ಆ ಕಾಲದಲ್ಲೆ ಈಶ್ವರಿ ಪ್ರೊಡಕ್ಷನ್ ಕಡೆಯಿಂದ ಎಷ್ಟು ಸಾವಿರ ಕೊಟ್ಟಿದ್ದಗೊತ್ತಾ ರವಿಚಂದ್ರನ್ : ವಿಚಾರ ಬಿಚ್ಚಿಟ್ಟ ಜಗ್ಗೇಶ್..!

By Infoflick Correspondent

Updated:Tuesday, August 9, 2022, 18:48[IST]

ಆ ಕಾಲದಲ್ಲೆ ಈಶ್ವರಿ ಪ್ರೊಡಕ್ಷನ್ ಕಡೆಯಿಂದ ಎಷ್ಟು  ಸಾವಿರ ಕೊಟ್ಟಿದ್ದಗೊತ್ತಾ  ರವಿಚಂದ್ರನ್  : ವಿಚಾರ ಬಿಚ್ಚಿಟ್ಟ ಜಗ್ಗೇಶ್..!

ರವಿ ಬೋಪಣ್ಣ ಮುಂಬರುವ ಕನ್ನಡ ಚಲನಚಿತ್ರವಾಗಿದ್ದು 12 ಆಗಸ್ಟ್ 2022 ರಂದು ಬಿಡುಗಡೆಯಾಗಲಿದೆ. ಈ ಚಲನಚಿತ್ರವನ್ನು ವಿ. ರವಿಚಂದ್ರನ್ ನಿರ್ದೇಶಿಸಿದ್ದಾರೆ, ಮತ್ತು ವಿ. ರವಿಚಂದ್ರನ್, ಕಿಚ್ಚ ಸುದೀಪ, ರಮ್ಯಾ ಕೃಷ್ಣನ್ ಮತ್ತು ಕಾವ್ಯಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಹೌದು ರವಿ ಬೋಪಣ್ಣ ಸಿನಿಮಾಗೆ ಆಯ್ಕೆಯಾದ ಇತರ ಜನಪ್ರಿಯ ನಟರೆಂದರೆ ಜೈ ಜಗದೀಶ್, ರವಿಶಂಕರ್ ಗೌಡ ಮತ್ತು ನಟ ಮೋಹನ್ ಶಂಕರ್ ಎಂದು ಹೇಳಲಾಗುತ್ತಿದೆ..

ಹೌದು ನಿನ್ನೆಯಷ್ಟೇ ರವಿ ಬೋಪಣ್ಣ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ನಟ ಜಗ್ಗೇಶ್, ಕಿಚ್ಚ ಸುದೀಪ್, ಮೋಹನ್ ನಟ ಶರಣ್ ಹಾಗೆ ಡಾಲಿ ಧನಂಜಯ್ ಅವರು ಕೂಡ ಆಗಮಿಸಿದ್ದರು ಎನ್ನಲಾಗಿದೆ. ರವಿ ಬೋಪಣ್ಣ ಸಿನಿಮಾದ ಮೇಲೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗೆ ಮತ್ತೊಮ್ಮೆ ನಟಿ ರಮ್ಯಾ ಕೃಷ್ಣ ರವಿಚಂದ್ರನ್ ಅವರ ಜಾಗೆ ತೆರೆಯನ್ನು ಹಂಚಿಕೊಳ್ಳುತ್ತಿದ್ದು ಇವರಿಬ್ಬರ ಅಭಿನಯ ನೋಡಲು ತುಂಬಾ ಕಾತುರದಿಂದ ಎಲ್ಲಾ ಅಭಿಮಾನಿಗಳು ಕಾಯುತ್ತಿದ್ದಾರೆ ಎನ್ನಬಹುದು. ಮಾಸ್ಟರ್ ಆನಂದ್ ಅವರು ನಿನ್ನೆ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ನಡೆಸಿಕೊಟ್ಟಿದ್ದು, ಸಾಕಷ್ಟು ನಟರು ಸಿನಿಮಾ ಬಗ್ಗೆ ಮತ್ತು ನಟ ರವಿಚಂದ್ರನ್ ಅವರ ಬಗ್ಗೆ ಮಾತನಾಡಿದರು     .

ಹೌದು, ಸಿನಿಮಾ ಬಗ್ಗೆ ಮಾತನಾಡಿದ ಜಗ್ಗೇಶ್ ರವಿಚಂದ್ರನ್ ಅವರ ಸಹಾಯಗಳನ್ನು ನೆನೆದಿದ್ದಾರೆ. ಇನ್ನೊಂದು ಕಡೆ ಆ ಕಾಲದಲ್ಲಿ ನಡೆದ ಕೆಲವೊಂದಿಷ್ಟು ಘಟನೆಗಳ ಬಗ್ಗೆ ವಿವರಣೆ ನೀಡಿ ಕಲಾವಿದರನ್ನು ನಟ ರವಿಚಂದ್ರನ್ ಅವರು ಹೇಗೆ ನೋಡಿಕೊಳ್ಳುತಿದ್ದರು ಎಂಬುದಾಗಿ ಎಲ್ಲಾ ಬಿಚ್ಚಿಟ್ಟಿದ್ದಾರೆ. ಇವರ ಸಿನಿಮಾದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರನ್ನು ನಟ ರವಿಚಂದ್ರನ್ ಅವರು ಯಾವ ರೀತಿ ನೋಡುತ್ತಿದ್ದರು, ಹಾಗೆ ಅವರಿಗೆ ಆ ಕಾಲದಲ್ಲೇ ಅದೆಷ್ಟು ಹಣ ಪೇಮೆಂಟ್ ಮಾಡುತ್ತಿದ್ದರು ಎಂಬುದಾಗಿ ಹೇಳಿದ್ದಾರೆ. ಆಗಿನ ಕಾಲದಲ್ಲಿ ಅನ್ನವನ್ನು ರವಿಚಂದ್ರನ್ ಯಾವ ರೀತಿ ಉಣಬಡಿಸಿ ಹೆಚ್ಚು ಗಮನ ಸೆಳೆದಿದ್ದರು ಎಂದು ಜಗ್ಗೇಶ್ ಹೇಳಿದ್ದಾರೆ.  ಅಂದಿನ ಕಾಲಕ್ಕೆ 250 ರೂಪಾಯಿ ಸಿಕ್ಕರೆ ಸಾಕಿತ್ತಂತೆ ಒಳ್ಳೆಯ ಜೀವನ ನಡೆಸಲು, ಅಂತಹ ಕಾಲದಲ್ಲಿ ಸಿನಿಮಾ ಒಂದರಲ್ಲಿ ಕೆಲಸ ಮಾಡಿದ ಜಗ್ಗೇಶ್ ಹಾಗೂ ಪ್ರತಿಯೊಬ್ಬರಿಗೂ ಕೂಡ 15000 ಕೊಟ್ಟಿದ್ದರಂತೆ ರವಿಚಂದ್ರನ್.

ಈಶ್ವರಿ ಪ್ರೊಡಕ್ಷನ್ ಅಡಿಯಲ್ಲಿ ಇನ್ನು ಏನನ್ನೆಲ್ಲ ಆಯಿತು ರವಿಚಂದ್ರನ್ ಅವರು ಯಾವ ರೀತಿ ಸಿನಿಮಾ ಕುರಿತು ಕೆಲಸ ಮಾಡುತ್ತಿದ್ದರು. ಈ ವಿಡಿಯೋ ಮೂಲಕ ಜಗ್ಗೇಶ್ ಅವರು  ಹೇಳಿಕೊಂಡಿದ್ದಾರೆ. ನೀವು ಕೂಡ ಒಮ್ಮೆ ಈ ವಿಡಿಯೋ ನೋಡಿ. ಹಾಗೆ ರವಿ ಬೋಪಣ್ಣ ಚಿತ್ರ ತಂಡಕ್ಕೆ ಶುಭವಾಗಲಿ ಎಂದು ಹರಸಿ, ವಿಡೀಯೋ ಶೇರ್ ಮಾಡಿ ಧನ್ಯವಾದಗಳು...