Rashmika Mandanna : ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಡ್ರೆಸ್ ಧರಿಸಿ ಪೇಚಿಗೆ ಸಿಲುಕಿದ ರಶ್ಮಿಕಾ ಮಂದಣ್ಣ
Updated:Thursday, May 26, 2022, 18:42[IST]

ನ್ಯಾಷನಲ್ ಕ್ರಶ್, ಮಲೆನಾಡ ಕುವರು ರಶ್ಮಿಕಾ ಮಂದಣ್ಣ ಪಾರ್ಟಿ ಒಂದಕ್ಕೆ ತೆರಳಿ ಪೇಚಿಗೆ ಸಿಲುಕಿದ್ದಾರೆ. ಇದರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೌದು.. ನ್ಯಾಷನಸೃಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ ಹಾಲಿವುಡಿ, ಟಾಲಿವುಡ್, ಕಾಲಿವುಡ್ ನಲ್ಲಿ ಏನೇ ಸಮಾರಂಭವಿದ್ರೂ ಭಾಗಿಯಾಗುತ್ತಾರೆ. ಇದೀಗ ಕರಣ್ ಜೋಹರ್ ಅವರ ಬರ್ತಡೇ ಪಾರ್ಟಿಗೆ ಹೋದ ರಶ್ಮಿಕಾಗೆ ಮುಜುಗರ ಉಂಟಾಗಿದೆ. ಯಾಕೆ ಅಂತೂರಾ ಈ ಸ್ಟೋರಿಯನ್ನ ಸಂಪೂರ್ಣವಾಗಿ ಓದಿ.
ಕರಣ್ ಜೋಹರ್ ಹುಟ್ಟುಹಬ್ಬ ಮೊನ್ನೆಯಷ್ಟೇ ಗ್ರ್ಯಾಂಡ್ ಆಗಿ ಸೆಲಬ್ರೇಟ್ ಮಾಡಲಾಯ್ತು. ಪಾರ್ಟಿಯಲ್ಲಿ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ, ಗೌರಿಖಾನ್, ರವೀನಾ ಟಂಡನ್, ಶಾನ್ಯಾ ಕಪೂರ್ ಹಾಗೂ ಬಿಗ್ ಬಿ ಮಗಳು ಶ್ವೇತಾ ಬಚ್ಚನ್ ಸೈಫ್ ಅಲಿಖಾನ್, ಕರೀನಾ ಕಪೂರ್, ರಾಣಿ ಮುಖರ್ಜಿ, ಜೂಹಿ ಚಾವ್ಲಾ, ತಮನ್ನಾ, ಪೂಜಾ ಹೆಗ್ಡೆ, ಮಲೈಕಾ ಅರೋರಾ, ಅಮೀರ್ ಖಾನ್, ಕಿರಣ್ ರಾವ್, ಕತ್ರಿನಾ- ವಿಕ್ಕಿ, ಶಾಹಿದ್- ಮೀರಾ ಸೇರಿದಂತೆ ಎಲ್ಸರೂ ಭಾಗಿಯಾಗಿದ್ದರು.
ಇವರ ಜೊತೆಗೆ ರಶ್ಮಿಕಾ ಮಂದಣ್ಣ ಕೂಡ ಕರಮ್ ಜೋಹರ್ ಗೆ ವಿವ್ ಮಾಡಲು ಹೋಗಿದ್ದರು. ಪಾರ್ಟಿಗೆ ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಔಟ್ ಫಿಟ್ ನಲ್ಲಿ ಮಿಂಚಿದ್ದರು. ಆದರೆ ಡ್ರೆಸ್ ಏನೋ ಸಕತ್ ಆಗಿತ್ತು. ರವ್ಮಿಕಾ ಕೊಂಚ ಮುಜುಗರಗೊಂಡರು. ಸೈಡ್ ಕಟ್ ಡ್ರೆಸ್ ಧರಿಸಿದ್ದ ರಶ್ಮಿಕಾ ಮೀಡಿಯಾದವರು ಫೋಟೋ ತೆಗೆಯುತ್ತಿದ್ದರೆ ಮುಜುಗರಕ್ಕೊಳಗಾಗಿ ಪೇಚಿಗೆ ಸಿಲುಕಿದ್ದಂತೂ ಸುಳ್ಳಲ್ಲ. ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ.