ಎಕ್ಕ ಸಕ್ಕ ಹಾಡಿಗೆ ಗಿಚ್ ಡ್ಯಾನ್ಸ್ ಮಾಡಿದ ಅರವಿಂದ್ ದಿವ್ಯಾ ಜೋಡಿ..! ಇಲ್ಲಿದೆ ವೈರಲ್ ವಿಡಿಯೋ
Updated:Saturday, May 28, 2022, 10:35[IST]

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಮೂಲಕ ಸಾಕಷ್ಟು ಕಲಾವಿದರು ಹೊರಗಡೆ ಬಂದಿದ್ದಾರೆ. ಕನ್ನಡ ಜನತೆಯ ಪ್ರೀತಿ ಗಳಿಸಿದ್ದಾರೆ. ಕನ್ನಡಿಗರ ಮನೆಮಾತಾಗಿದ್ದಾರೆ ಎಂದರೆ ತಪ್ಪಾಗಲಾರದು. ಅವರು ಬಿಗ್ ಬಾಸ್ ಮನೆಗೆ ಬರುವ ಮುನ್ನ ಬೇರೆ ಬೇರೆ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದರೂ ಸಹ ಅವರಿಗೆ ಅಷ್ಟಾಗಿ ಹೆಸರು ಸಿಕ್ಕಿರುವುದಿಲ್ಲ ಎಂದು ಹೇಳಬಹುದು. ಅಷ್ಟರಮಟ್ಟಿಗೆ ಬಿಗ್ ಬಾಸ್ ಶೋ ಎಲ್ಲರಿಗೂ ಹೆಸರು ತಂದುಕೊಟ್ಟಿದೆ. ಮತ್ತು ಈ ಸಿನಿರಂಗದಲ್ಲಿ ಮುಂದುವರೆಯಲಿಕೆ ದೊಡ್ಡ ಮಹತ್ವದ ವೇದಿಕೆಯನ್ನ ಮಾಡಿಕೊಡುತ್ತದೆ ಎಂದು ಹೇಳಿದರೆ ನಿಜಕ್ಕೂ ತಪ್ಪಾಗಲಾರದು. ಹೌದು ಕನ್ನಡದ ಬಿಗ್ ಬಾಸ್ ಸೀಸನ್ 8 ಎಲ್ಲರಿಗೂ ಚಿರಪರಿಚಿತ ಇದೆ. ಬಿಗ್ಬಾಸ್ ಸೀಸನ್ ವಿನ್ನರ್ ಆಗಿ ಮಂಜು ಪಾವಗಡ ಹೊರಹೊಮ್ಮಿದ್ದರು.
ಅದಕ್ಕೆ ತಕ್ಕ ಫೈಟ್ ನೀಡಿದ್ದು ಕೊಂಚದರಲ್ಲೇ ಫಿನಾಲೆ ವಿನ್ನರ್ ಆಗುವ ಅವಕಾಶ ತಪ್ಪಿಸಿಕೊಂಡಿದ್ದು ಅರವಿಂದ್ ಕೆಪಿ ಎನ್ನಬಹುದು. ಹೌದು ರನ್ನರ್ ಅಪ್ ಗೆ ಅರವಿಂದ್ ಅವರು ತೃಪ್ತಿಪಟ್ಟುಕೊಂಡರು. ಅರವಿಂದ್ ಕೆಪಿ ಮತ್ತು ದಿವ್ಯ ಉರುಡುಗ ಬಿಗ್ ಬಾಸ್ ಮನೆಯಲ್ಲಿ ಇದ್ದ ದಿನವೂ ಹೆಚ್ಚು ಟಾಸ್ಕ್ ಮತ್ತು ಬೇರೆದಕ್ಕೆ ಹೆಸರು ಮಾಡಿರಲಿಲ್ಲ, ಬದಲಿಗೆ ಇವರಿಬ್ಬರ ಸ್ನೇಹ ಪ್ರೀತಿಗೆ ಹೆಸರಾದವರು. ಇವರಿಬ್ಬರೂ ಪ್ರೀತಿ ಮಾಡುತ್ತಿದ್ದಾರೆ ಎನ್ನಲಾಗಿ ಬಿಗ್ ಬಾಸ್ ಮನೆಯಲ್ಲಿ ಮಾತನಾಡಿ ಚರ್ಚೆ ಮಾಡಿದ್ದು ಉಂಟು. ಹೌದು ಅರವಿಂದ್ ಕೆಪಿ ದಿವ್ಯ ಉರುಡುಗ ಬಿಗ್ಬಾಸ್ ಮನೆಯಿಂದ ಹೊರಬಂದ ಬಳಿಕ ಮದುವೆ ಆಗುತ್ತಾರೆ ಎಂಬ ಸುದ್ದಿ ಕೇಳಿಬಂದಿದ್ದು ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಮತ್ತೆ ಈ ಜೋಡಿ ಭರ್ಜರಿ ಆಕ್ಟಿವ್ ಆಗಿದೆ.
ಹೊಸ ವಿಡಿಯೋ ಮೂಲಕ ಅಭಿಮಾನಿಗಳ ಎದುರು ಕಾಣಿಸಿಕೊಂಡಿದ್ದಾರೆ ಅರವಿಂದ್ ಉರುಡುಗ. ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ಎಕ್ಕಸಕ್ಕ ಹಾಡಿಗೆ ಈ ಜೋಡಿ ಸಖತ್ ಸ್ಟೆಪ್ ಹಾಕಿದೆ ಎನ್ನಲಾಗಿದೆ. ಇಲ್ಲಿದೆ ವಿಡಿಯೋ. ಅದೆಷ್ಟು ಸಕತ್ ಆಗಿ ದಿವ್ಯಾ ಉರುಡುಗ ಅರವಿಂದ್ ಜೊತೆ ಸೊಂಟ ಬಳುಕಿಸಿದ್ದಾರೆ ಒಮ್ಮೆ ನೋಡಿ. ಹಾಗೆ ದಿವ್ಯಾ ಶೇರ್ ಮಾಡಿಕೊಂಡಿರುವ ಈ ವಿಡೀಯೋ ಇಷ್ಟ ಆದ್ರೆ ಶೇರ್ ಮಾಡಿ ಮೆಚ್ಚುಗೆ ತಿಳಿಸಿ ಧನ್ಯವಾದಗಳು..