Sudeep : ಬಿಗ್ ಬಾಸ್ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸೀಸನ್ 9 ಕ್ಕೆ  ದಿನಗಣನೆ! ಎಂದಿನಿಂದ ಪ್ರಾರಂಭ ನೋಡಿ ?

By Infoflick Correspondent

Updated:Monday, July 4, 2022, 12:03[IST]

Sudeep : ಬಿಗ್ ಬಾಸ್ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸೀಸನ್ 9 ಕ್ಕೆ  ದಿನಗಣನೆ! ಎಂದಿನಿಂದ ಪ್ರಾರಂಭ ನೋಡಿ ?

ಕಲರ್ಸ್‌ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್‌ ಬಾಸ್‌' ಯಾವಾಗ ಈ ಬಾರಿ ಶೋ ಹೇಗಿರಲಿದೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಬಿಗ್ ಬಾಸ್ ಸೀಸನ್ 9 ಬಗ್ಗೆ ಹೊಸ ಅಪ್ ಡೇಟ್ ಹೊರಬಿದ್ದಿದೆ.

ಬಹುನಿರೀಕ್ಷೆಯ ಬಿಗ್ ಬಾಸ್ ಆಗಸ್ಟ್‌ ಮೊದಲ ವಾರದಿಂದ ಆರಂಭವಾಗಲಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಈ ಬಾರಿಯ ಬಿಗ್ ಬಾಸ್ ಮತ್ತಷ್ಟು ವಿಶೇಷವಾಗಿ ಮೂಡಿಬರಲಿದ್ದು, ಕಳೆದ ಬಾರಿಯಂತೆ ಬಾರಿಯೂ ಸಹ ವೂಟ್ ಸೆಲೆಕ್ಟ್ ನಲ್ಲಿಯೂ ಬಿಗ್ ಬಾಸ್ ಪ್ರಸಾರವಾಗಲಿದೆ. ಓಟಿಟಿಯಲ್ಲಿ ಮತ್ತು ಕಲರ್ಸ್‌ ವಾಹಿನಿಯಲ್ಲಿ ಎರಡು ರೀತಿಯ ಬಿಗ್‌ ಬಾಸ್‌ ಸೀಸನ್‌ಗಳನ್ನು ಪ್ರಸಾರ ಮಾಡಲು ಕಲರ್ಸ್‌ ಸಂಸ್ಥೆ ನಿರ್ಧರಿಸಿದೆ. 

ಸುದೀಪ್‌ ವಾರದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪೂರ್ಣ ಪ್ರಮಾಣದ ಬಿಗ್‌ ಬಾಸ್‌ನಲ್ಲಿ ಭಾಗವಹಿಸುತ್ತಾರೆ. ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಬಿಗ್‌ ಬಾಸ್‌ 90 ದಿನಗಳ ಕಾಲ ಪ್ರಸಾರವಾಗಲಿದೆ.

ಈ ಬಾರಿ ವಿಶೇಷವೆಂದರೆ ಬಿಗ್‌ ಬಾಸ್‌ ಟಿವಿಯಲ್ಲಿ ಪ್ರಸಾರ ಆರಂಭವಾಗುವ ಮೊದಲೇ ವೂಟ್‌ ಸೆಲೆಕ್ಟ್ ನಲ್ಲಿ ಬಿಗ್‌ ಬಾಸ್‌ ಮಿನಿ ಸೀಸನ್‌ ಪ್ರಸಾರವಾಗಲಿದೆ. ಈ ಮಿನಿ ಸೀಸನ್‌ 42 ದಿನಗಳ ಕಾಲ ಪ್ರಸಾರವಾಗಲಿದ್ದು, ಇಂಟರ್‌ನೆಟ್‌ ಸ್ಟಾರ್‌ಗಳು, ಇನ್‌ಫ್ಲುಯೆನ್ಸರ್‌ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮಿನಿ ಸೀಸನ್‌ನಲ್ಲಿ ಆಯ್ಕೆಯಾದ ಒಂದಿಬ್ಬರು ಸ್ಪರ್ಧಿಯಲ್ಲಿ ವಾಹಿನಿಯಲ್ಲಿ ಪ್ರಸಾರವಾಗುವ ಪೂರ್ಣ ಪ್ರಮಾಣದ ಬಿಗ್‌ ಬಾಸ್‌ನಲ್ಲಿ ಭಾಗವಹಿಸುತ್ತಾರೆ.

ಇದೇ ರೀತಿ ಕಳೆದ ಬಾರಿ ಹಿಂದಿಯಲ್ಲಿ ಮೊದಲ ಪ್ರಯತ್ನ ಮಾಡಲಾಗಿತ್ತು. ಹಿಂದಿಯಲ್ಲಿ ಕರಣ್ ಜೋಹರ್ ನಡೆಸಿಕೊಟ್ಟಿದ್ದರು. ಈ ಬಾರಿ ಕನ್ನಡದಲ್ಲೂ ಅದೇ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಕನ್ನಡದಲ್ಲಿ ಪ್ರಸಾರವಾಗುವ ಒಟಿಟಿ ಬಿಗ್ ಬಾಸ್ ಅನ್ನು ಸಹ ಕಿಚ್ಚ ಸುದೀಪ್ ಅವರೆ ನಡೆಸಿಕೊಡಲಿದ್ದಾರೆ. ಬಳಿಕ ಟಿವಿಯಲ್ಲಿ ಆರಂಭವಾಗುವ ಬಿಗ್ ಬಾಸ್ ಜವಾಬ್ದಾರಿ ಸಹ ಸುದೀಪ್ ಮೇಲಿದೆ.