಯಕ್ಕೆ ಯಾರ ಕಣ್ಣೂ ಬೀಳದಿರಲಿ!
Updated:Thursday, May 26, 2022, 23:18[IST]

ಡ್ಯಾನ್ಸಿಂಗ್ ಚಾಂಪಿಯನ್ ಶೋ ಗ್ರ್ಯಾಂಡ್ ಫಿನಾಲೆಗೆ ಅದ್ಧೂರಿ ವೇದಿಕೆ ಸಜ್ಜಾಗಿದೆ. 14 ಜೋಡಿಗಳಿಂದ ಶುರುವಾದ ಶೋನಲ್ಲಿ ಕೇವಲ 5 ಜೋಡಿಗಳು ಫಿನಾಲೆಗೆ ಲಗ್ಗೆ ಇಟ್ಟಿದ್ದಾರೆ. ಡ್ಯಾನ್ಸಿಂಗ್ ಚಾಂಪಿಯನ್ ಶೋವನ್ನ ಅಪ್ಪುಗೆ ಡೆಡಿಕೇಟ್ ಮಾಡಲಾಗಿದೆ. ಮತ್ತೊಂದು ವಿಶೇಷ ಅಂದ್ರೇ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗು ಧ್ರುವ ಸರ್ಜಾ ಅತಿಥಿಯಾಗಿ ಬಂದಿದ್ದಾರೆ. ಅತ್ತಿಗೆ ಜೊತೆ ಮೈದುನ ಮೊದಲ ಬಾರಿಗೆ ಒಟ್ಟಿಗೆ ಶೋನಲ್ಲಿ ಭಾಗಿಯಾಗಿದ್ದಾರೆ.
ಪೊಗರು ಚಿತ್ರದ ಕರಾಬು ಹಾಡಿಗೆ ಹೆಜ್ಜೆ ಹಾಕುವ ಮೂಲಕ ಧ್ರುವ ಸರ್ಜಾ ವೇದಿಕೆ ಮೇಲೆ ಎಂಟ್ರಿ ಕೊಟ್ಟಿದ್ದಾರೆ. ಧ್ರುವ ಎಂಟ್ರಿ ಕೊಡುತ್ತಿದ್ದಂತೆ ಮೇಘನಾ ರಾಜ್ ಸಂತೋಷದಿಂದ ಚಪ್ಪಾಳೆ ಹೊಡೆದು ಶಿಳ್ಳೆಹಾಕಿದ್ದನ್ನು ಪ್ರೋಮೋದಲ್ಲಿ ನೋಡಬಹುದು. ಮೇಘನಾ ಮತ್ತು ಧ್ರುವ ಸರ್ಜಾ ಅವರದ್ದು ಅವಿನಾಭಾವ ಸಂಬಂಧ.ಇಬ್ಬರೂ ಒಳ್ಳೆ ಗೆಳೆಯರು ಹೌದು, ಅತ್ತಿಗೆ ಮೈದುನ ಕೂಡ ಹೌದು ಅಷ್ಟೇ ಏಕೆ ತಾಯಿ ಮಗ ತರಹ ಕೂಡ ಹೌದು ಇವರಿಬ್ಬರ ಬಾಂಧವ್ಯ ಅನೇಕರಿಗೆ ಸ್ಪೂರ್ತಿ.
ಡ್ಯಾನ್ಸಿಂಗ್ ಚಾಂಪಿಯನ್ ಶೋ ಗ್ರ್ಯಾಂಡ್ ಫಿನಾಲೆಗೆ ಬಂದ ಧ್ರುವ ತನ್ನ ನೆಚ್ಚಿನ ಅಣ್ಣನಾದ ಚಿರು ಮಡದಿ ಮೇಘನಾ ರಾಜ್ ಬಗ್ಗೆ ಮಾತನಾಡುತ್ತಾ ಇವರು ನನಗೆ ಅತ್ತಿಗೆ ಮಾತ್ರವಲ್ಲ ಎರಡನೇ ತಾಯಿ. ಅಣ್ಣಕೂಡ ನನಗೆ ಇದೇ ಮಾತು ಹೇಳಿದ್ದರು. ಅತ್ತಿಗೆ ನೋಡಲಿಕ್ಕೆ ಬಹಳ ಗಟ್ಟಿ ಆದರೆ ಒಳಗಡೆ ಭಾವದಲ್ಲಿ ಅವರು ಭಾವ ಜೀವಿ ಎಂದು ಭಾವುಕರಾಗಿ ಹೇಳಿದರು ಧ್ರುವಸರ್ಜಾ
ಮೇಘನಾ ಕೂಡ ನನಗೆ ನಿಜವಾದ ಮಗು ಧ್ರುವ ಆತ ಬಹಳ ಪ್ರೀತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾನೆ ಆದರೆ ತೋರಿಸಿಕೊಳ್ಳುವುದಿಲ್ಲ ಎಂದು ಭಾವುಕವಾಗಿ ಕಣ್ಣೀರಿಡುತ್ತಾ ಪ್ರೀತಿಯಿಂದ ಹೇಳಿದರು.
ಮನೆಯ ಮದುವೆಯಲ್ಲೂ ಚಿರುಗೆ ತುತ್ತುಮಾಡಿ ತಿನಿಸುವಾಗ ಮೇಘನಾ ಧ್ರುವ ಅವರಿಗೂ ತಿನ್ನಿಸಿದ್ದರು. ಚಿರು ಇಲ್ಲದಾಗ ಸೀಮಂತ ಕೂಡ ಧ್ರುವ ಮಾಡಿದರು ಅತ್ತಿಗೆಗೆ ಬೆಂಬಲವಾಗಿ ಧೈರ್ಯಕ್ಕೆ ನಿತ್ತರು. ಅಭಿಮಾನಿಗಳು ಈ ಸಂಬಂಧಕ್ಕೆ ಯಾರ ಕಣ್ಣು ಬೀಳದಿರಲಿ ಎನ್ನುತ್ತಾರೆ.
VIDEO CREDIT : COLORS KANNADA