ವಂಚಕ ಸೋನು ಸೂದ್ ಎಂಬ ಟ್ವೀಟ್ ಗೆ ಕಂಗನಾ ರನೌತ್ ಲೈಕ್ ಮಾಡಿದ್ದು ಯಾಕೆ ಗೊತ್ತಾ..?

Updated: Tuesday, May 4, 2021, 15:35 [IST]

ದೇಶದಲ್ಲಿ ಭಾರತದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಅಪ್ಪಳಿಸಿದೆ. ಇದರಿಂದ ಜನ ಅಕ್ಷರಶಃ ನಲುಗುತ್ತಿದ್ದಾರೆ. ಹೊಸ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಬೆಡ್ ಇಲ್ಲದೆ, ಆಕ್ಸಿಜನ್ ಸಿಗದೆ ಜನ ನರಳುತ್ತಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಬಾಲಿವುಡ್ ನಟ ಸೋನು ಸೂದ್ ಸಹಾಯ ಹಸ್ತ ಚಾಚಿದ್ದಾರೆ. ಈ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಸಹಾಯ ಮಾಡಿದ್ರೂ ಕೆಲ ಜನ ಅವರ ಬಗ್ಗೆ ಮಾತನಾಡೋದನ್ನ ಬಿಡೋದಿಲ್ಲ.  

ಸೋನು ಸೂದ್ ಸದ್ಯ ಆಕ್ಸಿಜನ್ ಕಾನ್ಸನ್ಟ್ರೇಟಿಂಗ್ ಮಷೀನ್ಗಳ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಈ ಬ್ರ್ಯಾಂಡ್ಗೆ ಸೋನು ಸೂದ್ 2020ರಿಂದ ಪ್ರಚಾರ ನೀಡುತ್ತಿದ್ದಾರೆ. ಇದರ ಫೋಟೋಗಳನ್ನು ಟ್ವೀಟಿಗರೊಬ್ಬರು ಹಂಚಿಕೊಂಡಿದ್ದರು. ಜಾಹೀರಾತಿನ ಫೋಟೋಗಳ ಜೊತೆಗೆ 'ಆಕ್ಸಿಜನ್ ಕಾನ್ಸನ್ಟ್ರೇಟರ್ ಬೆಲೆ 2 ಲಕ್ಷ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಹಣ ಮಾಡುತ್ತಿರುವ ವಂಚಕ ಸೋನು ಸೂದ್' ಎಂದು ಟ್ವೀಟ್ ಮಾಡಿದ್ದರು. 

ಈ ಟ್ವೀಟ್ನಿಂದ ದೊಡ್ಡ ವಿವಾದ ಸೃಷ್ಟಿಯಾಗಿದ್ದು, ಸೋನು ಸೂದ್ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಇದರ ನಡುವೆ ಈ ಟ್ವೀಟ್ ಅನ್ನು ಬಾಲಿವುಡ್ ನಟಿ ಕಂಗನಾ ರನೌತ್ ಲೈಕ್ ಮಾಡಿದ್ದಾರೆ. ಈ ಮೂಲಕ ಕಂಗನಾ, ಸೋನು ಸೂದ್ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 
ಇನ್ನು ಕಳೆದ ವರ್ಷವೂ ಲಾಕ್ಡೌನ್ ಆದಾಗಲೂ ಸೋನು ಸೂದ್ ಸಹಾಯ ಹಸ್ತ ಚಾಚಿದ್ದರು. ಸೋನು ಸೂದ್ ಕಾರ್ಯಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಮೆಚ್ಚುಗೆ ಪಾತ್ರವಾಗಿದೆ.