ಜ್ಯೂಸ್ ನಲ್ಲಿ ಮತ್ತಿನ ಔಷಧಿ ಹಾಕಿ ಕನ್ನಡ ನಟಿಯ ಮೇಲೆ ಬಲಾತ್ಕಾರ

Updated: Monday, July 6, 2020, 11:56 [IST]

ಜ್ಯೂಸ್ ನಲ್ಲಿ ಮತ್ತಿನ ಔಷಧಿ ಹಾಕಿ ಕನ್ನಡ ನಟಿಯ ಮೇಲೆ  ಬಲಾತ್ಕಾರ 
ಕನ್ನಡದ ನಟಿಯ ಮೇಲೆ ಜ್ಯೂಸಿನಲ್ಲಿ ಮತ್ತಿನ ಔಷಧಿ ಹಾಕಿ  ಬಲಾತ್ಕಾರ  ಮಾಡಿದ ಘಟನೆ ನಡೆದಿದೆ. ನಟಿ ಈ ಬಗ್ಗೆ ಪೋಲಿಸ್ ದೂರು ನೀಡಿದ್ದಾರೆ. ಆರೋಪಿ ಕಂಪನಿಯ ಸಿಇಓ ಆಗಿದ್ದು ತಲೆ ಮರೆಸಿಕೊಂಡಿದ್ದಾನೆ. 

 

Advertisement

ಮೋಹಿತ್ ಆರೋಪಿಯ ಹೆಸರು. ಈತ ಕಾರ್ ಕಂಪನಿಯ ಸಿಇಓ ಎಂದು ನಟಿಗೆ ಪರಿಚಯ ಮಾಡಿಸಿಕೊಂಡಿದ್ದ. ನಂತರ ಪರಿಚಯದಿಂದ ಆತ ಕಾರ್ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಮಾಡುತ್ತೇನೆ ಎಂದು ಆಸೆ ಹುಟ್ಟಿಸಿದ್ದ. ಇದರಿಂದ ಇಬ್ಬರಿಗೂ ಸಲುಗೆ ಬೆಳೆಯಿತು. ಮೋಹಿತ್ ತನ್ನ ಹುಟ್ಟು ಹಬ್ಬವನ್ನು ನಟಿಯ ಮನೆಯಲ್ಲೇ ಮಾಡಿದ್ದ. ಅಂದು ಪಾರ್ಟಿಯ ರಾತ್ರಿ ನಟಿಗೆ ಜ್ಯೂಸಿನಲ್ಲಿ ಮತ್ತಿನ ಔಷಧಿ ಹಾಕಿ ಕೊಟ್ಟಿದ್ದ. ನಂತರ  ಬಲಾತ್ಕಾರ ಎಸಗಿದ್ದ. ಬೆಳಿಗ್ಗೆ ಅವರಿಗೆ ತಾನು ನಿನಗೆ  ಬಲಾತ್ಕಾರ  ಮಾಡಿದ್ದೇನೆ. ಇದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದೇನೆ ಎಂದು ಹೆದರಿಸಿದ್ದ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಹೆದರಿಸಿ ಅವರಿಂದ ಇಪ್ಪತ್ತು ಲಕ್ಷ ಹಣವನ್ನು ವಸೂಲಿ ಮಾಡಿದ್ದ ಎಂದು ನಟಿ ದೂರಿದ್ದಾರೆ.

 
ಆರೋಪಿ ಮೋಹಿತ್ ಈಗಲೂ ವಿಡಿಯೋ ತೋರಿಸಿ ಬ್ಲಾಕ್‍ಮೇಲ್ ಮಾಡುತ್ತಿದ್ದಾನೆ ಎಂದು ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ನಟಿ ದೂರು ದಾಖಲಿಸಿದ್ದಾರೆ. ನಟಿ ದೂರು ನೀಡಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.